Published on: March 13, 2023

ಚುಟುಕು ಸಮಾಚಾರ–13 ಮಾರ್ಚ್ 2023

ಚುಟುಕು ಸಮಾಚಾರ–13 ಮಾರ್ಚ್ 2023

  • ಧಾರವಾಡದಲ್ಲಿ ಸುಮಾರು 535 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ, ಭಾರತದ ಪ್ರಥಮ ಹಸಿರು ಐಐಟಿ ಖ್ಯಾತಿಯ, ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು. ದೇಶದಲ್ಲಿ 2016ರಲ್ಲಿ ಘೋಷಣೆ ಮಾಡಿದ 3ನೇ ಜನರೇಶನ್ 6 ಐಐಟಿಗಳಲ್ಲಿ ಧಾರವಾಡ ಕೂಡ ಒಂದು.
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ 118 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯನ್ನು ಪ್ರಧಾನಿ ಮೋದಿ ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದಾರೆ. ‘ಬೆಂಗಳೂರು – ಮೈಸೂರು ದಶಪಥ ಎಕ್ಸ್‌ಪ್ರೆಸ್ ವೇ ಮಾರ್ಗವು ಅತ್ಯಂತ ಪ್ರಮುಖ ಸಂಪರ್ಕ ಯೋಜನೆಯಾಗಿದ್ದು, ಈ ಯೋಜನೆಯು ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದ. ‘ಎಕ್ಸ್‌ಪ್ರೆಸ್‌ವೇ ಆರಂಭದಿಂದಾಗಿ ಮೈಸೂರಿಗೆ ಆಗಮಿಸುವ ದೇಶ, ವಿದೇಶಗಳ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ.
  • ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ಶ್ರೀ ಸಿದ್ದಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಹುಬ್ಬಳ್ಳಿಯಲ್ಲಿ ಈ ಹೊಸ ರೈಲು ಪ್ಲಾಟ್​ಫಾರಂ ನಂತರ 1,366 ಮೀಟರ್ ಉದ್ದದ ಗೋರಖ್‌ಪುರ ರೈಲು ನಿಲ್ದಾಣವನ್ನು ಇದು ಹಿಂದಿಕ್ಕಲಿದೆ.
  • ನಿಸಾರ್ ಮಿಷನ್ ಎಂಬುದು ಒಂದು ಉಪಗ್ರಹ ಯೋಜನೆ. ಇದನ್ನು ಭಾರತದ ಇಸ್ರೋ ಹಾಗೂ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಜಂಟಿಯಾಗಿ ನಿರ್ಮಿಸಿದೆ. 2014ರಲ್ಲಿ ನಾಸಾ ಮತ್ತು ಇಸ್ರೋಗಳು ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರನ್ವಯ ಜಂಟಿಯಾಗಿ ನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಅನ್ನು ನಿರ್ಮಿಸಿವೆ. ಈ ಲೋ ಅರ್ತ್ ಆರ್ಬಿಟ್ (ಎಲ್ಇಒ) ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜನವರಿ 2024ರಲ್ಲಿ ಉಡಾವಣೆಗೊಳ್ಳಲಿದೆ.
  • ದೇಶದಲ್ಲಿ ಇದೇ ಮೊದಲ ಬಾರಿಗೆ 80ಕ್ಕಿಂತ ಹೆಚ್ಚು ವರ್ಷ ವಯಸ್ಸಿನ ಹಾಗೂ ವಿಶೇಷ ಚೇತನ ಮತದಾರರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಅಪೇಕ್ಷಿತರು 5 ದಿನಕ್ಕೂ ಮೊದಲೇ ನೋಂದಾಯಿತರಾಗಬೇಕು.
  • ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿದ್ದವು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಕಾರ್ಯಕ್ರಮದ ನಿರೂಪಣೆ ಮಾಡಿರುವುದು ವಿಶೇಷ. ಆಸ್ಕರ್ ಪ್ರಶಸ್ತಿಯ ಟ್ರೋಫಿ ಜೊತೆ, ಉಡುಗೊರೆಯ ರೂಪದಲ್ಲಿ ಪ್ರವಾಸ ಪ್ಯಾಕೇಜ್ ಗಳು ವಿಜೇತರಿಗೆ ಸಿಗುತ್ತವೆ. ಕೇವಲ ಪ್ರಶಸ್ತಿ ಗೆದ್ದವರಿಗೆ ಮಾತ್ರವಲ್ಲ, ನಾಮ ನಿರ್ದೇಶನಗೊಂಡವರಿಗೆ ಉಡುಗೊರೆ ಇರಲಿದೆ. ಪೀಸೆಸ್ ಆಫ್ ಆಸ್ಟ್ರೇಲಿಯಾ ಹೆಸರಿನ ಕಂಪೆನಿಯೊಂದು ನಾಮ ನಿರ್ದೇಶನಗೊಂಡವರಿಗೆ ಆಸ್ಟ್ರೇಲಿಯಾದಲ್ಲಿ ಒಂದು ಚದರ ಮೀಟರ್ ಭೂಮಿ ಕೊಡಲು ಮುಂದಾಗಿದೆಯಂತೆ
  • ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್’ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಡಾಕ್ಯುಮೆಂಟರಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್  ನಿರ್ದೇಶನ ಮಾಡಿದ್ದಾರೆ. ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ ಪಾತ್ರವಾಗಿದೆ. ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಕ್ಷಿಣ ಭಾರತೀಯ ದಂಪತಿಯ ಕಥೆಯನ್ನು ‘ಡಾಕ್ಯುಮೆಂಟರಿಯು ಹೊಂದಿದೆ. ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿಗೆ ನಿರ್ದೇಶನ ಮಾಡಿರುವ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮೂಲತಃ ತಮಿಳುನಾಡಿನ ಊಟಿಯವರು. ಡಾಕ್ಯುಮೆಂಟರಿ ಫಿಲ್ಮ್‌ ಮೇಕರ್ ಆಗಿರುವ ಕಾರ್ತಿಕಿ, ಉತ್ತಮ ಫೋಟೋಗ್ರಾಫರ್ ಕೂಡ ಹೌದು. ಈ ಹಿಂದೆ ಕ್ಯಾಮೆರಾ ಅಪರೇಟರ್ ಆಗಿ ಅನಿಮಲ್ ಪ್ಲಾನೆಟ್ ಮತ್ತು ಡಿಸ್ಕವರಿ ಚಾನೆಲ್‌ಗಳಿಗೆ ಕಾರ್ತಿಕಿ ಕೆಲಸ ಮಾಡಿದ್ದಾರೆ.
  • ಇಂಡೋನೇಷ್ಯಾದ ರಾಜಧಾನಿಯನ್ನು ಬೊರ್ನಿಯೊ ದ್ವೀಪಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಹಾಲಿ ರಾಜಧಾನಿ ಜಕಾರ್ತದಲ್ಲಿ ಜನದಟ್ಟಣೆ, ಮಾಲಿನ್ಯ ಹೆಚ್ಚಳವಾಗಿದ್ದು, ಹೆಚ್ಚು ಭೂಕಂಪಗಳಿಗೆ ತುತ್ತಾಗಿ, ಕ್ಷಿಪ್ರಗತಿಯಾಗಿ ಜಾವಾ ಸಮುದ್ರಕ್ಕೆ ಮುಳುಗುವ ಭೀತಿ ಇದ್ದ ಹಿನ್ನೆಲೆಯಲ್ಲಿ ಇಂಡೋನೇಷ್ಯಾ 2022 ರ ಮಧ್ಯಭಾಗದಲ್ಲಿ ಹೊಸ ರಾಜಧಾನಿ ನಿರ್ಮಾಣ ಆರಂಭಿಸಿತ್ತು