Published on: September 13, 2021

ಸುದ್ಧಿ ಸಮಾಚಾರ 13 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 13 ಸೆಪ್ಟೆಂಬರ್ 2021

  • ಜವಳಿ ಸಚಿವಾಲಯವು ಮುಂದಿನ ಮೂರು ವರ್ಷಗಳಲ್ಲಿ 1,000 ಎಕರೆಗೂ ಹೆಚ್ಚಿನ ಪ್ರದೇಶಗಳಲ್ಲಿ 7 ಮೆಗಾ ಜವಳಿ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದೆ. ಕೇಂದ್ರ ಸಚಿವ ಸಂಪುಟವು ಜವಳಿ ವಲಯಕ್ಕೆ ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆಯನ್ನು (ಪಿಎಲ್ಐ) ವಿಸ್ತರಿಸಲು ಸಮ್ಮತಿಸಿದೆ. ದೇಶದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ಭಾರಿ ಯಶಸ್ಸಿಗೆ ಕಾರಣವಾಗಿರುವ ಪಿಎಲ್ಐ ಯೋಜನೆ ಇದೀಗ ಜವಳಿ, ಗಾರ್ಮೆಂಟ್ಸ್ ವಲಯಕ್ಕೂ ವಿಸ್ತರಿಸಿದಂತಾಗಿದೆ.
  • ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಭಾರಿ ಏರಿಕೆ ದಾಖಲಾಗಿದ್ದು, 50 ಲಕ್ಷ ಕೋಟಿ ರೂ.ನತ್ತ ಮುಖ ಮಾಡಿದೆ. ವಿದೇಶಿ ವಿನಿಮಯ ಮೀಸಲು ಎಂದರೆ ಕೇಂದ್ರೀಯ ಬ್ಯಾಂಕು ವಿದೇಶಿ ಕರೆನ್ಸಿಗಳಲ್ಲಿ ಕಾಯ್ದಿರಿಸಿರುವ ಸ್ವತ್ತುಗಳು, ಇದರಲ್ಲಿ ಬಾಂಡ್ಗಳು, ಖಜಾನೆ ಬಿಲ್ಗಳು ಮತ್ತು ಇತರ ಸರ್ಕಾರಿ ಭದ್ರತೆಗಳು ಸೇರಿವೆ.
  • ಭದ್ರತೆ ಕುರಿತ ಸಚಿವ ಸಂಪುಟ ಸಮಿತಿಯು (ಸಿಸಿಎಸ್) ಟಾಟಾ ಮತ್ತು ಏರ್ಬಸ್ ಕಂಪನಿ ಜಂಟಿಯಾಗಿ ಉತ್ಪಾದಿಸಲಿರುವ ನೂತನ ಸಿ 295 ಎಂಡಬ್ಲ್ಯೂ ಮಿಲಿಟರಿ ಲಘು ವಿಮಾನಗಳನ್ನು ಖರೀದಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಖಾಸಗಿ ವಲಯದಿಂದ ಇದು ಮೊದಲ ಮಹತ್ವದ ಮಿಲಿಟರಿ ಡೀಲ್ ಆಗಿರುವುದು ವಿಶೇಷ.
  • ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಐದು ಸದಸ್ಯರ ಗುಂಪಿನ ಅಧ್ಯಕ್ಷತೆ ವರ್ಷಕ್ಕೆ ಒಂದು ಬಾರಿ ಬದಲಾಗುತ್ತದೆ. ಈ ಬಾರಿ ಭಾರತ ಅಧ್ಯಕ್ಷತೆ ವಹಿಸಿತ್ತು. ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ಅವರು ಎರಡನೇ ಬಾರಿಗೆ ವಹಿಸಿದ್ದರು. ಈ ಹಿಂದೆ ಮೋದಿ 2016ರಲ್ಲಿ ಗೋವಾ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದರು. 14ನೇ ಬ್ರಿಕ್ಸ್ ಶೃಂಗಸಭೆಯನ್ನು ಮುಂದಿನ ವರ್ಷ ಚೀನಾ ಆಯೋಜಿಸುತ್ತಿದೆ.
  • ರಷ್ಯಾದ ಡೆನಿಲ್ ಮೆಡ್ವೆಡೆವ್ ಅವರು ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಮಣಿಸುವ ಮೂಲಕ ವೃತ್ತಿ ಜೀವನದ ಮೊದಲ ಗ್ರ್ಯಾನ್ ಸ್ಲಾಮ್ ಮುಡಿಗೇರಿಸಿಕೊಂಡಿದ್ದಾರೆ.
  • ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಎಮಾ ರಾಡುಕಾನು, ನೇರ ಸೆಟ್ಗಳ ಅಂತರದಲ್ಲಿ ಇದೇ ಮೊದಲ ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯ ಫೈನಲ್ ತಲುಪಿದ್ದ ಕೆನಡಾದ 19 ವರ್ಷದ ಆಟಗಾರ್ತಿ ಲೈಲಾ ಫರ್ನಾಂಡಿಸ್ ಅವರನ್ನು ಮಣಿಸಿದರು.