Published on: June 14, 2024

ಚುಟುಕು ಸಮಾಚಾರ :14 ಜೂನ್ 2024

ಚುಟುಕು ಸಮಾಚಾರ :14 ಜೂನ್ 2024

  • ಮೂರನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್(ಸ್ಪೇನ್) ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್(ಜರ್ಮನಿ) ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮೂರು ಮಾದರಿಗಳ ಕೋರ್ಟ್ನಲ್ಲಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಕಿರಿವಯಸ್ಸಿನ ಆಟಗಾರ ಎಂಬ ಹಿರಿಮೆಗೆ ಪಾತ್ರವಾದರು. ಮಹಿಳೆಯರ ಸಿಂಗಲ್ಸ್ ವಿಜೇತರು: ಇಗಾ ಶ್ವಾಂಟೆಕ್(ಪೋಲೆಂಡ್), ರನ್ನರ್ ಅಪ್: ಕೊಕೊ ಗಾಫ್(ಅಮೆರಿಕ)
  • ಅಂತರ್ಜಲದಲ್ಲಿ ಮಿಳಿತವಾಗಿರುವ ಮತ್ತು ಮಾನವ ದೇಹಕ್ಕೆ ಅತ್ಯಂತ ಅಪಾಯಕಾರಿ ಎನಿಸಿರುವ ಭಾರಲೋಹದ ಅಂಶ (ಆರ್ಸೆನಿಕ್) ಬೇರ್ಪಡಿಸುವ ಹೊಸ ಪರಿಹಾರ ವಿಧಾನವೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಜೈವಿಕ ನಿರ್ಜಲೀಕರಣ ವಿಧಾನಕ್ಕೆ ಹಸುವಿನ ಸಗಣಿಯಲ್ಲಿ ಸಿಗುವ ಒಂದು ಬಗೆಯ ಬ್ಯಾಕ್ಟೀರಿಯಾ ಬಳಸಲಾಗುತ್ತದೆ.
  • ಬೆಂಗಳೂರು ನಗರವನ್ನು ಹಸಿರಾಗಿಡಲು ‘ಬ್ಲೂ ಗ್ರೀನ್ ಊರು’ ಎಂಬ ಅಭಿಯಾನ ಆರಂಭಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಡಲು ಸಿದ್ಧತೆ ಮಾಡಲಾಗಿದೆ. ಜೊತೆಗೆ ಕ್ರೈಮೆಟ್ ಆ್ಯಕ್ಷನ್ ಸೆಲ್ ಕೂಡ ರಚಿಸಲಾಗಿದೆ. ಏನಿದು ಅಭಿಯಾನ? ಶಾಲಾ ಮಕ್ಕಳು ತಮ್ಮ ಪ್ರದೇಶದಲ್ಲಿ ಗಿಡ ನೆಟ್ಟು ಬೆಳೆಸುವ ಹಸಿರು ರಕ್ಷಕ ಕಾರ್ಯಕ್ರಮವನ್ನು 2023ರಲ್ಲಿ ಅನಾವರಣ ಮಾಡಲಾಗಿತ್ತು. ಈ ಕಾರ್ಯಕ್ರಮದ ಭಾಗವಾಗಿ ಈ ವರ್ಷ ಹೆಚ್ಚಿನ ಶಾಲೆಗಳನ್ನು ಸೇರಿಸಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ.
  • ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ (ಎನ್ಎಸ್ಎ)ಮಾಜಿ ಐಪಿಎಸ್ ಅಧಿಕಾರಿ ಅಜಿತ್ ದೋವಲ್ ಅವರನ್ನು ಮರುನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯವು ಆದೇಶ ಹೊರಡಿಸಿದೆ. ಸತತ ಮೂರನೇ ಅವಧಿಗೆ ದೋವಲ್ ಅವರು ಎನ್ಎಸ್ಎ ಆಗಿ ನೇಮಕವಾಗಿದ್ದಾರೆ. ಅಧಿಕಾರಾವಧಿ ವೇಳೆ ದೋವಲ್ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
  • ಸಂಗೀತ ಲೋಕದ ವಿಶ್ವ ಶ್ರೇಷ್ಠ ಸರೋದ್ ವಾದಕ ಪದ್ಮಶ್ರೀ ಪುರಸ್ಕೃತ, ಉಸ್ತಾದ್ ಆಲಿ ಅಕ್ಬರ್ ಖಾನ್ ಅವರ ಶಿಷ್ಯ ಪಂಡಿತ್ ರಾಜೀವ್ ತಾರಾನಾಥ್ ನಿಧನ ಹೊಂದಿದ್ದಾರೆ.

ರಾಜೀವ್ ತಾರಾನಾಥ್

  • ಜನನ: ರಾಯಚೂರಿನ ತುಂಗಭದ್ರ ಗ್ರಾಮದಲ್ಲಿ 1932ರ ಅಕ್ಟೋಬರ್ 17.
  • ತಂದೆ ತಾಯಿ: ತಾರಾನಾಥ– ಸುಮತಿಬಾಯಿ.
  • ಸಿಡ್ನಿಯ ಒಪೇರಾ ಹೌಸ್ನಲ್ಲಿ ಸಂಗೀತ ಕಛೇರಿ ನೀಡಿದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
  • ಯೆಮನ್ ದೇಶದ ಏಡನ್ ದೂರದರ್ಶನ ಕೇಂದ್ರ ಅವರ ಬಗ್ಗೆ ‘ಫಿನ್ನನ್ ಮಿನ್ ಅಲ್ ಹಿಂದ್’ ಸಾಕ್ಷ್ಯ ಚಿತ್ರ ನಿರ್ಮಿಸಿ ಗೌರವಿಸಿದೆ.
  • ಕರ್ನಾಟಕ ಸರ್ಕಾರವೂ 1983ರಲ್ಲಿ ‘ಸರೋದ್ ಸಾಮ್ರಾಟ ಡಾ.ರಾಜೀವ ತಾರನಾಥ’ ಸಾಕ್ಷ್ಯ ಚಿತ್ರ ತಯಾರಿಸಿದೆ.
  • 1995ರಿಂದ 2005ರವರೆಗೆ ಕ್ಯಾಲಿಫೋರ್ನಿಯಾ ವಿವಿಯ ಕಲಾವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.
  • ಇತ್ತೀಚಿಗೆ ನಡೆದ ಪ್ರಧಾನಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಏಷ್ಯಾದ ಮೊದಲ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಭಾಗವಹಿಸಿದ್ದರು. ಪಶ್ಚಿಮ ಮಹಾರಾಷ್ಟ್ರದ ಸತಾರ ಮೂಲದವರಾದ ಸುರೇಖಾ ಅವರು ಲೋಕೋ ಪೈಲೆಟ್ ಆಗಿ 1988ರಲ್ಲಿ ರೈಲ್ವೆ ಇಲಾಖೆ ಸೇರಿದ್ದರು. ಹೀಗಾಗಿ ಅವರು ಏಷ್ಯಾದಲ್ಲೇ ಮೊದಲ ಲೊಕೊ ಪೈಲೆಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ ಮುಂಬೈನ ಸೊಲ್ಲಾಪುರ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವಿನ ಸೆಮಿ ಹೈಸ್ಪೀಡ್ ರೈಲನ್ನು ಚಲಾಯಿಸಿದ ದೇಶದ ಮೊದಲ ಮಹಿಳಾಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
  • ಬಾರ್ಟನ್ ಪ್ರಶಸ್ತಿ: ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆ ನೀಡುವ 2024ನೇ ಸಾಲಿನ ‘ಬಾರ್ಟನ್ ಜೀವಮಾನ ಸಾಧನೆ ಪ್ರಶಸ್ತಿ’ಗೆ ವ್ಯಂಗ್ಯ ಚಿತ್ರಕಾರ ಕೇಶವ್ ವೆಂಕಟರಾಘವನ್ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಬೆಳ್ಳಿ ಸ್ಮರಣಿಕೆಯನ್ನು ಒಳಗೊಂಡಿದೆ. 1961ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಕೇಶವ್ ವೆಂಕಟರಾಘವನ್ ಅವರು, ಹೈದರಾಬಾದ್, ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 1982ರಲ್ಲಿ ತಮಿಳು ಪತ್ರಿಕೆ ‘ಆನಂದ್ ವಿಕಟನ್’ಗಾಗಿ ಸಂಗೀತ ಸಾಧಕರ ಚಿತ್ರಗಳನ್ನು ಬರೆಯಲು ಆರಂಭಿಸಿದರು. ಮುಂದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯಂಗ್ಯ ಚಿತ್ರಕಾರರಿಂದ ಪ್ರೇರಣೆಗೊಂಡು ‘ರಾಜಕೀಯ ವ್ಯಂಗ್ಯಚಿತ್ರ’ ಬರೆಯಲು ಆರಂಭಿಸಿದರು. 1987ರಿಂದ 2019ರವರೆಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.