Published on: December 14, 2022

ಚುಟುಕು ಸಮಾಚಾರ – 14 ಡಿಸೆಂಬರ್ 2022

ಚುಟುಕು ಸಮಾಚಾರ – 14 ಡಿಸೆಂಬರ್ 2022

  • ಆಸ್ತಿ ನೋಂದಣಿಯಿಂದ, ಮದುವೆ ನೋಂದಣಿಯವರೆಗೆ ದೆಹಲಿಯಲ್ಲಿ ಇನ್ನು ಮುಂದೆ ಎಲ್ಲಾ ಸಬ್- ರಿಜಿಸ್ಟ್ರಾರ್‌ ಹುದ್ದೆಗಳಲ್ಲೂ ಮಹಿಳೆಯರೇ ಇರಲಿದ್ದಾರೆ. ಮಹಿಳೆಯರನ್ನಷ್ಟೇ ನೇಮಕ ಮಾಡುವಂತೆ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಸೂಚಿಸಿದ್ದಾರೆ. ಈ ಕ್ರಮದಿಂದಾಗಿ ದೆಹಲಿ ಸರ್ಕಾರದ ಕಂದಾಯ ಇಲಾಖೆಯಲ್ಲಿರುವ ಎಲ್ಲಾ 22 ಸಬ್- ರಿಜಿಸ್ಟ್ರಾರ್‌ ಸ್ಥಾನಗಳಿಗೂ (ಎಸ್‌ಆರ್‌ಗಳು) ಮಹಿಳಾ ಅಧಿಕಾರಿಗಳು ನೇಮಕವಾಗಲಿದ್ದಾರೆ. ಉದ್ದೇಶ :ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ, ಪಕ್ಷಪಾತ ಮತ್ತು ಜನರಿಗೆ ಕಿರುಕುಳ ತಪ್ಪಿಸಲು ಮಹಿಳಾ ಅಧಿಕಾರಿಗಳ ನೇಮಕ ನೆರವಾಗಲಿದೆ.
  • ಪಳೆಯುಳಿಕೆಯೇತರ ಇಂಧನ ಮೂಲಗಳಾದ ಬಯೋಮಾಸ್, ಇಥೆನಾಲ್ ಮತ್ತು ಹಸಿರು ಹೈಡ್ರೋಜನ್ ಬಳಕೆಯನ್ನು ಕಡ್ಡಾಯಗೊಳಿಸುವ ಇಂಧನ ಸಂರಕ್ಷಣಾ ಮಸೂದೆ (ತಿದ್ದುಪಡಿ)–2022ಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. 2001 ರ ಇಂಧನ ಸಂರಕ್ಷಣಾ ಕಾಯಿದೆಯು ಇಂಧನ ಉಳಿತಾಯದ ಬಗ್ಗೆ ವ್ಯವಹರಿಸಿದರೆ, ಪ್ರಸ್ತುತ ಮಸೂದೆಯು ಪರಿಸರವನ್ನು ಉಳಿಸುವ ಮತ್ತು ವಿದ್ಯುತ್ ಉತ್ಪಾದಿಸುವಾಗ ಪಳೆಯುಳಿಕೆ ಮತ್ತು ಪಳೆಯುಳಿಕೆಯಲ್ಲದ ಇಂಧನಗಳ ಬಳಕೆಯಿಂದ ಹವಾಮಾನ ಬದಲಾವಣೆಯನ್ನು ಸಂರಕ್ಷಿಸುವ ಬಗ್ಗೆ ವ್ಯವಹರಿಸುತ್ತದೆ.
  • ವಿದ್ಯಾರ್ಥಿಗಳು;ಆನರ್ಸ್; ಪದವಿಯನ್ನು (ಗೌರವ ಪದವಿ) ಪಡೆಯಲು ಮೂರರ ಬದಲಿಗೆ ನಾಲ್ಕು ವರ್ಷದ ಪದವಿಪೂರ್ವ ಕೋರ್ಸ್ ಪೂರ್ಣಗೊಳಿಸಬೇಕು ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ತಿಳಿಸಿದೆ. ನೂತನ ಶಿಕ್ಷಣ ನೀತಿಯನ್ವಯ (ಎನ್ಇಪಿ) ರೂಪಿಸಲಾದ ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮಗಳಿಗಾಗಿ ಪಠ್ಯಕ್ರಮ ಮತ್ತು ಕ್ರೆಡಿಟ್ ಫ್ರೇಮ್ವರ್ಕ್; ಎಂಬ ಕರಡಿನಲ್ಲಿ;ಯೂಜಿಸಿ ಈ ಹೊಸ ನಿಯಮವನ್ನು ಪರಿಚಯಿಸಿದೆ.
  • ಮೋಪಾ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣ :ಗೋವಾದಲ್ಲಿ ನೂತನವಾಗಿ ನಿರ್ಮಿಸಲಾದ ಮೋಪಾ ಅಂತಾರಾಷ್ಟ್ರೀ ಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು ‘ಮನೋಹರ್ ಅಂತಾರಾಷ್ಟ್ರೀ ಯ ವಿಮಾನ ನಿಲ್ದಾಣ, ಗೋವಾ’ ಎಂದು ನಾಮಕರಣ ಮಾಡಲಾಗಿದೆ.
  • 9 ನೇ ವಿಶ್ವ ಆಯುರ್ವೇದ ಕಾಂಗ್ರೆಸ್ (ಡಬ್ಲ್ಯುಎಸಿ) ಗೋವಾದ ಪಣಜಿಯಲ್ಲಿ ಉದ್ಘಾಟಿಸಲಾಯಿತು. ಸಾಂಪ್ರದಾಯಿಕ ಭಾರತೀಯ ಔಷಧ ವ್ಯವಸ್ಥೆಗಳಲ್ಲಿ ಮುಂದುವರಿದ ಅಧ್ಯಯನಕ್ಕೆ ಅನುಕೂಲವಾಗುವಂತೆ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) ಮತ್ತು ಜರ್ಮನಿಯ ರೋಸೆನ್ ಬರ್ಗ್ ನ ಯುರೋಪಿಯನ್ ಅಕಾಡೆಮಿ ಆಫ್ ಆಯುರ್ವೇದ ನಡುವೆ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA)-ಗೋವಾ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ (NIUM), ಗಾಜಿಯಾಬಾದ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೋಮಿಯೋಪತಿ (NIH), ದೆಹಲಿ ಸೇರಿದಂತೆ ಮೂರು ಆಯುಷ್ ಸಂಸ್ಥೆಗಳನ್ನು ಉದ್ಘಾಟಿಸಲಾಯಿತು.
  • ಪರೀಕ್ಷೆ ಉದ್ದೇಶದೊಂದಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಉಡ್ಡಯನ ಮಾಡಿದ್ದ ಒರಾಯನ್ ಗಗನನೌಕೆ ವ್ಯೋಮಯಾನವನ್ನು ಪೂರ್ಣಗೊಳಿಸಿ ಭೂಮಿಯತ್ತ ಮರುಳಿದೆ. 25 ದಿನಗಳ ತನ್ನ ವ್ಯೋಮಯಾನದ ವೇಳೆ, ಚಂದ್ರನ ಸುತ್ತ ತಿರುಗಿದ ಈ ಗಗನನೌಕೆ, ನಿಗದಿಯಂತೆ ಮೆಕ್ಸಿಕೊದ ಬಾಜಾ ದ್ವೀಪಕಲ್ಪ ಬಳಿ (ಪೆಸಿಫಿಕ್)ಸಮುದ್ರದಲ್ಲಿ ಇಳಿಯಿತು.