Published on: January 17, 2023

ಚುಟುಕು ಸಮಾಚಾರ – 17 ಜನವರಿ 2023

ಚುಟುಕು ಸಮಾಚಾರ – 17 ಜನವರಿ 2023

  • ರಾಷ್ಟ್ರೀಯ ಯುವ ದಿನದ ಅಂಗವಾಗಿ ರಾಜ್ಯಾದ್ಯಂತ ನಡೆದ ಯೋಗಥಾನ್ ಗಿನ್ನೀಸ್ ದಾಖಲೆ ಸೇರುವಲ್ಲಿ ಯಶಸ್ವಿಯಾಗಿದೆ.  ಯೋಗಥಾನ್ 2023 ಕರ್ನಾಟಕದ ಹೆಸರಿನಲ್ಲಿ ಗಿನ್ನೀಸ್ ದಾಖಲೆ ಸೇರಿದ್ದು, ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಏಕಕಾಲಕ್ಕೆ 4,05,255ಕ್ಕೂ ಮಂದಿ ಸೇರಿ ಯೋಗ ಮಾಡಿರುವುದು ಈ ಹಿಂದೆ ರಾಜಸ್ಥಾನದ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ. ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಯೋಗಥಾನ್ ನಡೆದ್ದಿದ್ದು, ಈ ಯೋಗಥಾನ್ ವಿಶ್ವದ ಅತಿ ದೊಡ್ಡ ಯೋಗಥಾನ್ ಎನಿಸಿದೆ. 2018 ರಲ್ಲಿ ರಾಜಸ್ಥಾನದಲ್ಲಿ ಏಕಕಾಲಕ್ಕೆ 1.60 ಲಕ್ಷ ಜನರು ಯೋಗ ಮಾಡಿದ್ದು ದಾಖಲೆಯಾಗಿತ್ತು.
  • ಪ್ರತಿ ಕುಟುಂಬಕ್ಕೆ ಮನೆ ನಿರ್ವಹಣೆ ಮಾಡುವ ಹೆಣ್ಣು ಮಕ್ಕಳಿಗಾಗಿ ಮುಂದಿನ ಬಜೆಟ್ ನಲ್ಲಿ ವಿಶೇಷ ಕಾರ್ಯಕ್ರಮವನ್ನು ನೀಡಲಾಗುವುದು. ಸ್ತ್ರೀ ಸಾಮರ್ಥ್ಯದ ಜೊತೆಗೆ ಸ್ತ್ರೀ ಶಕ್ತಿ ಯೋಜನೆಯಡಿ ಮನೆ ನಡೆಸಲು, ಕೋವಿಡ್ ಉಪಚಾರ, ಆರೋಗ್ಯ, ಮುಂತಾದವುಕ್ಕೆ ಸಹಾಯವಾಗುವ ವಿಶೇಷ ಯೋಜನೆ ಇದಾಗಿದೆ.
  • ಜನೆವರಿ 15, ಭಾರತೀಯ ಸೇನೆಯ 75ನೇ ಸೇನಾ ದಿನ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಿತು. ರಾಷ್ಟ್ರಕ್ಕೇ ನಿಸ್ವಾರ್ಥ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸಲಾಗುತ್ತದೆ. ಈ ದಿನವನ್ನು ಎಲ್ಲಾ ಸೇನಾ ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ಆಚರಣೆ ಮಾಡಲಾಯಿತು.1949ರ ಜನವರಿ 15ರಂದು ಬ್ರಿಟಿಷ್ ಉತ್ತರಾಧಿಕಾರಿಯನ್ನು ಬದಲಾಯಿಸಿ ಮೊದಲ ಬಾರಿಗೆ ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಅಧಿಕೃತವಾಗಿ ಅಧಿಕಾರವಹಿಸಿಕೊಂಡ ದಿನದ ಸಂಕೇತವಾಗಿದೆ.
  • ಪ್ರತಿ ವರ್ಷ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಪಕ್ಷಿ ದಿನವನ್ನು ಮೊದಲ ಬಾರಿಗೆ 2002 ರಲ್ಲಿ ಅಮೇರಿಕಾದ ಬಾರ್ನ್ ಫ್ರೀ ಯು ಎಸ್ಎ ಮತ್ತು ಏವಿಯನ್ ವೆಲ್ಪೇರ್ ಒಕ್ಕೂಟದಿಂದ ಆಚರಣೆ ಮಾಡಲಾಯಿತು. ವಾರ್ಷಿಕ ಕ್ರಿಸ್ಮಸ್ ಡೇ ಎಣಿಕೆಯು ಕೊನೆಯಾಗುವ ದಿನವಾದ ಜನವರಿ 5 ರಂದು ನ್ಯಾಷನಲ್ ಬರ್ಡ್ ಡೇ ಅನ್ನು ಆಚರಣೆ ಮಾಡಲಾಗುತ್ತದೆ.
  • ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ಬಂದರು ನಗರವಾದ ವಿಶಾಖಪಟ್ಟಣ ನಡುವಿನ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ ಇದು ಜೀವನ ಸೌಕರ್ಯವನ್ನು, ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ.