Published on: December 17, 2022

ಚುಟುಕು ಸಮಾಚಾರ – 17 ಡಿಸೆಂಬರ್ 2022

ಚುಟುಕು ಸಮಾಚಾರ – 17 ಡಿಸೆಂಬರ್ 2022

  • ರಾಜ್ಯದ ಗ್ರಾಮಗಳಲ್ಲಿ ಹಂತ ಹಂತವಾಗಿ ನ್ಯಾಯಾಲಯಗಳ ಸ್ಥಾಪಸಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. 2008 ರಲ್ಲಿ ಸಂಸತ್ತು ಈ ಸಂಬಂಧ ಕಾಯ್ದೆ ಅಂಗೀಕರಿಸಿತ್ತು. ಈ ಕಾಯ್ದೆ ಅಕ್ಟೋ ಬರ್ 2, 2009 ರಂದು ಜಾರಿಗೆ ಬಂದಿತು. ನಾಗರಿಕರಿಗೆ ಸರಿಯಾದ ನ್ಯಾಯ ಒದಗಿಸುವ ಉದ್ದೇ ಶದಿಂದ ಈ ಕಾಯ್ದೆ ಜಾರಿ ಮಾಡಲಾಗಿತ್ತು. ತಳಮಟ್ಟದಲ್ಲಿ ‘ಗ್ರಾಮ ನ್ಯಾಯಾಲಯ’ಗಳನ್ನು ಸ್ಥಾಪಿಸಿದರೆ ಸಾಮಾಜಿಕ, ಆರ್ಥಿಕ ಅಥವಾ ಇತರೆ ಕಾರಣಗಳಿಂದ ಸರಿಯಾದ ನ್ಯಾಯದಾನಕ್ಕೆ ಎಲ್ಲರೂ ಒಳಗಾಗುತ್ತಾರೆ ಎಂಬುದು ಈ ಕಾಯ್ದೆಯ ನಿಯಮವಾಗಿದೆ.
  • ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಅಭಿವೃದ್ಧಿಹಾಗೂ ಹೂಡಿಕೆಗೆ ಪೂರಕವಾಗುವ ಪಟ್ಟಣಗಳ ಯದ್ವಾತದ್ವಾ ಬೆಳವಣಿಗೆಗೆ ಕಡಿವಾಣ ಹಾಕಲು ನಗರಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ಯನ್ನು ರೂಪಿಸಲಾಗುತ್ತಿದೆ. ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಿಡಿಪಿ ರಚನೆ ಮಾಡಲಾಗುತ್ತದೆ.
  • ಗಡಿ ಮತ್ತು ಶೀತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಭಾರತೀಯ ವೀರ ಯೋಧರಿಗೆ ಬೆಚ್ಚಗಿರಲು ಹಾಗೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಮೂಲದ ರೇಷ್ಮೆ ಸಂಸ್ಥೆಯೊಂದು ರೇಷ್ಮೆ ಹೊದಿಕೆಯನ್ನು ಸಿದ್ಧಪಡಿಸುತ್ತಿದೆ.ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ನ ರೇಷ್ಮೆ ವಿಭಾಗ ಸಂಸ್ಥೆಯ ಸಂಶೋಧಕರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಜೊತೆಗೆ ಸೇರಿಕೊಂಡು ಯೋಧರಿಗೆ ರೇಷ್ಮೆ ಹೊದಿಕೆಯನ್ನು ಸಿದ್ಧಪಡಿಸುತ್ತಿದೆ.
  • ಪುರಾತನ ಸಂಸ್ಕೃತ ವಿದ್ವಾಂಸರಾದ ಪಾಣಿನಿ ಅವರ ಎರಡೂವರೆ ಸಾವಿರ ವರ್ಷಗಳಷ್ಟು ಹಳೆಯದಾದ ಪಠ್ಯವನ್ನು ಮುಂಬೈ ಮೂಲದ ಭಾರತೀಯ ವಿದ್ಯಾರ್ಥಿಯಾದ ರಿಷಿ ಅತುಲ್ ರಾಜ್‌ಪೋಪಟ್ ಡಿಕೋಡ್ ಮಾಡಿದ್ದಾರೆ. ರಾಜ್‌ಪೋಪಟ್ ಕೇಂಬ್ರಿಡ್ಜ್‌ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಏಷ್ಯನ್ ಮತ್ತು ಮಧ್ಯಪ್ರಾಚ್ಯ ವಿಭಾಗದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದಾರೆ.
  • ನಿರ್ಬಂಧ ಎದುರಿಸುತ್ತಿರುವ ರಾಷ್ಟ್ರಗಳಿಗೆ ಮಾನವೀಯ ನೆರವುಗಳಿಗೆ ವಿನಾಯಿತಿ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಿಂದ ಭಾರತ ಮತಚಲಾವಣೆ ಮಾಡದೇ ತಟಸ್ಥವಾಗಿ ಉಳಿದಿದೆ. 15 ರಾಷ್ಟ್ರಗಳ ಮಂಡಳಿಯಲ್ಲಿ ಭಾರತ ಅಧ್ಯಕ್ಷತೆ ವಹಿಸಿದೆ. ನಿರ್ಣಯವನ್ನು ಅಮೇರಿಕ ಹಾಗೂ ಐರ್ಲೇಂಡ್ ಗಳು ಮಂಡಿಸಿದ್ದವು, 14 ಸದಸ್ಯ ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಭಾರತ ಒಂದೇ ತಟಸ್ಥವಾಗಿ ಉಳಿದ ರಾಷ್ಟ್ರವಾಗಿತ್ತು.