Published on: April 18, 2024
ಚುಟುಕು ಸಮಾಚಾರ : 18 ಏಪ್ರಿಲ್ 2024
ಚುಟುಕು ಸಮಾಚಾರ : 18 ಏಪ್ರಿಲ್ 2024
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಯ ಸಂಶೋಧಕರು ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ಗಳನ್ನು ತೆಗೆದುಹಾಕಲು ವಿನ್ಯಾಸಗೊಳಿಸಲಾದ ಸಮರ್ಥನೀಯ ಹೈಡ್ರೋಜೆಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಪದರಗಳನ್ನು ಹೊಂದಿರುವ ಪಾಲಿಮರ್ ನೆಟ್ವರ್ಕ್ (IPN): ಸಮರ್ಥನೀಯ ಹೈಡ್ರೋಜೆಲ್ ವಿಶಿಷ್ಟವಾದ ಹೆಣೆದುಕೊಂಡಿರುವ ಪಾಲಿಮರ್ ಸಂಪರ್ಕವನ್ನು ಹೊಂದಿದ್ದು ಅದು ಮಾಲಿನ್ಯಕಾರಕಗಳನ್ನು ಬಂಧಿಸುತ್ತದೆ ಮತ್ತು UV ಬೆಳಕಿನ ವಿಕಿರಣವನ್ನು ಬಳಸಿಕೊಂಡು ಅವುಗಳನ್ನು ಕೊಳೆಯಿಸುತ್ತದೆ. ಹೈಡ್ರೋಜೆಲ್ ಮೂರು ವಿಭಿನ್ನ ಪಾಲಿಮರ್ ಪದರಗಳನ್ನು ಒಳಗೊಂಡಿದೆ – ಚಿಟೋಸಾನ್, ಪಾಲಿವಿನೈಲ್ ಆಲ್ಕೋಹಾಲ್ ಮತ್ತು ಪಾಲಿಯಾನಿಲಿನ್ – ಒಟ್ಟಿಗೆ ಜೋಡಿಸಿ, ಇದು ಐಪಿಎನ್ ಸಂಪರ್ಕವನ್ನು ರಚಿಸುತ್ತದೆ.
- ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ ದೇಶದಲ್ಲಿ ‘ಕುಶ್’ ಡ್ರಗ್ಸ್ ಎನ್ನುವ ಹೊಸ ಬಗೆಯ ಸಂಶ್ಲೇಷಿತ ಡ್ರಗ್ಸ್ ಬಳಸುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲು ಆ ದೇಶದ ರಾಷ್ಟ್ರಕ್ಷರಾದ ಜುಲಿಯೂಸ ಮಾಡಾ ಬಿಯೋ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಮಾನವನ ಮೂಳೆಯಿಂದ ಗಂಧಕ (ಸಲ್ಪರ್) ಸೇರಿದಂತೆ ಕೆಲ ವಸ್ತುಗಳನ್ನು ಬೇರ್ಪಡಿಸಿ ಅದನ್ನು ಮರಿಜುವಾನಾದಂತಹ ಡ್ರಗ್ಸ್ ಗಿಡಮೂಲಿಕೆಗಳಿಗೆ ಬೆರೆಯಿಸಿ ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಾರೆ.
- ‘Paw-ternity’ ನೀತಿ: ಆನ್ಲೈನ್ ಆಹಾರ ಡೆಲಿವರಿ ಆ್ಯಪ್ ಸ್ವಿಗ್ಗಿ ‘Paw-ternity’ ನೀತಿಯನ್ನು ಪರಿಚಯಿಸಿದ್ದು, ಸಾಕುಪ್ರಾಣಿಗಳ ಆರೈ ಕೆ ಮತ್ತು ದತ್ತು ಪಡೆಯುವಲ್ಲಿ ಉದ್ಯೋಗಿಗಳಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಏಪ್ರಿಲ್ 11, ರಾಷ್ಟ್ರೀಯ ಸಾಕುಪ್ರಾಣಿಗಳ ದಿನದಂದು ಇದನ್ನು ಪರಿಚಯಿಸಲಾಗಿದೆ. ಈ ನೀತಿ ಅಡಿಯಲ್ಲಿ ನೌಕರರು ತಮ್ಮ ಸಾಕುಪ್ರಾಣಿಯನ್ನು ಮನೆಗೆ ಸ್ವಾಗತಿಸಲು, ವೇ ತನದೊಂ ದಿಗೆ ಹೆಚ್ಚುವರಿ ರಜೆಗೆ ಅರ್ಹರಾಗಿರುತ್ತಾರೆ. ಪಾಲಕರೊಂದಿಗೆ ಸಾಕುಪ್ರಾಣಿ ಹೊಂದಿಕೊಳ್ಳಲು ಬೇಕಾಗಿರುವ ಅವಧಿಯಲ್ಲಿ ನೌಕರರಿಗೆ ‘ವರ್ಕ್ -ಫ್ರಮ್-ಹೋಮ್’ ಆಯ್ಕೆಯನ್ನು ನೀಡಲಾಗುತ್ತದೆ. ಇದಲ್ಲದೆ, ಸಾಕು ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ಅಥವಾ ಅನಾರೋಗ್ಯ ಸಂದರ್ಭಗಳಲ್ಲಿ ಹಾಗೂ ಗಾಯಗೊಂಡ ಸಾಕುಪ್ರಾಣಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಸಾಮಾನ್ಯ ರಜೆ ಅಥವಾ ಅನಾರೋಗ್ಯ ರಜೆಯನ್ನು ಬಳಸಬಹುದು. ತಮ್ಮ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಅಗತ್ಯವಿರುವ ಸಮಯವನ್ನು ನೌಕರರು ತೆಗೆದುಕೊಳ್ಳಲು ಈ ನೀತಿಯು ಅನುಮತಿಸುತ್ತದೆ. ಸಾಕುಪ್ರಾಣಿಗಳು ಮೃತಪಟ್ಟ ಸಂದರ್ಭದಲ್ಲಿ ಉದ್ಯೋಗಿಗಳಿಗೆ ವಿಯೋಗ ರಜೆಯನ್ನು ನೀಡಲಾಗುತ್ತದೆ.
- ಸಾಮಾಜಿಕ ಕಾರ್ಯಗಳಿಗಾಗಿಯೇ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದ ಸರ್ವೋದಯ ಹಾಗೂ ಚಿಪ್ಕೊ ಚಳವಳಿಯ ನಾಯಕ ಮುರಾರಿ ಲಾಲ್ (91) ಅವರು ರಿಷಿಕೇಶದ ಏಮ್ಸ್ನಲ್ಲಿ ನಿಧನರಾದರು. ಲಾಲ್ ಅವರು ಚಿಪ್ಕೊ ಚಳವಳಿಯ ಮಾತೃ ಸಂಘಟನೆಯಾದ ದಶೋಲಿ ಗ್ರಾಮ ಸ್ವರಾಜ್ಯ ಮಂಡಲದ ಅಧ್ಯಕ್ಷರಾಗಿದ್ದರು. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಬಳಕೆಯಲ್ಲಿ ನವೀನ ಮಾದರಿಗಳನ್ನು ರೂಪಿಸುವ ಮೂಲಕ ಖ್ಯಾತರಾಗಿದ್ದ ಲಾಲ್, ತನ್ನೂರಿನ ಬಂಜರು ಭೂಮಿಯನ್ನು ಹಸಿರಾಗಿಸಿದ್ದರು. ಇವರ ಕೆಲಸವನ್ನು ಉತ್ತರಾಖಂಡ ಸರ್ಕಾರ ಹಾಗೂ ದೇಶದಾದ್ಯಂತ ಅನೇಕ ಸಂಸ್ಥೆಗಳು ಗುರುತಿಸಿಗೌರವಿಸಿವೆ.
- ಐಲ್ಯಾಂಡ್ ಸೈಬರ್ ಸಾಥಿ: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿಯೂ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಅಲ್ಲಿನ ಪೊಲೀಸರು ‘ಐಲ್ಯಾಂಡ್ ಸೈಬರ್ ಸಾಥಿ’ ಎಂಬ ಚಾಟ್ ಬಾಟ್ ಇಂಟರ್ನೆಟ್ ತಂತ್ರಾಂಶವನ್ನು ಹೊರತಂದಿದ್ದು ಇದರ ಮೂಲಕ ದ್ವೀಪ ಪ್ರದೇಶದ ಜನರು ಸೈಬರ್ ಅಪರಾಧಗಳ ಬಗ್ಗೆ ವರದಿ, ಮಾಹಿತಿ, ಅಲರ್ಟ್, ಪರಿಹಾರ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದು. ತಂತ್ರಜ್ಞಾನ ಬೆಳೆದಂತೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲೂ ಸೈಬರ್ ಅಪರಾಧಗಳು ಹೆಚ್ಚು ವರದಿಯಾಗುತ್ತಿವೆ. ಸೈಬರ್ ಸಾಥಿಯನ್ನು ಮೊಬೈಲ್ ಇದ್ದವರು ಯಾರು ಬೇಕಾದರೂ ಬಳಸಬಹುದು. ಈ ಮೂಲಕ ಸೈಬರ್ ವಂಚನೆಗೆ ಒಳಗಾದವರು ನೇರವಾಗಿ ಇದರಲ್ಲಿ ದೂರು ನೀಡಬಹುದು. ಈ ತಂತ್ರಾಂಶ ದ್ವೀಪ ಪ್ರದೇಶದ ಜನರಿಗೆ ಸೈಬರ್ ವಂಚನೆಯ ಅಲರ್ಟ್ ಗಳನ್ನು ರವಾನಿಸುವುದಲ್ಲದೇ ಕಳೆದುಹೋದ ಮೊಬೈಲ್ ಪತ್ತೆ ಹಚ್ಚಲು, ಸ್ಪ್ಯಾ ಮ್ ಕಾಲ್ ಗಳ ಬಗ್ಗೆ ಎಚ್ಚರಿಕೆಯನ್ನೂ ನೀಡುತ್ತದೆ.
- ಬ್ಲ್ಯೂ ಆರಿಜಿನ್ನ ಎನ್ಎಸ್– 25 ಎಂಬ ಬಾಹ್ಯಾಕಾಶ ಪ್ರವಾಸ ಕಾರ್ಯಕ್ರಮ: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಅವರು ಆರಂಭಿಸಿರುವ ಬ್ಲ್ಯೂ ಆರಿಜಿನ್ನ ಎನ್ಎಸ್– 25 ಎಂಬ ಬಾಹ್ಯಾಕಾಶ ಪ್ರವಾಸ ಕಾರ್ಯಕ್ರಮಕ್ಕೆ ಆಯ್ಕೆಯಾದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಗೋಪಿಚಂದ್ ತೋಟಕ್ಕುರ ಅವರು ಪಾತ್ರರಾಗಿದ್ದಾರೆ. 1984ರಲ್ಲಿ ಭಾರತೀಯ ಸೇನೆಯ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರ ನಂತರ ಬಾಹ್ಯಾಕಾಶಕ್ಕೆ ತೆರಳುವ ಸಾಹಸ ಮಾಡುತ್ತಿರುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.ಇವರು ಆಂಧ್ರ ಮೂಲದವರಾಗಿದ್ದು ಅಮೆರಿಕದಲ್ಲಿ ಪ್ರಿಸರ್ವ್ ಲೈಫ್ ಕಾರ್ಪ್ ಎಂಬ ಉದ್ಯಮ ನಡೆಸುತ್ತಿದ್ದಾರೆ. ಉದ್ಯಮಿ ಹಾಗೂ ಪೈಲಟ್ ಸಹ ಆಗಿರುವ ಗೋಪಿ ಅವರು ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಆಯ್ಕೆಯಾದ ಆರು ಮಂದಿ ಪೈ ಕಿ ಒಬ್ಬರಾಗಿದ್ದಾರೆ’ ನ್ಯೂ ಶೆಪರ್ಡ್ ಉಪ ಕಕ್ಷೆ ಉಡಾವಣಾ ವಾಹನದಲ್ಲಿ ಬಾಹ್ಯಾಕಾಶಕ್ಕೆ ತೆರಳುವ ಈ ಕಾರ್ಯ ಕ್ರಮ ಏಳನೇಯದ್ದಾಗಿದೆ ಮತ್ತು ಇತಿಹಾಸದಲ್ಲೇ 25ನೇ ಪ್ರವಾಸವಾಗಿದೆ. ಈ ಕಾರ್ಯಕ್ರಮದ ಮೂಲಕ ಭೂಮಿ ವಾತಾವರಣ ಮತ್ತು ಬಾಹ್ಯಾಕಾಶ ನಡುವಿನ ಸಾಂಪ್ರಾದಾಯಿಕ ಗಡಿ ಎಂದೇ ನಂಬಲಾದ ಕರ್ಮನ್ ಗೆರೆಯನ್ನು ಇದುವರಗೆ 31 ಜನರು ದಾಟಿದ್ದಾರೆ’ ಎಂದು ಸಂಸ್ಥೆ ಹೇಳಿದೆ. ಅಂತರಿಕ್ಷ ಪ್ರವಾಸಕ್ಕಾಗಿ ಬ್ಲ್ಯೂ ಆರಿಜಿನ್ನವರು ತಯಾರು ಮಾಡಿರುವ ಮತ್ತು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವೇ ಈ ನ್ಯೂ ಶೆಪರ್ಡ್