Published on: June 18, 2024
ಚುಟುಕು ಸಮಾಚಾರ :18 ಜೂನ್ 2024
ಚುಟುಕು ಸಮಾಚಾರ :18 ಜೂನ್ 2024
- ಅಶ್ವಮೇಧ ಕ್ಲಾಸಿಕ್ ಬಸ್: ಕೆಎಸ್ಆರ್ಟಿಸಿಯ ಕೆಂಪು ಬಸ್ಗಳಲ್ಲಿ ಪ್ರಯಾಣಿಕರು ‘ಅಶ್ವಮೇಧ’ ಬಸ್ಗಳಿಗೆ ಆದ್ಯತೆ ನೀಡುತ್ತಿದ್ದು, ಇದರಿಂದ ಸಾರಿಗೆ ಬಸ್ ಗಿಂತ ಅಶ್ವಮೇಧ ಬಸ್ ಕಿಲೋ ಮೀಟರ್ಗೆ ₹10ಕ್ಕೂ ಅಧಿಕ ವರಮಾನ ಗಳಿಸುತ್ತಿದೆ. ಕೆಎಸ್ಆರ್ಟಿಸಿ 2024 ರ ಫೆಬ್ರುವರಿಯಲ್ಲಿ ಹೊಸ ವಿನ್ಯಾಸದ ಈ ಬಸ್ ಅನ್ನು ಅಶ್ವಮೇಧ ಎಂಬ ಹೊಸ ಬ್ರಾಂಡ್ ಅಡಿ ರಸ್ತೆಗೆ ಇಳಿಸಿತ್ತು. ಬಸ್ನಲ್ಲಿ 52 ಆಸನಗಳಿದ್ದು, ‘ಬಕೆಟ್ ಟೈಪ್’ ವಿನ್ಯಾಸವನ್ನು ಹೊಂದಿವೆ. ‘ಪಾಯಿಂಟ್ ಟು ಪಾಯಿಂಟ್ ಬಸ್ಗಳಾದರೆ ತಡೆರಹಿತವಾಗಿ ಸಂಚರಿಸುತ್ತವೆ. ಆಗ ನಿರ್ವಾಹಕರು ಬೇಕಾಗುವುದಿಲ್ಲ. ನಿಲುಗಡೆರಹಿತವಾಗಿರುವ ಕಾರಣ, ದೂರದ ಊರುಗಳಿಗೆ ಪ್ರಯಾಣಿಸುವವರು ಇದೇ ಬಸ್ಗಳನ್ನು ಆರಿಸಿಕೊಳ್ಳುತ್ತಿದ್ದಾರೆ’
- ವೃತ್ತಾಕಾರದ ರುದ್ರಾಕ್ಷಿ ಹಲಸು: ಸಕ್ಕರೆ, ಬೆಲ್ಲದಷ್ಟು ಸಿಹಿಯಾಗಿರುವ ವಿಶಿಷ್ಟ ರುಚಿ ಹಾಗೂ ಸ್ವಾದಿಷ್ಟ ತೊಳೆಗಳನ್ನು ಹೊಂದಿರುವ ಮಲೆನಾಡಿನ ಹಳದಿ ರುದ್ರಾಕ್ಷಿ(JAR), ಕೆಂಪು ರುದ್ರಾಕ್ಷಿ(DSV), ಕೆಂಪು (RTB) ಹಾಗೂ ಕಿತ್ತಳೆ (RPN) ಬಣ್ಣದ ಹಲಸಿನ ತಳಿಗೆ ಕೇಂದ್ರ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಮಾನ್ಯತೆ ಲಭಿಸಿದೆ. ಅಳಿವಿನಂಚಿನಲ್ಲಿರುವ ಈ ಅಪರೂಪದ ತಳಿಗಳನ್ನು ಸಂರಕ್ಷಿಸಲು ಹಾಗೂ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪ್ರಾಧಿಕಾರದ ಈ ತೀರ್ಮಾನವು ನೆರವಾಗಲಿದೆ. ಈ ತಳಿಯ ಹಲಸಿನ ಸಸಿಗಳನ್ನು ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಿ ಆಸಕ್ತ ಕೃಷಿಕರಿಗೆ ವಿತರಿಸಲಾಗುವುದು. ಬೆಳೆಗಾರರಿಗೂ ಆರ್ಥಿಕವಾಗಿ ಲಾಭದಾಯಕವಾಗಲಿವೆ.
- Ed Finds A Home: ಆಲಿಯಾ ಭಟ್ ಅವರು ತಮ್ಮ ಚೊಚ್ಚಲ ಕಾದಂಬರಿಯನ್ನು ಬಿಡುಗಡೆ ಮಾಡಿದರು. ಮಕ್ಕಳ ಚಿತ್ರಕಥೆ ಪುಸ್ತಕವಾಗಿದೆ ಅದಕ್ಕೆ Ed Finds A Home ಎಂದು ಹೆಸರಿಸಿದ್ದಾರೆ. ಈ ಮೊದಲ ಪುಸ್ತಕವನ್ನು Ed-a-Mamma ಮತ್ತು Puffinರ ಸಹಯೋಗದಿಂದ ರಚಿಸಿದ್ದಾರೆ.
- ಸಂತ ಕವಿ ತುಳಸಿದಾಸ ರಚಿತ ಹನುಮಾನ್ ಚಾಲೀಸಾ(ಮೂಲ ಅವಧಿ ಭಾಷೆಯಲ್ಲಿದೆ)ವನ್ನು ಖ್ಯಾತ ಲೇಖಕ ವಿಕ್ರಮ್ ಸೇಠ್ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದಾರೆ ಇಂಗ್ಲಿಷ್ ಅನುವಾದದ ಜೊತೆಗೆ, ದೇವನಾಗರಿ ಮತ್ತು ರೋಮನ್ ಲಿಪಿಯಲ್ಲಿಯೂ ಹನುಮಾನ್ ಚಾಲೀಸಾ ಪದ್ಯಗಳನ್ನು ಈ ಕೃತಿಯಲ್ಲಿ ಮುದ್ರಿಸಲಾಗಿದೆ. ‘ಕಾದಂಬರಿಕಾರರೂ ಆಗಿರುವ ವಿಕ್ರಮ್ ಸೇಠ್ ಕವಿಯಾಗಿಯೂ ಪ್ರಸಿದ್ಧರಾಗಿದ್ದಾರೆ. 40 ಪದ್ಯಗಳನ್ನು ಒಳಗೊಂಡ ಹನುಮಾನ್ ಚಾಲೀಸಾ ಹನುಮಾನ್ ದೇವರಿಗೆ ಅರ್ಪಿಸಲಾಗಿರುವ ಕೀರ್ತನೆ ಗಳಾಗಿವೆ. ತುಳಸಿದಾಸ್ ಎಂದು ಕರೆಯಲ್ಪಡುವ ರಾಂಬೋಲಾ ದುಬೆ ಅವರು ವೈಷ್ಣವ ಹಿಂದೂ ಸಂತ ಮತ್ತು ಕವಿಯಾಗಿದ್ದು, ರಾಮನ ಭಕ್ತಿಗೆ ಹೆಸರುವಾಸಿಯಾಗಿದ್ದಾರೆ. ಜನ್ಮ: 11 ಆಗಸ್ಟ್ 1511
- ಏಕಕಾಲದಲ್ಲಿ ಹಲವು ಸ್ಥಳಗಳಲ್ಲಿ ನಡೆದ ಸಾರ್ವಜನಿಕ ಸೇವಾ ಸಮಾರಂಭದಲ್ಲಿ ದಾಖಲೆ ಸಂಖ್ಯೆಯ ಜನರು ಪಾಲ್ಗೊಳ್ಳುವ ಮೂಲಕ ಭಾರತೀಯ ರೈಲ್ವೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿದೆ. ರೈಲ್ವೆ ಸಚಿವಾಲಯವು 2024ರ ಫೆಬ್ರುವರಿ 26ರಂದು ದೇಶದ ವಿವಿಧೆಡೆ ರೈಲ್ವೆ ಬ್ರಿಡ್ಜ್, ವಿವಿಧ ರೈಲ್ವೆ ನಿಲ್ದಾಣಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯ ಕ್ರಮವನ್ನು ಪ್ರಧಾನಿ ಅವರು ವರ್ಚುವಲ್ ಆಗಿ ನೆರವೇರಿಸಿದ್ದರು. ರೈಲ್ವೇ ಸೇತುವೆಗಳ ಮೇಲಿನ ರಸ್ತೆ / ಸೇತುವೆ ಕೆಳಗಿನ ರಸ್ತೆ ಉದ್ಘಾಟನೆ ಮತ್ತು ರೈಲ್ವೆ ನಿಲ್ದಾಣಗಳ ಶಂಕುಸ್ಥಾಪನೆಗಾಗಿ ಪ್ರಧಾನಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ದೇಶದ 2,140 ಸ್ಥಳಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ 40,19, 516 ಜನರು ಭಾಗವಹಿಸಿದ್ದರು.
- ಮಹಾರಾಷ್ಟ್ರದ ನಾಗ್ಪುರ ಮೂಲದ ಸೋಲಾರ್ ಪರಿಕರಗಳ ಕಂಪನಿಯೊಂದು ತಯಾರಿಸಿರುವ ಸ್ವದೇಶಿ ನಿರ್ಮಿತ 120 ನಾಗಾಸ್ತ್ರ –1 ಕಾಮಿಕಾಜೆ ಡ್ರೋನಗಳನ್ನು ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಎಕನಾಮಿಕ್ಸ್ ಎಕ್ಷಪ್ಲೋಸಿವ್ ಲಿಮಿಟೆಡ್ (ಇಇಎಲ್) ಸಂಸ್ಥೆಯು ಬೆಂಗಳೂರಿನ ಝೆಡ್-ಮೋಷನ್ ಅಟಾನಮಸ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಶೇಕಡಾ 75ಕ್ಕಿಂತ ಹೆಚ್ಚು ದೇಶೀಯ ಪರಿಕರಗಳನ್ನು ಬಳಸಲಾಗಿದೆ. ಡ್ರೋನಗಳನ್ನು ಸೇನೆಯ ಪುಲ್ಗಾಂವನ ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೆ ತಲುಪಿಸಿದೆ.
- ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡ ಮಾಡುವ 2024ನೇ ಸಾಲಿನ ‘ಯುವ ಪುರಸ್ಕಾರ’ ಶ್ರುತಿ ಬಿ.ಆರ್. ಅವರ ಕವನ ಸಂಕಲನ ‘ಜೀರೋ ಬ್ಯಾಲೆನ್ಸ್’ಗೆ ಹಾಗೂ ‘ಬಾಲ ಸಾಹಿತ್ಯ ಪುರಸ್ಕಾರ’ ಕೃಷ್ಣಮೂರ್ತಿ ಬಿಳಿಗೆರೆ ಅವರ ‘ಛೂಮಂತ್ರಯ್ಯ ನ ಕತೆಗಳು’ ಕೃತಿಗೆ ಲಭಿಸಿದೆ. ಪ್ರಶಸ್ತಿ ಪುರಸ್ಕೃತರು ತಲಾ ₹ 50 ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ.
- ಇತ್ತೀಚೆಗೆ, ಪ್ರಧಾನ ಮಂತ್ರಿಯವರು ಇಟಲಿಯಲ್ಲಿ ಜೂನ್ 2024ರಲ್ಲಿ ನಡೆದ ವಾರ್ಷಿಕ G7 ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ವಿದೇಶಿ ಪ್ರವಾಸವಾಗಿದೆ. ಈ ಶೃಂಗಸಭೆಯು ಗುಂಪಿನ 50 ನೇ ವಾರ್ಷಿಕೋತ್ಸವವಾಗಿದೆ. ಶೃಂಗಸಭೆಯನ್ನು ಇಟಲಿ ದೇಶ ಆಯೋಜಿಸಿತ್ತು.