Published on: March 18, 2023
ಚುಟುಕು ಸಮಾಚಾರ – 18 ಮಾರ್ಚ್ 2023
ಚುಟುಕು ಸಮಾಚಾರ – 18 ಮಾರ್ಚ್ 2023
- ಜವಳಿ ಕ್ಷೇತ್ರದ ಬೆಳವಣಿಗೆ ಇರುವ ಅವಕಾಶ ಬಳಸಿಕೊಳ್ಳುವ ಉದ್ದೇಶದಿಂದ ದೇಶದ ಏಳು ಕಡೆಗಳಲ್ಲಿಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ರೀಜನ್ ಆಂಡ್ ಅಪೇರಲ್ (ಪಿಎಂ ಮಿತ್ರ) ಸ್ಥಾಪಿಸಲು ಉದ್ದೇಶಿಸಿದ್ದು, ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೇಂದ್ರ ಯೋಜನೆಯನ್ನು ಅನುಷ್ಠಾನ ಮಾಡಲಿದೆ.
- ಶಾಂಘೈ ಸಹಕಾರ ಸಂಘಟನೆ (ಎಸ್.ಸಿ.ಒ) ಯುವ ಮಂಡಳಿಯ 16 ನೇ ಸಭೆ ಹೊಸದಿಲ್ಲಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಂಘೈ ಸಹಕಾರ ಸಂಘಟನೆಯ (ಎಸ್. ಸಿ.ಒ) ಪ್ರವಾಸೋದ್ಯಮ ಸಚಿವರ ಸಭೆಯನ್ನು (ಟಿಎಂಎಂ) ಕಾಶಿಯಲ್ಲಿ (ವಾರಣಾಸಿ) ಆಯೋಜಿಸಿತ್ತು. ‘ಕಾಶಿ'(ವಾರಣಾಸಿ)ಯನ್ನು ಕಾಶಿ'(ವಾರಣಾಸಿ)ಯನ್ನು ಶಾಂಘೈ ಸಹಕಾರ ಸಂಸ್ಥೆಯ(SCO) ಮೊದಲ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿ ಎಂದು ಘೋಷಿಸಲಾಗಿದೆ.
- ಮದ್ಯ ಮಾರಾಟದ ಮೇಲೆ ಹಿಮಾಚಲ ಪ್ರದೇಶ ಸರ್ಕಾರ ಹಸುವಿನ ಸೆಸ್ ವಿಧಿಸಿದೆ. ಬಜೆಟ್ ಮಂಡನೆ ವೇಳೆ ಮದ್ಯದ ಬಾಟಲಿ ಮಾರಾಟಕ್ಕೆ 10 ರೂಪಾಯಿ ಸೆಸ್ ವಿಧಿಸುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಇದೀಗ ಸೆಸ್ ವಿಧಿಸಿದೆ. 10 ಸೆಸ್ ವಿಧಿಸಿರುವುದರಿಂದ ರಾಜ್ಯಕ್ಕೆ ವಾರ್ಷಿಕ 100 ಕೋಟಿ ರೂ. ಆದಾಯ ಉತ್ಪತಿ ಆಗಲಿದೆ ಈ ಆದಾಯವನ್ನು ಗೋವುಗಳ ಸೌಕರ್ಯವನ್ನು ಸುಧಾರಿಸಲು ಖರ್ಚು ಮಾಡಲು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಉತ್ತರ ಪ್ರದೇಶ ಸರ್ಕಾರವು ಹಸುಗಳಿಗೆ ಆಶ್ರಯ ತಾಣ ನಿರ್ಮಿಸಲು ಶೇ.0. 5ರಷ್ಟು ಸೆಸ್ ವಿಧಿಸಿತ್ತು. ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಇದೇ ರೀತಿ ಹಸುವಿನ ಸೆಸ್ ಅನ್ನು ಜಾರಿಗೆ ತಂದಿದೆ. 2019 ರಿಂದ 2022ರ ಅವಧಿಯಲ್ಲಿ ರಾಜಸ್ಥಾನ ಸರ್ಕಾರವು ಹಸುವಿನ ಸೆಸ್ ಮೂಲಕ 2176 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
- ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ 19 ಹೊಸ ಜಿಲ್ಲೆಗಳನ್ನು ರಚಿಸಿದ್ದಾರೆ. ಈ ಜಿಲ್ಲೆಗಳೊಂದಿಗೆ ರಾಜ್ಯದ ಜಿಲ್ಲೆಗಳ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ. ಜತೆಗೆ ರಾಜಸ್ಥಾನವನ್ನು ಬನ್ಸ್ವಾರಾ, ಪಾಲಿ, ಸಿಕಾರ್ ಎಂದು ಮೂರು ವಿಭಾಗಗಳಾಗಿ ಗುರುತಿಸಲಾಗಿದೆ.
- ಯೂಕ್ರೇನ್ನಲ್ಲಿ ನಡೆದ ಯುದ್ಧ ಅಪರಾಧಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಹೊಣೆಗಾರರು ಎಂದು ಆರೋಪಿಸಿರುವ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ (ಐಸಿಸಿ) ಪುಟಿನ್ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ. ರಷ್ಯಾ ತನ್ನ ನೆರೆಯ ಯೂಕ್ರೇನ್ ಮೇಲೆ ಕಳೆ ದ ಒಂದು ವರ್ಷದಿಂದ ನಿರಂತರವಾಗಿ ಆಕ್ರಮಣ ಮಾಡುತ್ತಿದ್ದು, ಅಲ್ಲಿನ ದೌರ್ಜನ್ಯಗಳ ಬಗ್ಗೆಸಾಕಷ್ಟು ವರದಿಗಳಾಗಿವೆ. ಮಕ್ಕಳನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡಿದ ಮತ್ತು ಯೂಕ್ರೇನ್ ಪ್ರದೇಶದಿಂದ ರಷ್ಯಾದ ಒಕ್ಕೂಟಕ್ಕೆ ಜನರನ್ನು ಕಾನೂನುಬಾಹಿರವಾಗಿ ವರ್ಗಾಯಿಸಿರುವ ಶಂಕೆಯ ಮೇಲೆ ಪುತಿನ್ ಅವರನ್ನು ಬಂಧಿಸುವಂತೆ ಐಸಿಸಿ ಯೂಕ್ರೇನ್ಗೆ ನೀಡಿದ ತನ್ನ ಮೊದಲ ವಾರೆಂಟ್ನಲ್ಲಿ ತಿಳಿಸಿದೆ.