Published on: December 19, 2022

ಚುಟುಕು ಸಮಾಚಾರ – 19 ಡಿಸೆಂಬರ್ 2022

ಚುಟುಕು ಸಮಾಚಾರ – 19 ಡಿಸೆಂಬರ್ 2022

  • 850 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ನಶಿಸುತ್ತಿರುವ ನಕ್ಷತ್ರವೊಂದರ ಅಂತ್ಯದ ವಿದ್ಯಮಾನ ಗುರುತಿಸುವಿಕೆಯಲ್ಲಿ ಲಡಾಖ್ನಲ್ಲಿರುವ ಹಿಮಾಲಯನ್ ಟೆಲಿಸ್ಕೋಪ್ ಮತ್ತು ಭಾರತದ ಖಗೋಳ ತಜ್ಞರ ತಂಡವು ಮಹತ್ವದ ಪಾತ್ರ ವಹಿಸಿರುವುದು ತಿಳಿದುಬಂದಿದೆ. 4 ಖಂಡಗಳು ಮತ್ತು ಬಾಹ್ಯಾಕಾಶದ ಟೆಲಿಸ್ಕೋಪ್ನಲ್ಲಿ ಇದನ್ನು ಗಮನಿಸಲಾಗಿತ್ತು. ಆ ಪ್ರಜ್ವಲಿಸುವ ಬೆಳಕು ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದ್ದು ಭಾರತದ ಟೆಲಿಸ್ಕೋಪ್.
  • ಕೊನೆಯ ಹಾಗೂ 36ನೇ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದಿದೆ. 2016ರಲ್ಲಿ ಭಾರತ ಸರಕಾರ ಹಾಗೂ ಫ್ರಾನ್ಸ್ ಸರಕಾರದ ನಡುವೆ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಒಪ್ಪಂದವಾಗಿತ್ತು.
  • ಸಂಪೂರ್ಣ ಸ್ವದೇಶಿ ನಿರ್ಮಿತ ಪಥ ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧನೌಕೆ ‘ಐಎನ್ಎಸ್ ಮರ್ಮಗೋವಾ‘ ಅನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮುಂಬೈನಲ್ಲಿ ನೌಕಾಪಡೆಗೆ ನಿಯೋಜನೆ ಮಾಡಿದರು. 2015ರಲ್ಲಿ ಭಾರತೀಯ ನೌಕಾಪಡೆಗೆ ಐಎಸ್ಎಸ್ ವಿಶಾಖಪಟ್ಟಣಂ ಎಂಬ ಶತ್ರು ಸಂಹಾರಕ ಮೊದಲ ಯುದ್ಧ ನೌಕೆ ಸೇರ್ಪಡೆಯಾಗಿತ್ತು. ಮರ್ಮಗೋವಾ ಭಾರತದಲ್ಲಿ ನಿರ್ಮಾಣವಾದ ಎರಡನೇ ಕ್ಷಿಪಣಿ ನಾಶಕ ಯುದ್ಧ ನೌಕೆಯಾಗಿದೆ.
  • ಭಾರತದ ಪ್ರಥಮ ಡಾರ್ಕ್ ಸ್ಕೈ ಪಾರ್ಕ್ ಗಾಢ ಕತ್ತಲು ಇರುವಂತಹ ಹಾಗೂ ದೀರ್ಘಾವಧಿಯಲ್ಲಿ ಮೋಡಗಳು ಬಾರದಂತಹ ತಾಣಗಳನ್ನು ಸ್ಕೈ ಪಾರ್ಕ್ ನಿರ್ಮಾಣಕ್ಕೆ ಗುರುತಿಸಲಾಗುತ್ತದೆ. ಭಾರತದಲ್ಲಿ ಲಡಾಖ್ನ ‘ಹಾನ್ಲೆ’ ಎಂಬ ಪ್ರದೇಶವನ್ನು ಡಾರ್ಕ್ ಸ್ಕೈ ಪಾರ್ಕ್ಗಾಗಿ ಆಯ್ಕೆ ಮಾಡಲಾಗಿದೆ.
  • ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಅಮೆರಿಕಾವು ಭಾರತವನ್ನು ಹೊರಗಿಟ್ಟಿದೆ.ವರದಿ ನೀಡುವವರು: ಯು.ಎಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ (ಯುಎಸ್ ಸಿಐಆರ್ ಎಫ್) ಮಾನದಂಡ : ಆಯಾ ದೇಶದಲ್ಲಿ ಜನತೆ ಅನುಭವಿಸುತ್ತಿರುವ ಧಾರ್ಮಿಕ ಶೋಷಣೆಯ ಪ್ರಮಾಣವನ್ನು ಮಾನದಂಡವಾಗಿಸಿಕೊಂಡು ಮಾಡಲಾಗಿರುವಂತಹ ಸರ್ವೆಯಿಂದ ಬಂದ ಫಲಿತಾಂಶ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.