Published on: January 2, 2023

ಚುಟುಕು ಸಮಾಚಾರ – 2 ಜನವರಿ 2023

ಚುಟುಕು ಸಮಾಚಾರ – 2 ಜನವರಿ 2023

  • ಹಂಪಿ ದರೋಜಿ ಪಕ್ಷಿಗಳ ಪಟ್ಟಿಗೆ ಈಗ ಮರದ ಹಕ್ಕಿ ಎಂದೇ ಪರಿಗಣಿತವಾಗಿರುವ ಮಚ್ಚೆಯುಳ್ಳ ಮರದ ಗೂಬೆ ಸೇರ್ಪಡೆಯಾಗಿದೆ. ಈ ಪ್ರದೇಶದಲ್ಲಿ ಇಬ್ಬರು ಪಕ್ಷಿಪ್ರೇಮಿಗಳು ಈ ಪಕ್ಷಿಯನ್ನು ಪತ್ತೆಹಚ್ಚಿದ್ದಾರೆ.
  • 18-21 ವರ್ಷ ವಯಸ್ಸಿನ ಬಾಲಕಿಯರಿಗಾಗಿ ಆರು ಆಫ್ಟರ್ ಕೇರ್ ಹೋಮ್ಗಳ ಸ್ಥಾಪನೆಗೆ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಚಿಂತನೆ ನಡೆಸಿದೆ.ಸರ್ಕಾರಿ ಶಿಶುಪಾಲನಾ ಸಂಸ್ಥೆಗಳಿಂದ ಹೊರಬಂದ ನಂತರ ಮನೆ ಮತ್ತು ಆರ್ಥಿಕ ಸಹಾಯವಿಲ್ಲದೆ ಹೆಣ್ಣು ಮಕ್ಕಳು ಸಂಕಷ್ಟ ಪಡುತ್ತಿದ್ದಾರೆ. ಇಂತಹ ಮಕ್ಕಳಿಗೆ ಆಫ್ಟರ್ ಕೇರ್ ಹೋಮ್ ಗಳ ತೆರೆಯಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಮುಂದಾಗಿದೆ.
  • ಭಾರತದ ನಿರುದ್ಯೋಗ ದರವು ಡಿಸೆಂಬರ್ನಲ್ಲಿ ಶೇಕಡಾ 8.3 ಕ್ಕೆ ಏರಿದ್ದು, ಇದು 16 ತಿಂಗಳುಗಳಲ್ಲಿ ಅತ್ಯಧಿಕ ದರವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿ ಅಂಶಗಳು ತಿಳಿಸಿವೆ.
  • “BRO ದ ಅರುಣಾಂಕ್ ಯೋಜನೆ ಅರುಣಾಚಲ ಪ್ರದೇಶದ TCC-ಮಜಾ ರಸ್ತೆಯಲ್ಲಿರುವ ಉತ್ತರ ಗಡಿಯುದ್ದಕ್ಕೂ ಆಯಕಟ್ಟಿನ ಸ್ಥಳವಾದ ಮಜಾಗೆ ಸಂಪರ್ಕವನ್ನು ಸಾಧಿಸಿದೆ.
  • ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಒಪ್ಪಂದಡಿ ತಮ್ಮ ರಾಷ್ಟ್ರಗಳಲ್ಲಿರುವ ಪರಮಾಣು ಸ್ಥಾವರಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಪದ್ಧತಿ 32 ವರ್ಷಗಳಿಂದ ನಡೆದುಕೊಂಡು ಬಂದಿದೆ. ಪರಮಾಣು ಘಟಕಗಳ ಮೇಲೆ ದಾಳಿ ನಡೆಸುವುದರಿಂದ ನಿರ್ಬಂಧಿಸುವಂತೆ ಮಾಡಿಕೊಂಡಿರುವ ಒಪ್ಪಂದದ ನಿಯಮಗಳ ಅಡಿಯಲ್ಲಿ ಪರಮಾಣು ಸ್ಥಾವರಗಳು ಹಾಗೂ ಸೌಲಭ್ಯಗಳ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಈ ಒಪ್ಪಂದಕ್ಕೆ 1988ರ ಡಿ. 31ರಂದು ಸಹಿ ಹಾಕಲಾಗಿತ್ತು. 1991ರ ಜನವರಿ 27ರಂದು ಇದು ಜಾರಿಗೆ ಬಂದಿತ್ತು.