Published on: January 2, 2024
ಚುಟುಕು ಸಮಾಚಾರ : 2 ಜನವರಿ 2024
ಚುಟುಕು ಸಮಾಚಾರ : 2 ಜನವರಿ 2024
- ಪುನರಾಭಿವೃದ್ಧಿಗೊಳಿಸಿದ ಅಯೋಧ್ಯೆ ಧಾಮ ಜಂಕ್ಷನ್ ರೈಲು ನಿಲ್ದಾಣದಿಂದ ಅಮೃತ್ ಭಾರತ್ ಎಕ್ಸ್ಪ್ರೆಸ್ ನ ಎರಡು ರೈಲುಗಳಿಗೆ ಭಾರತದ ಪ್ರಧಾನಮಂತ್ರಿ ಅವರು ಚಾಲನೆ ನೀಡಿದರು. ಎರಡು ಅಮೃತ್ ಭಾರತ್ ರೈಲುಗಳು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಮತ್ತು ಮಾಲ್ಡಾ ಟೌನ್- ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ಗೆ ಇವು ಸಂಪರ್ಕ ಕಲ್ಪಿಸುತ್ತವೆ.
- ಇತ್ತೀಚೆಗೆ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಅಸ್ಸಾಂ ಸರ್ಕಾರದ ಜತೆ ನಿಷೇಧಿತ ಉಲ್ಫಾ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ಸಂಘಟನೆಯ ಒಂದು ಗುಂಪು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.
- ಕೇಂದ್ರ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಕಲ್ಪಿಸಲು ರಾಷ್ಟ್ರೀಯ ವೃತ್ತಿ ಸೇವಾ ಪೋರ್ಟಲ್ 2.0 (ಎನ್ಸಿಎಸ್) ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. ರಾಜ್ಯಗಳಲ್ಲಿರುವ ಗಿಗ್ ಕೆಲಸಗಾರರು, ಆ್ಯಪ್ ಆಧಾರಿತ ವಾಹನ ಚಾಲಕರು, ಆಹಾರ ಪೂರೈ ಸುವವರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ಸುಧಾರಣೆಗೆ ಮುಂದಾಗಿದೆ. ನವೀನ ತಂತ್ರಜ್ಞಾನ ಬಳಸಿಕೊಂಡು 2.0 ಆವೃತ್ತಿಯನ್ನು ಸಿದ್ಧಪಡಿಸಲಾಗಿದೆ. ಇದು ಉದ್ಯೋಗ ಹುಡುಕುವವರಿಗೆ ನೆರವಾಗಲಿದೆ.
- ಗುಜರಾತ್ ಗಮನಾರ್ಹ ಸಾಧನೆಯೊಂದಿಗೆ 2024 ಅನ್ನು ಸ್ವಾಗತಿಸಿತು.108 ಸ್ಥಳಗಳಲ್ಲಿ ಏಕಕಾಲದಲ್ಲಿ ಅತಿ ಹೆಚ್ಚು ಜನರು ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಭಾರತೀಯರಿಗೆ ಮಹತ್ವದ ಸ್ಥಳ ಎನಿಸಿಕೊಂಡ ಮೊಧೇರಾ ಸೂರ್ಯ ದೇವಾಲಯದಲ್ಲಿಯೂ ಸೂರ್ಯ ನಮಸ್ಕಾರ ಮಾಡಲಾಗಿದೆ.
- ಸಂಸತ್ನಲ್ಲಿ ಸಂಭವಿಸಿದ ಭದ್ರತಾ ಲೋಪದ ಘಟನೆಯ ಬಳಿಕ ಸಂಸತ್ ಆವರಣದ ಭದ್ರತೆಯ ಹೊಣೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳಿಗೆ (ಸಿಐಎಸ್ಎಫ್) ವಹಿಸಿದೆ. ಸಂಸತ್ ಭವನದ ಭದ್ರತೆಯ ಉಸ್ತುವಾರಿಯಾಗಿ ದಿಲ್ಲಿ ಪೊಲೀಸರ ಸ್ಥಾನಕ್ಕೆ ಸಿಐಎಸ್ಎಫ್ ನೇಮಕಗೊಳ್ಳಲಿದೆ.
- ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು 2023ರಲ್ಲಿ 1,622 ಜನರಿಗೆ ಪೈಲಟ್ ಪರವಾನಗಿ ನೀಡಿದ್ದು, ಇದು ದಶಕದಲ್ಲೇ ಅತ್ಯಧಿಕ ಸಂಖ್ಯೆಯಾಗಿದೆ. ಜತೆಗೆ ಮಹಿಳಾ ಪೈಲಟ್ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಡಿಜಿಸಿಎ, ‘2022ರಲ್ಲಿ 1,165 ಪರವಾನಗಿಯನ್ನು ಡಿಜಿಸಿಎ ವಿತರಿಸಿತ್ತು. ವರ್ಷದಿಂದ ವರ್ಷ ಕ್ಕೆ ಪರವಾನಗಿ ನೀಡುವ ಸಂಖ್ಯೆ ಶೇ 39ರಷ್ಟು ಏರಿಕೆಯಾಗಿದೆ. ಇದರಲ್ಲಿ ಮಹಿಳೆಯರ ಸಂಖ್ಯೆ ಶೇ 22.5ರಷ್ಟು ಎಂದು ಡಿಜಿಸಿಎ ಹೆಳಿದೆ. ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳೆಯರು ಪೈಲಟ್ ಪರವಾನಗಿ ಪಡೆಯುತ್ತಿರುವುದು ಭಾರತದಲ್ಲೇ ಅತ್ಯಧಿಕವಾಗಿದೆ. ಈ ಕ್ಷೇತ್ರದಲ್ಲಿ ಮಹಿಳಾ ಪೈಲಟ್ಗಳ ಒಟ್ಟು ಸಂಖ್ಯೆ ಶೇ 14ರಷ್ಟಿದೆ.
- 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಏಳು ಕ್ಯಾಲೆಂಡರ್ ವರ್ಷಗಳಲ್ಲಿ 2,000ಕ್ಕೂ ಹೆಚ್ಚು ರನ್ ಗಳಿಸಿದ ವಿಶಿಷ್ಟ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಕ್ಯಾಲೆಂಡರ್ ವರ್ಷ ದಲ್ಲಿ ವಿರಾಟ್ ಕೊಹ್ಲಿ 2,000ಕ್ಕೂ ಹೆಚ್ಚು ರನ್ ಸಾಧನೆ: 2012: 2,186, 2014: 2,286, 2016: 2,595, 2017: 2,818, 2018: 2,735, 2019: 2,455, 2023: 2,048