Published on: October 26, 2023
ಚುಟುಕು ಸಮಾಚಾರ : 20 ಅಕ್ಟೋಬರ್ 2023
ಚುಟುಕು ಸಮಾಚಾರ : 20 ಅಕ್ಟೋಬರ್ 2023
- ಕರ್ನಾಟಕದಾದ್ಯಂತ 400ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಪ್ರಾರಂಭಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟವು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
- ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿರ್ಬಂಧ ಮತ್ತು ಪರಿಹಾರ) ಕಾಯ್ದೆಯ (ಪಿಒಎಸ್ಎಚ್ ಕಾಯ್ದೆ) ಪರಿಣಾಮಕಾರಿ ಅನುಷ್ಠಾನ ಖಾತ್ರಿಪಡಿಸುವುದಕ್ಕಾಗಿ ನಾಲ್ಕು ವಾರಗಳೊಳಗೆ ಪ್ರತಿ ಜಿಲ್ಲೆಯಲ್ಲಿ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಎಲ್ಲ ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
- ಕಣ್ಣೂರಿನ ಉಡುಪು ತಯಾರಿಕಾ ಉದ್ಯಮ ‘ಮರ್ಯಾನ್ ಅಪರೆಲ್’, ಇಸ್ರೇಲ್–ಗಾಜಾ ಸಂಘರ್ಷ ಕೊನೆಗೊಳ್ಳುವವರೆಗೆ ಇಸ್ರೇಲ್ ಪೊಲೀಸರಿಗಾಗಿ ಸಮವಸ್ತ್ರ ತಯಾರಿಸದಿರಲು ಮತ್ತು ಹೊಸ ಗುತ್ತಿಗೆ ಪಡೆಯದಿರಲು ನಿರ್ಧರಿಸಿದೆ. ಇಸ್ರೇಲ್ ಪೊಲೀಸರಿಗೆ 2015ರಿಂದ ಸಮವಸ್ತ್ರ ಪೂರೈಕೆ ಮಾಡುತ್ತಿರುವ ಈ ಉದ್ಯಮವು ನೈತಿಕ ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ‘ಶಾಂತಿ ಮರುಸ್ಥಾಪನೆಗೊಳ್ಳುವವರೆಗೆ ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಪೂರೈಸುವ ಹೊಸ ಒಪ್ಪಂದ ಮಾಡಿಕೊಳ್ಳದಿರಲು ನಿರ್ದರಿಸಿದೆ. ಮುಂಬೈ ಪ್ರಧಾನ ಕಛೇರಿಯನ್ನು ಹೊಂದಿರುವ ಈ ಉದ್ಯಮವು, ಕಣ್ಣೂರಿನ ಕೂತುಪರಂಬದಲ್ಲಿಕಾರ್ಖಾನೆಯನ್ನು ಹೊಂದಿದೆ.
- ಭಾರತದಲ್ಲಿ ಪ್ರಾದೇಶಿಕ ತ್ವರಿತ ಪ್ರಯಾಣ ವ್ಯವಸ್ಥೆಯ(ಆರ್ ಆರ್ ಟಿ ಎಸ್) ಪ್ರಾರಂಭವನ್ನು ಗುರುತಿಸುವ ಮೂಲಕ ಸಾಹಿಬಾಬಾದ್ ನಿಂದ ದುಹೈ ಡಿಪೋಗೆ ಸಂಪರ್ಕ ಕಲ್ಪಿಸುವ ಭಾರತದ ಮೊದಲ ರಾಪಿಡ್ಎಕ್ಸ್ ರೈಲಿಗೆ ಪ್ರಧಾನ ಮಂತ್ರಿ ಚಾಲನೆ ನೀಡಿದರು. ಇದನ್ನು “ನಮೋ ಭಾರತ್” ಎಂದು ಕರೆಯಲಾಗುತ್ತದೆ.
- ಹಮಾಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಆರಂಭದಿಂದಲೂ, ಇಸ್ರೇಲ್ನಲ್ಲಿನ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಜಾಗತಿಕ ಪ್ರಾಮುಖ್ಯತೆಯನ್ನು ಗಳಿಸಿದೆ. ಐರನ್ ಡೋಮ್ ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು ಅದು ಗಾಜಾದಿಂದ ಬರುವ ರಾಕೆಟ್ಗಳನ್ನು ಪ್ರತಿಬಂಧಿಸುತ್ತದೆ.