Published on: December 20, 2022
ಚುಟುಕು ಸಮಾಚಾರ – 20 ಡಿಸೆಂಬರ್ 2022
ಚುಟುಕು ಸಮಾಚಾರ – 20 ಡಿಸೆಂಬರ್ 2022
- ಜಪಾನಿನ ವಾಣಿಜ್ಯೋದ್ಯಮಿ, ಬಿಲಿಯನೇರ್ ಯುಸಾಕು ಮೇಜಾವಾ ಅವರು ಚಂದ್ರನಿಗೆ ಮೊದಲ ನಾಗರಿಕ ಮಿಷನ್ಗಾಗಿ ‘ಡಿಯರ್ ಮೂನ್’ ಯೋಜನೆ ಕಾರ್ಯಾಚರಣೆ ಘೋಷಿಸಿದ್ದರು. ಚಂದ್ರನಲ್ಲಿಗೆ ಪ್ರಯಾಣಿಸುವ ಎಂಟು ಮಂದಿಯಲ್ಲಿ ಬಾಲ್ ವೀರ್ ಮಕ್ಕಳ ಹಿಂದಿ ಧಾರವಾಹಿ ಖ್ಯಾತಿಯ ಭಾರತೀಯ ನಟ ದೇವ್ ಜೋಷಿ ಕೂಡ ಇದ್ದಾರೆ.’ಡಿಯರ್- ಮೂನ್’ ಎಂಬುದು ಕಾರ್ಯಾಚರಣೆಗೆ ಹೆಸರಿಡಲಾಗಿದೆ ಪಯಣದ ಹೆಸರು :ಡ್ರೀಮ್ ಕ್ರ್ಯೂ , 2023 ರ ಕೊನೆಯ ತ್ರೈಮಾಸಿಕದಲ್ಲಿ ಚಂದ್ರನಲ್ಲಿಗೆ ಪಯಣ ಬೆಳೆಸಲಾಗುತ್ತದೆ.
- ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ‘ದಕ್ಷಿಣ ಪಿನಾಕಿನಿ ಜಲವಿವಾದ ನ್ಯಾಯಮಂಡಳಿ’ ರಚಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿದೆ.
- ಈ ವರ್ಷ ಜಾಗತಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಲೇಖನಗಳು ಪ್ರಕಟಗೊಂಡ ಅಥ್ಲೀಟ್ಗಳ ಪಟ್ಟಿಯಲ್ಲಿ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.2017 ರಲ್ಲಿ ನಿವೃತ್ತಿಯಾಗಿದ್ದರೂ ಬೋಲ್ಟ್ ಹಲವು ವರ್ಷಗಳಿಂದ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು.
- ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ‘ಆಕಸ್ಮಿಕ ಲಾಭ ತೆರಿಗೆ’ಯನ್ನು ತಗ್ಗಿಸಿದೆ. ಇದೇ ವೇಳೆ, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ರಫ್ತು ಮೇಲಿನ ತೆರಿಗೆಯನ್ನೂ ಕಡಿಮೆ ಮಾಡಿದೆ.
- ದೆಹಲಿಯಲ್ಲಿ ನಡೆದ 17 ವರ್ಷದ ಬಾಲಕಿಯ ಮೇಲಿನ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇ–ಕಾಮರ್ಸ್ ವೇದಿಕೆಗಳಾದ ಫ್ಲಿಪ್ಕಾರ್ಟ್, ಅಮೆಜಾನ್ಗೆ ದೆಹಲಿ ಪೊಲೀಸರು ಮತ್ತು ದೆಹಲಿ ಮಹಿಳಾ ಆಯೋಗವು ನೋಟಿಸ್ ನೀಡಿದೆ.
- ಡಿಜಿಟಲೀಕರಣದ ಮತ್ತೊಂದು ಹೆಜ್ಜೆಯಾಗಿ ಹಾಗೂ ಸುಪ್ರೀಂ ಕೋರ್ಟ್ ಅನ್ನು ‘ಕಾಗದರಹಿತ’ವನ್ನಾಗಿಸುವ ನಿಟ್ಟಿನಲ್ಲಿ, ವಕೀಲರು ಜ. 1ರಿಂದ ಹಾಜರಾತಿಯನ್ನು ತೋರಿಸಲು ಹಸ್ತಚಾಲಿತ ಸ್ಲಿಪ್ ನೀಡಬೇಕಿಲ್ಲ. ಅವರು ‘ಅಡ್ವೊಕೇಟ್ ಅಪಿಯರೆನ್ಸ್ ಪೋರ್ಟಲ್’ಗೆ ಲಾಗಿನ್ ಆದರೆ ಸಾಕು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
- ರಷ್ಯಾ ದೇಶವು ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಮೊದಲ ಸ್ಥಾನಕ್ಕೆ ಬಂದಿದೆ