Published on: January 21, 2023

ಚುಟುಕು ಸಮಾಚಾರ – 21 ಜನವರಿ 2023

ಚುಟುಕು ಸಮಾಚಾರ – 21 ಜನವರಿ 2023

  • ಕರ್ನಾಟಕ ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಲು ‘ಸ್ಪೂರ್ತಿ ಯೋಜನೆ’ ಆರಂಭಿಸಲಾಗಿದ್ದು, ಇದಕ್ಕಾಗಿ ರಾಜ್ಯ ಸಚಿವ ಸಂಪುಟ 12.51 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ಯೋಜನೆಯ ಭಾಗವಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವರ್ಷಪೂರ್ತಿ ಜಾಗೃತಿ ಅಭಿಯಾನ ನಡೆಯಲಿದೆ.
  • ಸರ್ಕಾರಿ ಶಾಲೆಗಳಲ್ಲಿದಾಖಲಾತಿ ಏರಿಕೆ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿಯಲ್ಲಿ (ಆಸರ್) ಶೈಕ್ಷಣಿಕ ಪ್ರಗತಿಯಲ್ಲಿಕರ್ನಾಟಕ ರಾಜ್ಯವೇ ಉತ್ತಮವಾಗಿದೆ ಎಂದು ಹೇಳಲಾಗಿದೆ. ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಇದಕ್ಕೆ ಸುಕನ್ಯಾ ಸಮೃದ್ಧಿಯೋಜನೆ ಮತ್ತುಬೇಟಿ ಬಚಾವೋ, ಬೇಟಿ ಪಡಾವೋ ಮುಂತಾದ ಕಾರ್ಯಕ್ರಮಗಳ ಸಹಯೋಗ ಮತ್ತುಪರಿಣಾಮಕಾರಿ ಜಾರಿಯೂ ಕಾರಣವಾಗಿದೆ.
  • ಕಸ್ತೂರ್ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್ ಗಾಂಧಿ’ ಕನ್ನಡ ಚಿತ್ರವು ಹತ್ತನೇ ನೊಯಿಡಾ ಅಂತರರಾಷ್ಟ್ರೀ ಯ ಚಿತ್ರೋ ತ್ಸವಕ್ಕೆ ಆಯ್ಕೆ ಆಗಿದೆ.
  • ಕೇಂದ್ರ ಸರ್ಕಾರ ವಲಸೆ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದೆ.ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪ್ರಯಾಣವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಜಾರಿಗೊಳಿಸಲಾಗುತ್ತಿದೆ.
  • ಕೇರಳದ ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲು ತೀರ್ಮಾನಿಸಿದೆ.
  • ‘ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಯನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಾಲೆಯಿಂದ ಹೊರಗಿಡುವಂತಿಲ್ಲ. ಪರೀಕ್ಷೆ ಬರೆಯಲು ಅವಕಾಶವನ್ನೂ ನಿರಾಕರಿಸುವಂತಿಲ್ಲ’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.
  • ದಕ್ಷಿಣ ಆಫ್ರಿಕಾದ ಬ್ಯಾಟರ್‌ ಹಾಶಿಮ್‌ ಆಮ್ಲಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಇದರೊಂದಿಗೆ 20 ವರ್ಷಗಳ ಅವರ ಕ್ರಿಕೆಟ್‌ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
  • ಭಾರತೀಯ ಅಮೆರಿಕನ್ ಅರುಣಾ ಮಿಲ್ಲರ್ ಅವರು ಮೇರಿಲ್ಯಾಂಡ್‌ ರಾಜ್ಯದ ಲೆಫ್ಟಿನೆಂಟ್‌ ಗವರ್ನರ್  ಆಗಿ  ಅಧಿಕಾರ ವಹಿಸಿಕೊಂಡಿದ್ದಾರೆ.