Published on: May 23, 2024

ಚುಟುಕು ಸಮಾಚಾರ : 22 ಮೇ 2024

ಚುಟುಕು ಸಮಾಚಾರ : 22 ಮೇ 2024

  • ಭಾರತದ ಉದ್ಯಮಿ ಹಾಗೂ ಪೈಲಟ್ ಗೋಪಿ ಥೋಟಾಕುರ ಅವರು ಭಾರತದ ಮೊದಲ ‘ಬಾಹ್ಯಾಕಾಶ ಪ್ರವಾಸಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಆಂಧ್ರಪ್ರದೇಶದವರು.  ಎಂಬ್ರೆ ರಿಡ್ಡಲ್ ಏರೋನಾಟಿಕಲ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ‘ಪ್ರಿಸರ್ವ್ ಲೈಫ್ ಕಾರ್ಪ್’ ಎಂಬ ಸಮಗ್ರ ಸ್ವಾಸ್ಥ್ಯ ಮತ್ತು ಅನ್ವಯಿಕ ಆರೋಗ್ಯ ಸಂಸ್ಥೆಯ ಸಹ ಸಂಸ್ಥಾಪಕರೂ ಆಗಿದ್ದಾರೆ.  ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋ ಅವರ ‘ಬ್ಲ್ಯೂ ಆರಿಜಿನ್ನ ಸಂಸ್ಥೆ ಕೈಗೊಳ್ಳುವ ಬಾಹ್ಯಾಕಾಶಯಾನಕ್ಕೆ ಆಯ್ಕೆಯಾದ ಆರು ಸದಸ್ಯರಲ್ಲಿ ಥೋಟಾಕುರ ಅವರೂ ಒಬ್ಬರೆನಿಸಿಕೊಂಡರು. ಉಡಾವಣಾ ನೌಕೆ: ಎನ್ಎಸ್(ನ್ಯೂ ಶೆಪರ್ಡ್)–25 ಅಂತರೀಕ್ಷಕ್ಕೆ ಹೋದ ಮೊದಲ ಅಮೇರಿಕಾ ನಾಗರಿಕರಾದ ಲನ್ ಶೆಪರ್ಡ್ ಅವರ ಹೆಸರನ್ನು ಈ ನ್ಯೂ ಶೇಫರ್ಡ್ ರಾಕೆಟ್ ಗೆ ಇಡಲಾಗಿದೆ. ಎನ್ಎಸ್–25’ರ ಏಳನೇ ಬಾಹ್ಯಾಕಾಶ ವಿಮಾನವನ್ನು ಪಶ್ಚಿಮ ಟೆಕ್ಸಾಸ್ನ ಉಡ್ಡಯನ ಪ್ರದೇಶದಿಂದ ಉಡಾವಣೆ ಮಾಡಲಾಯಿತು. ಗಗನ ಯಾತ್ರಿಕ(‘ಸ್ಪೇಸ್ ಟೂರಿಸ್ಟ್’) ನೆಂದು ಅಂತರಿಕ್ಷಕ್ಕೆ ಹೋಗುವವರಲ್ಲಿ ಗೋಪಿ ಅವರು ಭಾರತದ ಮೊದಲಿಗರಾಗಿದ್ದಾರೆ. ರಾಕೇಶ ಶರ್ಮ ಅವರ ನಂತರ ಅಂತರಿಕ್ಷಕ್ಕೆ ಹೋದ ಎರಡನೆಯ ಭಾರತೀಯರಾಗಿದ್ದಾರೆ.
  • ಮುಂಬೈನ ಮತಗಟ್ಟೆವೊಂದರಲ್ಲಿ ನಟ ಅಕ್ಷಯ್ ಕುಮಾರ್ ಅವರು ಭಾರತೀಯ ಪ್ರಜೆಯಾಗಿ ಮೊದಲ ಮತ ಚಲಾಯಿಸಿದ್ದಾರೆ. ಅಕ್ಷಯ್ ಕುಮಾರ್ ಅವರು 2023ರಲ್ಲಿ ಭಾರತೀಯ ಪೌರತ್ವವನ್ನು ಪಡೆದಿದ್ದರು. ಇದಕ್ಕೂ ಮುನ್ನ ಅವರು ಕೆನಡಾದ ಪ್ರಜೆಯಾಗಿದ್ದರು. 2023ರ ಸ್ವಾತಂ ತ್ರ್ಯ ದಿನಾಚರಣೆಯಂದು ಅವರು ಮತ್ತೆ ಭಾರತೀ ಯ ಪೌರತ್ವವನ್ನು ಪಡೆದುಕೊಂಡಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು.
  • ಅಜೆರ್ಬೈಜಾನ್ ಅರಾಸ್ ನದಿಗೆ ನಿರ್ಮಿಸಿದ ಡ್ಯಾಂ ಉದ್ಘಾಟನೆಗೆ ರೈಸಿ ಅತಿಥಿಯಾಗಿ ಹೋಗಿದ್ದ ಇರಾನ್ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರು. ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಘೋಷಿಸಿದ್ದಾರೆ. ಮುಂದಿನ 50 ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವವರೆಗೆ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
  • ಏರ್ಬಸ್ ಹೆಲಿಕಾಪ್ಟರ್ ಮತ್ತು ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಇತ್ತೀಚೆಗೆ ಭಾರತದಲ್ಲಿ ಏರ್ಬಸ್ನ ಹೆಲಿಕಾಪ್ಟರ್ಗಳ ಖರೀದಿಗೆ ಹಣಕಾಸು ಒದಗಿಸಲು ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಮಾಡಿದೆ.
  • ಇತ್ತೀಚೆಗೆ, ಸರಿಸ್ಕಾ ಮೀಸಲು ಪ್ರದೇಶದ ನಿರ್ಣಾಯಕ ಹುಲಿ ಆವಾಸಸ್ಥಾನದ (CTH) 1-ಕಿಲೋಮೀಟರ್ ಪರಿಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 68 ಗಣಿಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ರಾಜಸ್ಥಾನ ಸರ್ಕಾರಕ್ಕೆ ಆದೇಶಿಸಿದೆ. ನಿರ್ಣಾಯಕ ಹುಲಿ ಆವಾಸಸ್ಥಾನದ ಬಗ್ಗೆ: ಇದನ್ನು ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಪ್ರದೇಶಗಳು ಎಂದೂ ಕರೆಯಲಾಗುತ್ತದೆ-ವನ್ಯಜೀವಿ ಸಂರಕ್ಷಣಾ ಕಾಯಿದೆ (WLPA), 1972 ರ ಅಡಿಯಲ್ಲಿ ಗುರುತಿಸಲಾಗಿದೆ.
  • ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEEC) ಕುರಿತು ಅಲ್ಲಿನ ಪ್ರಮುಖ ಘಟಕಗಳೊಂದಿಗೆ ಚರ್ಚೆ ನಡೆಸಲು ಭಾರತೀಯ ನಿಯೋಗವು ಇತ್ತೀಚೆಗೆ ಮೊದಲ ಬಾರಿಗೆ ಯುಎಇಗೆ ಭೇಟಿ ನೀಡಿತು. ನವದೆಹಲಿಯಲ್ಲಿ ನಡೆದ ಜಿ 20 ಸಭೆ ನಡೆಯುವ ಸಂದರ್ಭದಲ್ಲಿ ಯುರೋಪಿಯನ್ ಯೂನಿಯನ್ ಮತ್ತು ಭಾರತ, ಯುಎಸ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಫ್ರಾನ್ಸ್, ಜರ್ಮನಿ ಮತ್ತು ಇಟಲಿ ಏಳು ದೇಶಗಳ ನಡುವೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿ ಇದನ್ನು ಘೋಷಿಸಲಾಯಿತು. ಕಾರಿಡಾರ್ ಅಸ್ತಿತ್ವದಲ್ಲಿರುವ ಕಡಲ ಮಾರ್ಗಗಳಿಗೆ ಪೂರಕವಾಗಿ ವಿಶ್ವಾಸಾರ್ಹ ಮತ್ತು ವೆಚ್ಚ-ಪರಿಣಾಮಕಾರಿ ಅಂತರ ಗಡಿಗಳಲ್ಲಿ ಹಡಗಿನಿಂದ ರೈಲು ಸಾರಿಗೆ ಜಾಲವನ್ನು ಒದಗಿಸುತ್ತದೆ.
  • ಇತ್ತೀಚೆಗೆ, ಮೈಕೆಲ್ ಹಾಫ್ಮನ್ ಅನುವಾದಿಸಿದ ಜೆನ್ನಿ ಎರ್ಪೆನ್ಬೆಕ್ ಅವರ ‘ಕೈರೋಸ್’ 2024 ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದಿದೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ:ಇದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಲಾದ ಪ್ರಪಂಚದಾದ್ಯಂತದ ಅತ್ಯುತ್ತಮ ಕಾದಂಬರಿಗೆ ವಾರ್ಷಿಕವಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 2005 ರಲ್ಲಿ ಪ್ರಾರಂಭಿಸಲಾಯಿತು. ಪ್ರಶಸ್ತಿಯ ಮೊತ್ತ: £50,000 ಬಹುಮಾನದ ಹಣವನ್ನು ಲೇಖಕ ಮತ್ತು ಅನುವಾದಕರ ನಡುವೆ ಸಮಾನವಾಗಿ ಹಂಚಲಾಗುತ್ತದೆ.