Published on: May 24, 2024

ಚುಟುಕು ಸಮಾಚಾರ : 24 ಮೇ 2024

ಚುಟುಕು ಸಮಾಚಾರ : 24 ಮೇ 2024

  • 2024 ಜೂನ್ 3 ರಂದು, ಆರು ಗ್ರಹಗಳು ಆಕಾಶದಲ್ಲಿ ಬಹುತೇಕ ಒಂದು ಸರಳ ರೇಖೆಯಲ್ಲಿ ಬರುವ ವಿದ್ಯಮಾನ ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಕಾಣುವ (ಪ್ಲಾನೆಟರಿ ಅಲೈನಮೆಂಟ್)  ವಿದ್ಯಮಾನ ನಡೆಯಲಿದೆ. ಬುಧ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಸರಳ  ರೇಖೆಯನ್ನು ರೂಪಿಸಲಿವೆ.ಆರು ಗ್ರಹಗಳು ಭೂಮಿಯಿಂದ ಅವುಗಳ ಇರುವ ಹೆಚ್ಚಿನ ದೂರದ ಕಾರಣ, ಬರಿಗಣ್ಣಿಗೆ ಗೋಚರಿಸುವುದಿಲ್ಲ. ಏತನ್ಮಧ್ಯೆ, ಚಂದ್ರನು ಗೋಚರತೆಯನ್ನು ವಿರೂಪಗೊಳಿಸುವುದರಿಂದ ಗ್ರಹಗಳು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಬುಧ, ಮತ್ತು ಗುರು ಗ್ರಹಗಳ  ಕಕ್ಷೆಯಲ್ಲಿ ಸೂರ್ಯನ ಸಾಮೀಪ್ಯದಿಂದಾಗಿ ಆಕಾಶದಲ್ಲಿ ಅವುಗಳನ್ನು ನೋಡಲು ಕಷ್ಟವಾಗುತ್ತದೆ. ಆದಾಗ್ಯೂ, ಮಂಗಳ ಮತ್ತು ಶನಿಯು ಬರಿಗಣ್ಣಿಗೆ ಗೋಚರಿಸುತ್ತದೆ, ಆದರೂ ತುಂಬಾ ಮಂದವಾಗಿರುತ್ತದೆ.  ವೀಕ್ಷಕರಿಗೆ ದೂರದ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಗುರುತಿಸಲು ದೂರದರ್ಶಕಗಳು ಅಥವಾ ಉನ್ನತ ದುರ್ಬೀನುಗಳು ಬೇಕಾಗುತ್ತವೆ.
  • ಗಡಿ ರಸ್ತೆಗಳ ಸಂಸ್ಥೆ(BRO)ತನ್ನ 65 ನೇ ಸಂಸ್ಥಾಪನಾ ದಿನವನ್ನು ಮೇ 7ರಂದು ಆಚರಿಸಿಕೊಂಡಿತು. BRO ಬಗ್ಗೆ: ಸ್ಥಾಪನೆ: 1960 ಮೇ 7 ರಂದು . ಉದ್ದೇಶ: ಭಾರತದ ಗಡಿ ಪ್ರದೇಶಗಳಲ್ಲಿ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವುದು  ಮತ್ತು ನಿರ್ವಹಿಸುವುದು. ಸಚಿವಾಲಯ: ರಕ್ಷಣಾ ಸಚಿವಾಲಯದಡಿ ‘ಬಾರ್ಡರ್ ರೋಡ್ಸ್ ಡೆವಲಪ್ಮೆಂಟ್ ಬೋರ್ಡ್’(BRDB) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ. ಧ್ಯೇಯವಾಕ್ಯ: ‘ಶ್ರಮೇಣ ಸರ್ವಂ ಸಾಧ್ಯಂ’ (ಕಠಿಣ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸಬಹುದು). ಪ್ರಸ್ತುತ ಮಹಾನಿರ್ದೇಶಕರು: ಲೆಫ್ಟನೆಂಟ್ ಜನರಲ್ ರಘು ಶ್ರೀನಿವಾಸನ್
  • ರಕ್ಷಣಾ ಕ್ಷೇತ್ರದಲ್ಲಿ ದೇಶದ ಒಟ್ಟು ಚಿತ್ರಣ ಹಾಗೂ ಭಾರತೀಯ ಸೇನೆಯ ಶ್ರೀಮಂತ ಪರಂಪರೆ, ಮಹಾಭಾರತ ಮಹಾಕಾವ್ಯದ ಯುದ್ಧದ ಸನ್ನಿವೇಶಗಳನ್ನು ಉದ್ಭವ್ ಯೋಜನೆಯಡಿ ಭಾರತೀಯ ಸೇನೆಯು ಪ್ರದರ್ಶಿಸಲಿದೆ. ಭಾರತೀಯ ಇತಿಹಾಸ, ಪರಂಪರೆಯ ಸಂಭ್ರಮಾಚರಣೆಯನ್ನು ರಾಷ್ಟ್ರೀಯ ಸಂಸ್ಕೃತಿ, ಗುರುತ್ವದ ಭಾಗವಾಗಿ ಇದನ್ನು ಆಚರಿಸಲಾಗುತ್ತಿದೆ. ವಿಷಯ: ಭಾರತದ ಭಿನ್ನ ಸಂಸ್ಕೃತಿಯ ಐತಿಹಾಸಿಕ ಸ್ವರೂಪ. ಉದ್ಭವ್ ಯೋಜನೆಜಗೆ 2023 ರಲ್ಲಿ ಚಾಲನೆ ನೀಡಲಾಗಿತ್ತು.ಭವಿಷ್ಯದ ಸವಾಲುಗಳನ್ನು ಎದುರಿಸಲು ಸೇನೆಯನ್ನು ಸನ್ನದ್ಧಗೊಳಿಸುವ ಕ್ರಮವಾಗಿ ಸೇನೆಯ ಸಮಕಾಲೀನ ಅಗತ್ಯಗಳು ಹಾಗೂ ಭಾರತೀಯ ಪ್ರಾಚೀನ ಕಾರ್ಯತಂತ್ರವನ್ನು ಒಗ್ಗೂಡಿಸುವುದು(ಆಧುನಿಕ ಮಿಲಿಟರಿಗಾಗಿ ಪ್ರಾಚೀನ ಬುದ್ಧಿವಂತಿಕೆ). ಈ ಮೂಲಕ ದೇಶೀಯ ಧರ್ಮ ಬೋಧೆಗೆ ಉತ್ತೇಜನ ನೀಡುವುದು ಯೋಜನೆಯ ಉದ್ದೇಶವಾಗಿದೆ.
  • 2024ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 39ನೇ ಸ್ಥಾನಕ್ಕೆ ಏರಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳು ಹಾಗೂ ಕೆಳ ಮಧ್ಯಮ ಆದಾಯದ ಆರ್ಥಿಕ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. 2021ರಲ್ಲಿ ಭಾರತವು 54ನೇ ಸ್ಥಾನದಲ್ಲಿತ್ತು. ಡಬ್ಲ್ಯುಇಎಫ್ ಹಾಗೂ ಸರ್ರೆ ವಿಶ್ವವಿದ್ಯಾಲಯವು ಜಂಟಿಯಾಗಿ ಈ ವರದಿ ಸಿದ್ಧಪಡಿಸಿವೆ. ಡಬ್ಲ್ಯುಇಎಫ್ ವರದಿ ಪ್ರಕಾರ ಅಮೆರಿಕವು ಮೊದಲ ಸ್ಥಾನದಲ್ಲಿದೆ. ವಿಶ್ವದ 119 ದೇಶಗಳಲ್ಲಿರುವ ನೀತಿಗಳ ಅನುಸಾರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕವು ವಿಶ್ವ ಆರ್ಥಿಕ ವೇದಿಕೆ (WEF) ಬಿಡುಗಡೆ ಮಾಡಿದ ದ್ವೈವಾರ್ಷಿಕ ವರದಿಯಾಗಿದೆ.
  • ವಿಶ್ವ ಆಮೆಗಳ ದಿನ:ಆಮೆಗಳ ಸಂರಕ್ಷಣೆ ಪರಿಸರದಲ್ಲಿ ಅದರ ಉಪಸ್ಥಿತಿಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು 2000ನೇ ಇಸವಿಯಿಂದ ಪ್ರತಿ ವರ್ಷ ಮೇ 23 ರಂದು ‘ವಿಶ್ವ ಆಮೆ ದಿನ’ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ‘ಜಲಚರ ಹಾಗೂ ಭೂ ಪರಿಸರ ಸಮತೋಲನದಲ್ಲಿ ಬಹುಮುಖ್ಯ ಕೊಂಡಿಯಾದ ಆಮೆಗಳನ್ನು ಸಂರಕ್ಷಿಸಬೇಕು. ಅಮೆರಿಕನ್ ಟಾರ್ಟಾಯ್ಸ್ ರೆಸ್ಕ್ಯೂ (ATR) ಎಂಬ ಲಾಭೋದ್ದೇಶವಿಲ್ಲದ ಸಂಸ್ಥೆ ಇದನ್ನು ಆಯೋಜಿಸುತ್ತದೆ. ಅಕ್ರಮ ಕಳ್ಳಸಾಗಣೆ, ಆಹಾರ ಉದ್ಯಮ, ಆವಾಸಸ್ಥಾನ ನಾಶ, ಜಾಗತಿಕ ತಾಪಮಾನ ಮತ್ತು ಸಾಕುಪ್ರಾಣಿ ವ್ಯಾಪಾರದಿಂದ  ಆಮೆಗಳನ್ನು ರಕ್ಷಿಸುವ ಗುರಿಯನ್ನು ಇದು ಹೊಂದಿದೆ.