Published on: March 1, 2023

ಚುಟುಕು ಸಮಾಚಾರ – 28 ಫೆಬ್ರವರಿ 2023

ಚುಟುಕು ಸಮಾಚಾರ – 28 ಫೆಬ್ರವರಿ 2023

  • ಪ್ರತಿ ವರ್ಷವೂ ರಾಜ್ಯ ಸರ್ಕಾರವು ಸಾಹಿತ್ಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಶ್ರೇಷ್ಠರಿಗೆ ಪಂಪ ಪ್ರಶಸ್ತಿ ನೀಡುತ್ತಿದ್ದು 2022-23ನೇ ಸಾಲಿನ ಪಂಪ ಪ್ರಶಸ್ತಿಗೆ ಡಾ. ಎಸ್.ಆರ್. ರಾಮಸ್ವಾಮಿಯನ್ನು ಆಯ್ಕೆ ಮಾಡಲಾಗಿದೆ.2020-21ನೇ ಸಾಲಿಗೆ ಸಿ.ಪಿ.ಕೃಷ್ಣಕುಮಾರ 2021-22ನೇ ಸಾಲಿಗೆ ಬಾಬು ಕೃಷ್ಣಮೂರ್ತಿ ಮತ್ತು 2022-23ನೇ ಸಾಲಿನ ಪ್ರಶಸ್ತಿಗೆ ಎಸ್.ಆರ್.ರಾಮಸ್ವಾಮಿ ಅವರನ್ನು ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಆದೇಶ ಹೊರಡಿಸಿದೆ. ಪ್ರಶಸ್ತಿ: ಪಂಪ ಪ್ರಶಸ್ತಿಯು ಫಲಕ, ಶಾಲು, ಹಾರ ಹಾಗೂ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡಿರುತ್ತದೆ.
  • 2022ನೇ ಸಾಲಿನ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ಜೀವಮಾನದ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ನೃಪತುಂಗ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಮಹಿಳಾ ಸಾಹಿತಿ ವೈದೇಹಿ ಆಗಿದ್ದಾರೆ.
  • ಭಾರತೀಯ ಹವಾಮಾನ ಇಲಾಖೆ (IMD) ವಾಯುವ್ಯ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಗರಿಷ್ಠ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 3-5 ° C ಹೆಚ್ಚಾಗಿರುತ್ತದೆ ಎಂದು ಎಚ್ಚರಿಸಿದೆ. ಫೆಬ್ರವರಿ 21 ರಂದು, ದೆಹಲಿಯಲ್ಲಿ ಐದು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಮೂರನೇ ಅತಿ ಹೆಚ್ಚು ತಾಪಮಾನವನ್ನು   (33.6 ° C) ದಾಖಲಿಸಿತು.
  • ಮಯೂರ ವರ್ಮ ಪ್ರಶಸ್ತಿ: ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ  ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಸತ್ಯಮಂಗಲ ಮಹಾದೇವ, ಕಾಸರಗೋಡಿನ ವಿದ್ಯಾರಶ್ಮಿ ಪೆಲ್ಲತ್ತಡ್ಕ, ಹಾಸನ ಜಿಲ್ಲೆಯ ಬೇಲೂರು ರಘುನಂದನ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ರೂ. 25 ಸಾವಿರ ನಗದು ಒಳಗೊಂಡಿದೆ. 45 ವರ್ಷದೊಳಗಿನ ಪ್ರತಿಭಾವಂತ ಸಾಧಕರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ.