Published on: May 28, 2024
ಚುಟುಕು ಸಮಾಚಾರ :28 ಮೇ 2024
ಚುಟುಕು ಸಮಾಚಾರ :28 ಮೇ 2024
- ‘ಸಾಮೂಹಿಕ ಕೃಷಿ’ಯ ಯಶೋಗಾಥೆ: 77ರಾಗಿತಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿಯ ವಿನಾಯಕ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ರಾಗಿಯ 77 ತಳಿಗಳ ಬೀಜ ಬೆಳೆದು ಗಮನ ಸೆಳೆದಿದ್ದಾರೆ. ಸಂಘದ ಮಹಿಳೆಯರು ಅರ್ಧ ಎಕರೆ ಜಮೀನನ್ನು ಲೀಸ್ಗೆ ಪಡೆದು 77 ರಾಗಿ ತಳಿಯನ್ನು ಉಳಿಸಿ ಬೆಳೆಸಲು ಕೈಜೋಡಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಪ್ರತಿವರ್ಷ 2 ಕ್ವಿಂಟಲ್ನಷ್ಟು ರಾಗಿಯ ಬೀಜಗಳನ್ನು ಬೆಳೆದು ಕೊಡಲಾಗಿದೆ’. 2021ರಿಂ ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂ ದ ₹1 ಲಕ್ಷ ಪ್ರೋತ್ಸಾಹ ಹಣ ದೊರೆತಾಗ ₹50 ಸಾವಿರ ನೀಡಿ ಅರ್ಧ ಎಕರೆ ಜಮೀನನ್ನು 2 ವರ್ಷ ಕ್ಕೆ ಲೀಸ್ಗೆ ಪಡೆದು ರಾಗಿಯ 77 ತಳಿಯನ್ನು ಬೆಳೆಯಲು ಆರಂಭಿಸಿದರು. ತಳಿಗಳು ಮಿಶ್ರವಾಗುವಂತಿಲ್ಲ. ಅದಕ್ಕಾಗಿ ಒಂದು ರಾಗಿ ತಳಿಯ ತಾಕಿನಿಂದ ಇನ್ನೊಂದು ತಾಕಿಗೆ ಹೆಚ್ಚಿನ ಜಾಗ ಬಿಡುವುದು ಅನಿವಾರ್ಯ. ಆಗ ಆಗ ಜಾಗವನ್ನು ವ್ಯರ್ಥ ಮಾಡದೆ ಎಳ್ಳನ್ನು ಬೆಳೆದರು. ‘ಸಾಮೂಹಿಕ ಕೃಷಿ’ ಮೂಲಕ ಗೇಣಿ, ಲೀಸ್ ಹೊಲದಲ್ಲಿ ಸ್ವಾವಲಂಬನೆ ಕಂಡುಕೊಂಡಿದ್ದಾರೆ.
- ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI ) ಸಹಯೋಗದೊಂದಿಗೆ ಭಾರತದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮNFDC ಯಿಂದ 77 ನೇ ಕಾನ್ ಸ್ ಚಲನಚಿತ್ರೋತ್ಸವದಲ್ಲಿ ಉದ್ಘಾಟನಾ ಭಾರತ್ ಪರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪಾಯಲ್ ಕಪಾಡಿಯಾ ಅವರ ಚಲನಚಿತ್ರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಉತ್ಸವದಲ್ಲಿ ಎರಡನೇ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಎಂಬ ಕನ್ನಡ ಕಿರುಚಿತ್ರ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ ( ಲಾ ಸಿನೆಫ್} ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಹಿಂದಿ ಸಿನಿಮಾ‘ದಿ ಶೇ ಮ್ಲೆಸ್’ನಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ಅನಸೂಯಾ ಸೆನ್ ಗುಪ್ತ ಅವರು 2024ನೇ ಸಾಲಿನ ಕಾನ್ ಚಲನಚಿತ್ರೋತ್ಸವದ ‘ಅನ್ ಸರ್ಟೇನ್ ರಿಗಾರ್ಡ್’ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿ ಇತಿಹಾಸ ಸೃಷ್ಟಿಸಿದ್ದಾರೆ.
- ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಟಿಎಟಿಆರ್) ಇತ್ತೀಚೆಗೆ ನಡೆಸಿದ ‘ವಾಟರ್ಹೋಲ್ ಅನಿಮಲ್ ಸರ್ವೇ’ಯಲ್ಲಿ 55 ಹುಲಿಗಳು ಸೇರಿದಂತೆ ಒಟ್ಟು 5,069 ಕಾಡು ಪ್ರಾಣಿಗಳು ಪತ್ತೆಯಾಗಿವೆ. ‘ನಿಸರ್ಗಾನುಭವ-2024’ ಎಂಬ ಸಮೀಕ್ಷೆಯನ್ನು ಆಯೋಜಿಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಯಲ್ಲದೆ 160 ನಿಸರ್ಗ ಪ್ರೇಮಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
- ಇತ್ತೀಚಿಗೆ ತೆಲಂಗಾಣ ರಾಜ್ಯದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಹಬ್ಸಿಗುಡಾ ಮತ್ತು ಸೈನಿಕಪುರಿ ನಗರದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಶಾಲೋ ಅಕ್ವಿಫರ್ ಮ್ಯಾನೇಜ್ಮೆಂಟ್ (SAM) ಮಾದರಿಯನ್ನು ಕೈಗೆತ್ತಿಕೊಂಡಿದೆ.
- ಹನ್ನೆರಡು ರಾಷ್ಟ್ರಗಳು ಇತ್ತೀಚೆಗೆ ESA/EU ಬಾಹ್ಯಾಕಾಶ ಮಂಡಳಿಯಲ್ಲಿ ಜೀರೋ ಡೆಬ್ರಿಸ್(ಬಾಹ್ಯಾಕಾಶ ಅವಶೇಷ) ಚಾರ್ಟರ್ಗೆ ಸಹಿ ಹಾಕಿವೆ, ಆ ಮೂಲಕ ಭೂಮಿಯ ಕಕ್ಷೆಯಲ್ಲಿ ಮಾನವ ಚಟುವಟಿಕೆಗಳ ದೀರ್ಘಾವಧಿಯ ಸಮರ್ಥನೀಯತೆಗೆ ತಮ್ಮ ಬದ್ಧತೆಯನ್ನು ಗಟ್ಟಿಗೊಳಿಸಿವೆ. ಸಹಿ ಹಾಕಿದ ದೇಶಗಳು: ಆಸ್ಟ್ರಿಯಾ, ಬೆಲ್ಜಿಯಂ, ಸೈಪ್ರಸ್, ಎಸ್ಟೋನಿಯಾ, ಜರ್ಮನಿ, ಲಿಥುವೇನಿಯಾ, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸ್ಲೋವಾಕಿಯಾ, ಸ್ವೀಡನ್ ಮತ್ತು ಯುನೈಟೆಡ್ ಕಿಂಗ್ಡಮ್
- ಬಚೇಂದ್ರಿ ಪಾಲ್: 1984ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪರ್ವತಾರೋಹಿ ಬಚೇಂದ್ರಿ ಪಾಲ್ ಅವರು ಈ ಶಿಖರ ಆರೋಹಣ ಮಾಡಿ 40 ವರ್ಷಗಳು ಪೂರೈಸಿವೆ. ಈ ಹಿನ್ನೆಲೆಯಲ್ಲಿ ಪಾಲ್ ಅವರು, ಮೌಂಟ್ ಎವರೆಸ್ಟ್ ಚಾರಣ ಮಾಡಿದ 40ನೇ ವಾರ್ಷಿಕೋತ್ಸವವನ್ನು ಆಚರಿಸಿದರು. ಪದ್ಮಭೂಷಣ ಪ್ರಶಸ್ತಿ ಪುರಸ್ಕ್ರತರೂ ಆಗಿರುವ ಪಾಲ್ ಅವರು ‘ವುಮೆನ್ ಅಡ್ವೆಂಚರ್ ನೆಟ್ವರ್ಕ್ ಆಫ್ ಇಂಡಿಯಾ(ಡಬ್ಲುಎಎನ್ಐ) ಎಂಬ ಸಂಘಟನೆ ಸ್ಥಾಪಿಸಿದ್ದಾರೆ. ಜನನ: 24 ಮೇ 1954, ಉತ್ತರಕಾಶಿಯಲ್ಲಿ ಜನಿಸಿದರು
- ಪೂರ್ಣಿಮಾ ಶ್ರೇಷ್ಠ: ನೇಪಾಳದ ಪರ್ವತಾರೋಹಿ ಮತ್ತು ಫೋಟೊ ಜರ್ನಲಿಸ್ಟ್ ಆಗಿರುವ ಪೂರ್ಣಿಮಾ ಶ್ರೇಷ್ಠ ಅವರು ಒಂದೇ ಆರೋಹಣ ಋತುವಿನಲ್ಲಿ ಮೂರು ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನು ಆರೋಹಣ ಮಾಡಿದ ಮೊದಲಿಗರು ಎಂಬ ಇತಿಹಾಸ ನಿರ್ಮಿಸಿದ್ದಾರೆ. ಮೇ 12ರಂದು ಪೂರ್ಣಿಮಾ ಮೊದಲ ಬಾರಿಗೆ ಶಿಖರವನ್ನು ಏರಿದರು. ಬಳಿಕ ಮೇ 19ರಂದು ಪಸಾಂಗ್ ಶೆರ್ಪಾ ಅವರೊಂದಿಗೆ ಮತ್ತೊಮ್ಮೆ ಶಿಖರವನ್ನು ಏರಿದರು. ಮೇ 25 ರಂದು ಮೂರನೇ ಬಾರಿಗೆ ಯಶಸ್ವಿಯಾಗಿ ಶಿಖರವನ್ನು ಏರಿ, ಈ ಸಾಧನೆ ಮಾಡಿದ್ದಾರೆ. ಪೂರ್ಣಿಮಾ ಒಟ್ಟು 4 ಬಾರಿ ಶಿಖರವನ್ನು ಆರೋಹಣ ಮಾಡಿದ್ದಾರೆ. 2018ರಲ್ಲಿ ಅವರು ಮೊದಲ ಬಾರಿಗೆ ಪರ್ವತ ಏರಿದ್ದರು.
- ಕಾಮಿ ರೀಟಾ ಶೆರ್ಪಾ: ನೇಪಾಳದ ಕಾಮಿ ರೀಟಾ 29 ಬಾರಿ ಮೌಂಟ್ ಎವರೆಸ್ಟ್ ಏರುವ ಮೂಲಕ ತಮ್ಮದೇ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಕಳೆದ 30 ವರ್ಷಗಳಲ್ಲಿ ಅವರು 29 ಬಾರಿ ವಿಶ್ವದ ಅತಿ ಎತ್ತರದ ಪರ್ವತವನ್ನು ಏರಿದ್ದಾರೆ.
- ಅಮೆರಿಕ– ಭಾರತ ವಾಣಿಜ್ಯ ಬಾಹ್ಯಾಕಾಶ ಸಮಾವೇಶ: ಜಂಟಿ ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಭಾರತೀಯ ಗಗನಯಾತ್ರಿಗಳಿಗೆ ನಾಸಾ ಶೀಘ್ರದಲ್ಲೇ ಅತ್ಯಾಧುನಿಕ ತರಬೇತಿ ನೀಡಲಿದೆ’ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಅಮೆರಿಕ– ಭಾರತ ವ್ಯಾಪಾರ ಮಂಡಳಿ (ಯುಎಸ್ಐಬಿಸಿ) ಆಯೋಜಿಸಿದ್ದ ಅಮೆರಿಕ– ಭಾರತ ವಾಣಿಜ್ಯ ಬಾಹ್ಯಾಕಾಶ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಪರಿಸರ ವ್ಯವಸ್ಥೆಗಳು, ಭೂಮಿಯ ಮೇಲ್ಮೈ, ನೈಸರ್ಗಿಕ ವಿಪತ್ತುಗಳು, ಸಮುದ್ರ ಮಟ್ಟ ಏರಿಕೆ ಮತ್ತು ಕ್ರಯೋಸ್ಫಿಯರ್ ಮೇಲೆ ಹವಾಮಾನ ಬದಲಾವಣೆಯ ಪ್ರಭಾವ ಸೇರಿದಂತೆ ವಿವಿಧ ವಿದ್ಯಮಾನಗಳ ಎಲ್ಲಾ ಸಂಪನ್ಮೂಲಗಳನ್ನು ಮೇಲ್ವಿಚಾರಣೆ ಮಾಡಲು ಶೀಘ್ರದಲ್ಲೇ ನಿಸಾರ್ (ಎನ್ಐಎಸ್ಎಆರ್) ಉಪಗ್ರಹವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ನಿಸಾರ್ ಉಪಗ್ರಹವು ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಡುವಿನ ಜಂಟಿ ಭೂ-ವೀಕ್ಷಣೆ ಕಾರ್ಯಾಚರಣೆಯಾಗಿದೆ.