Published on: December 29, 2022

ಚುಟುಕು ಸಮಾಚಾರ – 29 ಡಿಸೆಂಬರ್ 2022

ಚುಟುಕು ಸಮಾಚಾರ – 29 ಡಿಸೆಂಬರ್ 2022

  • ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಸದನದ ಪರ್ಯಾಲೋಚನೆಗೆ ಹಾಕಿ ವಿಧೇಯಕ ಧ್ವನಿಮತದ ಮೂಲಕ ಸರ್ವಾನುಮತದ ಅಂಗೀಕಾರಗೊಂಡಿತು.
  • ಸಚಿವೆ ಸ್ಮೃತಿ ಇರಾನಿ ಅವರು ದೇವಳದ ಕಿರುಷಷ್ಠಿ ಮಹೋತ್ಸವದ ಕಾರ್ತಿಕ ವೇದಿಕೆಯಲ್ಲಿ ಪವಿತ್ರ ಶ್ರದ್ಧಾಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೇಂದ್ರ ಸರ್ಕಾರದ ‘ಸ್ವದೇಶಿ ದರ್ಶನ್’ ಯೋಜನೆಯನ್ನು ಜಾರಿಗೆ ತರಲು ಉತ್ಸುಕಳಾ ಗಿದ್ದೇ ನೆ ಎಂದು ಹೇಳಿದರು.
  • ಪಾಕಿಸ್ತಾನ ಮತ್ತು ಚೀನಾ ಗಡಿ ಕಾವಲಿಗೆ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಪ್ರಳಯ ಕ್ಷಿಪಣಿಗಳನ್ನು ನಿಯೋಜನೆ ಮಾಡಲು ರಕ್ಷಣಾ ಇಲಾಖೆ ತೀರ್ಮಾನಿಸಿದ್ದು, 120 ಖಂಡಾತರ ಕ್ಷಿಪಣಿ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. ದೇಶಿ ನಿರ್ಮಿತ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಖಂಡಾಂತರ ಪ್ರಳಯ್ ಕ್ಷಿಪಣಿ ಇತ್ತಿಚೆಗಷ್ಟೇ ಯಶಸ್ವಿ ಪರೀಕ್ಷೆ ನಡೆಸಿತ್ತು.
  • ಅರುಣಾಚಲ ಪ್ರದೇಶದ ತವಾಂಗ್ ವಲಯದ ಯಾಂಗ್ಟ್ಸೆ ಗಡಿ ಪೋಸ್ಟ್, ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಉದ್ವಿಗ್ನತೆಯನ್ನು ಶಮನಗೊಳಿಸುವಂತೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.  ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಉಭಯ ರಾಷ್ಟ್ರಗಳ ಸೇನಾ ತುಕಡಿ ಗಸ್ತು ತಿರುಗುತ್ತದೆ. ಎಲ್ಎಸಿಯಲ್ಲಿ ಚೀನಾ ಸೈನಿಕರ ವರ್ತನೆ ಮೇಲೆ ಕಣ್ಣಿಡಲು ಯಾಂಗ್ಟ್ಸೆ ಚೆಕ್ಪೋಸ್ಟ್ ಅತ್ಯಂತ ಪ್ರಶಸ್ತ ಸ್ಥಳವಾಗಿದೆ
  • ವಿಶ್ವಕಪ್‌ ಗೆದ್ದ ಅರ್ಜೆಂಟೀನಾ ತಂಡ, ಫಿಫಾ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಬ್ರೆಜಿಲ್‌ ತಂಡ ಅಗ್ರಸ್ಥಾನ ತನ್ನಲ್ಲೇ ಉಳಿಸಿಕೊಂಡಿದೆ. ಫಿಫಾ ರ‍್ಯಾಂಕಿಂಗ್ (ಅಗ್ರ 10 ಸ್ಥಾನ): 1. ಬ್ರೆಜಿಲ್, 2.ಅರ್ಜೆಂ ಟೀನಾ, 3.ಫ್ರಾನ್ಸ್, 4.ಬೆಲ್ಜಿಯಂ, 5.ಇಂಗ್ಲೆಂಡ್, 6.ನೆದರ್ಲೆಂ‌ಡ್ಸ್, 7.ಕ್ರೊವೇಷ್ಯಾ, 8.ಇಟಲಿ, 9.ಪೋರ್ಚುಗಲ್, 10. ಸ್ಪೇ ನ