Published on: January 30, 2024
ಚುಟುಕು ಸಮಾಚಾರ : 30 ಜನವರಿ 2024
ಚುಟುಕು ಸಮಾಚಾರ : 30 ಜನವರಿ 2024
- ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜನರಿಗೆ ಸರ್ಕಾರಿ ಸೇವೆಗಳನ್ನು ನೀಡಲು ಜನಮಿತ್ರರನ್ನು ನೇಮಕ ಮಾಡಲಾಗುತ್ತದೆ.
- ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ 25 ಸಾವಿರ ಜನಮಿತ್ರರನ್ನು ನೇಮಕ ಮಾಡಲಿದೆ. ಸರ್ಕಾರದ ಇ-ಆಡಳಿತ ಇಲಾಖೆಯ ಮೂಲಕ ಜನಮಿತ್ರರ ನೇಮಕ ನಡೆಯಲಿದೆ ಮತ್ತು ನೇಮಕವಾಗುವವರಿಗೆ ಇ-ಆಡಳಿತ ಇಲಾಖೆಯ ಮೂಲಕ ತರಬೇತಿ ಸಹ ನೀಡಲಾಗುತ್ತದೆ.
- ಒಡಿಶಾ ಸರ್ಕಾರ ಇತ್ತೀಚೆಗೆ ವಿಶ್ವದ ಮೊದಲ ಮೆಲನಿಸ್ಟಿಕ್ ಟೈಗರ್ ಸಫಾರಿ ಸ್ಥಾಪಿಸುವುದಾಗಿ ಘೋಷಿಸಿದೆ. ಸಫಾರಿಯನ್ನು ಮಯೂರ್ಭಂಜ್ನ ಜಿಲ್ಲಾ ಕೇಂದ್ರವಾದ ಬರಿಪದ ಬಳಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಇದು ಮಯೂರ್ಭಂಜ್ನಲ್ಲಿರುವ ಸಿಮಿಲಿಪಾಲ್ ಟೈಗರ್ ರಿಸರ್ವ್ (STR) ಬಳಿ ಇದೆ.
- ಹೊಸ ಆಧಾರ್ ಕಾರ್ಡ್ನ ಅಸಲು ಪ್ರತಿಗಳನ್ನು ಮತ್ತು PDF ಆವೃತ್ತಿಗಳನ್ನು “ಗುರುತಿನ ಪುರಾವೆಗಳು, ಹೊರತು ಪೌರತ್ವ ಅಥವಾ ಜನ್ಮದಿನಾಂಕದ ಪುರಾವೆಗಳಲ್ಲ ಎಂಬ ಸ್ಪಷ್ಟವಾದ ಉಲ್ಲೇಖದೊಂದಿಗೆ ನೀಡಲಾಗುತ್ತಿದೆ.
- ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ಇಲ್ಲಿನ ವಿಜಯ್ ಚೌಕ್ನಲ್ಲಿ(ರೈಸಿನಾ ಹಿಲ್ಸ್) ‘ಬೀಟಿಂಗ್ ರೀಟ್ರೀಟ್’ ಕಾರ್ಯ ಕ್ರಮ ನಡೆಯಿತು . ಕಾರ್ಯ ಕ್ರಮದಲ್ಲಿ ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಸಿಆರ್ಪಿಎಫ್ನ ಬ್ಯಾಂಡ್ಗಳು 31 ಭಾರತೀಯ ಗೀತೆಗಳನ್ನು ನುಡಿಸಿದವು.
- ಒಡಿಶಾದ ಭುವನೇಶ್ವರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು(ಏಮ್ಸ್) ರಾಜ್ಯದ ಕೊರ್ಧಾ ಜಿಲ್ಲೆಯಲ್ಲಿಯ ತಂಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಕ್ತದ ಚೀಲವನ್ನು ಡ್ರೋನ್ ಮೂಲಕ ರವಾನಿಸಿದೆ. ಇದು ಭುವನೇಶ್ವರದ ಏಮ್ಸ್ನ ‘ಡ್ರೋನ್ ಆರೋಗ್ಯ ಸೇವೆ’ಯ ಉದ್ಘಾಟನಾ ಹಾರಾಟವಾಗಿತ್ತು. ಮೊದಲ
- ಡ್ರೋನ್ ಬಳಸಿ ರಕ್ತ ರವಾನಿಸುತ್ತಿರುವುದು ಇದು ದೇಶದಲ್ಲೇ ಮೊದಲ ಉಪಕ್ರಮ ಎಂದು ಏಮ್ಸ್ನ ಪ್ರಕಟಣೆಯಲ್ಲಿ ಹೇಳಲಾಗಿದೆ. ಸ್ಕೈ ಏರ್ ಮೊಬಿಲಿಟಿ ಎಂಬ ಸಂಸ್ಥೆ ಡ್ರೋನ್ ಸೇವೆಯನ್ನು ಭುವನೇಶ್ವರ ಏಮ್ಸ್ಗೆ ಒದಗಿಸುತ್ತಿದೆ.