Published on: April 4, 2023

ಚುಟುಕು ಸಮಾಚಾರ – 4 ಏಪ್ರಿಲ್ 2023

ಚುಟುಕು ಸಮಾಚಾರ – 4 ಏಪ್ರಿಲ್ 2023

  • ಜೈನ ಧರ್ಮದ 24ನೇ ಹಾಗೂ ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರರ ಜನ್ಮ ದಿನವನ್ನು ಮಹಾವೀರ ಜಯಂತಿ ಎಂದು ಆಚರಿಸಲಾಗುತ್ತದೆ. ಈ ಬಾರಿ ಮಹಾವೀರ ಜಯಂತಿಯನ್ನು 2023 ರ ಏಪ್ರಿಲ್ 4 ರಂದು ಆಚರಿಸಲಾಗುತ್ತಿದೆ. ಜೈನ ಸಮೂದಾಯಕ್ಕೆ ಸೇರಿದವರು ಹೆಚ್ಚಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಮಹಾವೀರನು ವಜ್ಜಿ ರಾಜವಂಶದಲ್ಲಿ  ಕ್ರಿ.ಪೂ. 540 ರಲ್ಲಿ ವೈಶಾಲಿಯ ಕುಂದಗ್ರಾಮದ ರಾಜ ಸಿದ್ಧಾರ್ಥ ಮತ್ತು ರಾಣಿ ತ್ರಿಶಾಲಾ(ಲಿಚ್ಛವಿ ರಾಜಕುಮಾರಿ), ಅವರ ಮೂರನೇ ಮಗುವಾಗಿ ಜನಿಸಿದರು. ಮಹಾವೀರನು ಇಕ್ಷ್ವಾಕು ವಂಶಕ್ಕೆ ಸೇರಿದವನು. ಭಗವಾನ್ ಮಹಾವೀರನನ್ನು ವರ್ಧಮಾನ ಎಂದು ಕರೆಯಲಾಯಿತು, ಇದರರ್ಥ “ಬೆಳೆಯುವವನು”.
  • ರಾಸಾಯನಿಕ-ಮುಕ್ತ ಮತ್ತು ಹವಾಮಾನ-ಸ್ಮಾರ್ಟ್ ಕೃಷಿಯನ್ನು ಉತ್ತೇಜಿಸಲು ಭಾರತ ಸರ್ಕಾರವು ಪ್ರತ್ಯೇಕ ಮತ್ತು ಸ್ವತಂತ್ರ ಯೋಜನೆಯಾಗಿ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (NMNF) ಅನ್ನು ಪ್ರಾರಂಭಿಸಿದೆ.
  • ಭಾರತ ಮತ್ತು ಮಲೇಷ್ಯಾ ನಡುವಿನ ವ್ಯಾಪಾರ ವಹಿವಾಟುಗಳು ಇನ್ನು ಮುಂದೆ ರೂಪಾಯಿಯಲ್ಲೇ ನಡೆಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 2022 ಜುಲೈನಲ್ಲಿ ಭಾರತೀಯ ಕರೆನ್ಸಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದ ಇತ್ಯರ್ಥಕ್ಕೆ ಅವಕಾಶ ನೀಡುವ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರವನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಕೌಲಾಲಂಪುರ್ನಲ್ಲಿರುವ ಇಂಡಿಯಾ ಇಂಟರ್ನ್ಯಾಶನಲ್ ಬ್ಯಾಂಕ್ ಆಫ್ ಮಲೇಷಿಯಾ (IIBM), ಭಾರತದಲ್ಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ವಿಶೇಷ ರೂಪಾಯಿ ವೋಸ್ಟ್ರೋ ಖಾತೆಯನ್ನು ತೆರೆಯುವ ಮೂಲಕ ಈ ಕಾರ್ಯವಿಧಾನವನ್ನು ಕಾರ್ಯಗತಗೊಳಿಸಿದೆ.