Published on: July 5, 2024

ಚುಟುಕು ಸಮಾಚಾರ :4 ಜುಲೈ 2024

ಚುಟುಕು ಸಮಾಚಾರ :4 ಜುಲೈ 2024

  • ಸಂಪೂರ್ಣ ಬಿದಿರಿನ ಅಲಂಕಾರ (ಬಂಬೂ ಥೀಮ್)ದ ಮೆಟ್ರೋ ರೈಲು ನಿಲ್ದಾಣ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಇಂಥ ನಿಲ್ದಾಣ ದೇಶದಲ್ಲೇ ಮೊದಲನೆಯದಾಗಿದೆ.
  • ಮೆಟ್ರೋ ನಿಲ್ದಾಣ ನಿರ್ಮಿಸಲು ಬಂಬೂ ಸೊಸೈಟಿ ಆಫ್ ಇಂಡಿಯಾ (ಬಿಎಸ್ಐ) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್)ಗೆ ಪ್ರಸ್ತಾವನೆ ಸಲ್ಲಿಸಿದೆ. ನಿಲ್ದಾಣದ ತೆರೆದ ಪ್ರದೇಶಗಳು ಮತ್ತು ಅಲಂಕಾರಕ್ಕೆ ತ್ರಿಪುರಾದ ‘ಬಂಬುಸಾ ತುಲ್ಡಾ’ ಪ್ರಭೇದದ ಬಿದಿರನ್ನು ಬಳಸಲಾಗುವುದು. ನಿಧಿ ನೆರವು: ಮೆಟ್ರೋ ನಿಲ್ದಾಣದ ಅಭಿವೃದ್ಧಿ ಮತ್ತು ಹಳಿಯ ಕೆಳಭಾಗದಲ್ಲಿನ ಹಸಿರೀಕರಣಕ್ಕೆ ಬಿಎಂಆರ್ಸಿಎಲ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ನೆರವು ಪಡೆಯಲು ಉದ್ದೇಶಿಸಲಾಗಿದೆ.
  • ಭಾರತೀಯ ಸೇನೆಯ ತುಕಡಿಯು ಭಾರತ-ಥೈಲ್ಯಾಂಡ್ ಜಂಟಿ ಮಿಲಿಟರಿ ವ್ಯಾಯಾಮ ಮೈತ್ರೀ (MAITREE) ನಲ್ಲಿ ಭಾಗವಹಿಸಿದೆ. ಇದು 13 ನೇ ಆವೃತ್ತಿಯಾಗಿದೆ. 2024 ರ ಜುಲೈ 1 ರಿಂದ 15 ರವರೆಗೆ ಥಾಯ್ಲೆಂಡ್ನ ತಕ್ ಪ್ರಾಂತ್ಯದ ಫೋರ್ಟ್ ವಚಿರಪ್ರಕನ್ನಲ್ಲಿ ವ್ಯಾಯಾಮವನ್ನು ನಡೆಸಲು ನಿರ್ಧರಿಸಲಾಗಿದೆ. ಹಿಂದಿನ ಆವೃತ್ತಿಯನ್ನು ಮೇಘಾಲಯದ ಉಮ್ರೋಯ್ನಲ್ಲಿ ಸೆಪ್ಟೆಂಬರ್ 2019 ರಲ್ಲಿ ನಡೆಸಲಾಗಿತ್ತು. ಭಾರತೀಯ ಸೇನಾ ತುಕಡಿಯನ್ನು ಮುಖ್ಯವಾಗಿ ಲಡಾಖ್ ಸ್ಕೌಟ್ಸ್ನ ಬೆಟಾಲಿಯನ್ ಮತ್ತು ಇತರ ಶಸ್ತ್ರಾಸ್ತ್ರ ಮತ್ತು ಸೇವೆಗಳ ಸಿಬ್ಬಂದಿ ಪ್ರತಿನಿಧಿಸುತ್ತಿದ್ದಾರೆ.
  • ಇತ್ತೀಚೆಗೆ, ಪ್ರಧಾನಮಂತ್ರಿಯವರು ತಮ್ಮ ಇತ್ತೀಚಿನ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ ಸಂಚಿಕೆಯಲ್ಲಿ ಆಂಧ್ರಪ್ರದೇಶದ ಅರಕು ಕಾಫಿಯ ವಿಶಿಷ್ಟ ಪರಿಮಳ ಮತ್ತು ಮಹತ್ವವನ್ನು ಶ್ಲಾಘಿಸಿದರು. ಪೂರ್ವ ಘಟ್ಟಗಳಲ್ಲಿರುವ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ್ ರಾಜು ಜಿಲ್ಲೆಯ ಅರಕು ಕಣಿವೆಯಲ್ಲಿ ಅರಕು ಕಾಫಿಯನ್ನು ಬೆಳೆಯಲಾಗುತ್ತದೆ. ಕೆಫೆ ಡಿ ಕೊಲಂಬಿಯಾ ಸ್ಪರ್ಧೆಯಲ್ಲಿ “ಅತ್ಯುತ್ತಮ ರೋಬಸ್ಟಾ” ಸೇರಿದಂತೆ ಅರಕು ಕಾಫಿ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಇದು 2019 ರಲ್ಲಿ ಭೌಗೋಳಿಕ ಸೂಚಕ (GI) ಟ್ಯಾಗ್ ಅನ್ನು ಪಡೆದುಕೊಂಡಿದೆ.
  • ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ರಾಷ್ಟ್ರೀಯ ಅಂಕಿಅಂಶ ದಿನ(National Statistics Day)ದ ಮುನ್ನಾದಿನದಂದು ಬಳಕೆದಾರರ ಅನುಭವವನ್ನು ಹೆಚ್ಚಿಸಲು ಮತ್ತು ಅಧಿಕೃತ ಅಂಕಿಅಂಶಗಳಿಗೆ ಸುಲಭ ಪ್ರವೇಶವನ್ನು ಒದಗಿಸಲು eSankhyiki ಪೋರ್ಟಲ್ (https://esankhyiki.mospi.gov.in) ಅನ್ನು ಪ್ರಾರಂಭಿಸಿದೆ.
  • ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಝೀಕಾ ವೈರಸ್ನ ಕೆಲವು ಪ್ರಕರಣಗಳು ಪತ್ತೆಯಾದ ಕಾರಣ ಕೇಂದ್ರ ಆರೋಗ್ಯ ಸಚಿವಾಲಯವು ದೇಶದಾದ್ಯಂತ ಎಲ್ಲ ರಾಜ್ಯಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ. ಝೀಕಾ ವೈರಸ್, ಸೊಳ್ಳೆಯಿಂದ ಹರಡುವ ಫ್ಲೇವಿವೈರಸ್, ಇದು ಪ್ರಾಥಮಿಕವಾಗಿ ಈಡಿಸ್ ಸೊಳ್ಳೆಗಳಿಂದ, ವಿಶೇಷವಾಗಿ ಈಡಿಸ್ ಈಜಿಪ್ಟಿಯಿಂದ ಹರಡುತ್ತದೆ. ಅಲ್ಲದೆ, ಇದು ಗರ್ಭಾವಸ್ಥೆಯಲ್ಲಿ ತಾಯಿಯಿಂದ ಭ್ರೂಣಕ್ಕೆ, ಲೈಂಗಿಕ ಸಂಪರ್ಕ, ರಕ್ತ ಮತ್ತು ರಕ್ತದ ಉತ್ಪನ್ನಗಳ ವರ್ಗಾವಣೆಯ ಮೂಲಕವೂ ಹರಡಬಹುದು. ಇದು ಮಾರಣಾಂತಿಕವಲ್ಲದಿದ್ದರೂ, ಗರ್ಭಿಣಿಯರಿಗೆ ಜನಿಸುವ ಶಿಶುಗಳಲ್ಲಿ ‘ಮೈಕ್ರೊಸೆಫಾಲಿ’ (ತಲೆಯು ನಿರೀಕ್ಷೆಗಿಂತ ಚಿಕ್ಕದಾಗಿರುವ ಸ್ಥಿತಿ) ಬಂದೆರಗಬಹುದು. ಈ ವೈರಸ್ ಆರ್ ಏನ್ ಎ ಜೀನೋಮ್ ಅನ್ನು ಹೊಂದಿದೆ, ಹೀಗಾಗಿ ರೂಪಾಂತರ ಹೊಂದಲು  ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
  • ಮಹಾರಾಷ್ಟ್ರದ ನಾಗ್ಪುರದಲ್ಲಿ ಬಸ್ ಸಖಿ(ಬಸ್ ಹೊಸ್ಟೆಸ್) ಯರನ್ನು ಒಳಗೊಂಡ ವಿಮಾನದಂತಹ ಆಸನಗಳ್ಳುಳ್ಳ 132 ಆಸನಗಳ ಎಸಿ ಬಸ್ ಅನ್ನು ಪ್ರಾಯೋಗಿಕವಾಗಿ ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.  ತಯಾರಕರು: ಸ್ಕೋಡಾ ಮತ್ತು ಟಾಟಾ ಮೊಟಾರ್ಸ್ ಸಹಭಾಗಿತ್ವ ಇದಕ್ಕೆ ಸ್ಪೂರ್ತಿ ಜೆಕ್ ಗಣರಾಜ್ಯ ದೇಶವಾಗಿದೆ. ಇದು ನಿಸರ್ಗ ಸ್ನೇಹಿ ಬಸ್ ಆಗಿದೆ ಏಕೆಂದರೆ ಶೇ. 60 ವಿದ್ಯುತ್, ಶೇ. 40 ಎಥೆನಾಲ್ ಇದರ ಇಂಧನ ಶಕ್ತಿಯಾಗಿದೆ.
  • 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಪಾನ್ ಹೊಸ ನೋಟುಗಳನ್ನು ಚಲಾವಣೆಗೆ ಬಿಡುಗಡೆ ಮಾಡಿದೆ. ಹೊಸ ನೋಟುಗಳು 3 – ಡಿ ಹಾಲೊಗ್ರಾಮ್ ತಂತ್ರಜ್ಞಾನವನ್ನು ಹೊಂದಿವೆ. ಜಗತ್ತಿನಲ್ಲೇ ಪೇಪರ್ ಕರೆನ್ಸಿಯಲ್ಲಿ ಈ ತಂತ್ರಜ್ಞಾನವನ್ನು ಜಾರಿಗೆ ತಂದ ಮೊದಲ ದೇಶವಾಗಿದೆ. ನಕಲಿ ನೋಟುಗಳ ಹಾವಳಿ ತಡೆಯಲು ನೂತನ ನೋಟುಗಳಲ್ಲಿ 3 – ಡಿ ಹಾಲೊಗ್ರಾಮ್ ತಂತ್ರಜ್ಞಾನವನ್ನು ಜಾರಿಗೆ ತರಲಾಗಿದೆ.
  • ಸ್ನೋಬ್ಲೈಂಡ್ (snowblind) ಹೊಸ ಆಂಡ್ರಾಯ್ಡ್ ಮಾಲ್‌ವೇರ್ ಆಗಿದ್ದು, ಇದು ಲಿನಕ್ಸ್ ಕರ್ನಲ್ ಮತ್ತು ಆಂಡ್ರಾಯ್ಡ್ ಓಎಸ್‌ನ ಭಾಗವಾದ ‘ಸೆಕ ಕಾಂಪ್’ (ಸುರಕ್ಷಿತ ಕಂಪ್ಯೂಟಿಂಗ್) ಎಂಬ ಅಂತರ್ನಿರ್ಮಿತ ಆಂಡ್ರಾಯ್ಡ್ ಭದ್ರತಾ ವೈಶಿಷ್ಟ್ಯವನ್ನು ಬಳಸಿಕೊಳ್ಳುವ ಮೂಲಕ ಬ್ಯಾಂಕಿಂಗ್ ರುಜುವಾತು(credentials)ಗಳನ್ನು ಗುರಿಯಾಗಿಸುತ್ತದೆ. ಇದು ಸೂಕ್ಷ್ಮ ಮಾಹಿತಿಯನ್ನು ಹೊರತೆಗೆಯಲು ಮತ್ತು ರಿಮೋಟ್ ಪ್ರವೇಶವನ್ನು ಪಡೆಯಲು ಅನುಮತಿಸುತ್ತದೆ. ಬಯೋಮೆಟ್ರಿಕ್ ಮತ್ತು ಎರಡು ಅಂಶಗಳ ದೃಢೀಕರಣವನ್ನು ನಿಷ್ಕ್ರಿಯಗೊಳಿಸುತ್ತದೆ.ಇದು ಮುಖ್ಯವಾಗಿ ವಿಶ್ವಾಸಾರ್ಹವಲ್ಲದ ಮೂಲಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚು ಸಕ್ರಿಯವಾಗಿದೆ. Play Store ನಲ್ಲಿ ಯಾವುದೇ ಅಪ್ಲಿಕೇಶನ್‌ಗಳು ಸೋಂಕಿಗೆ ಒಳಗಾಗಿಲ್ಲ ಎಂದು Google ದೃಢಪಡಿಸಿದೆ, ಬಳಕೆದಾರರು Play Store ಅಪ್ಲಿಕೇಶನ್‌ಗಳಿಂದ ಡೌನಲೋಡ್ ಮಾಡಿದರೆ ಸುರಕ್ಷಿತ ಎಂದು ಸೂಚಿಸುತ್ತದೆ
  • ಗುಲ್ಜಾರಿಲಾಲ್ ನಂದಾ:
  • ಇವರು ಒಬ್ಬ ಭಾರತೀಯ ರಾಜಕಾರಣಿ ಮತ್ತು ಅರ್ಥಶಾಸ್ತ್ರಜ್ಞರಾಗಿದ್ದು, ಅವರು ಕಾರ್ಮಿಕ ಸಮಸ್ಯೆಗಳಲ್ಲಿ ಪರಿಣತಿ ಹೊಂದಿದ್ದರು.
  • ಅವರು 1964 ರಲ್ಲಿ ಜವಾಹರಲಾಲ್ ನೆಹರು ಮತ್ತು 1966 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಮರಣದ ನಂತರ ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿದ್ದರು.
  • ಶ್ರೀ ನಂದಾ ಅವರು 1957 ರ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆಗೆ ಚುನಾಯಿತರಾದರು ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯೋಜನಾ ಸಚಿವರಾಗಿ ನೇಮಕಗೊಂಡರು ಮತ್ತು ನಂತರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡರು.
  • ಜನನ: 4 ಜುಲೈ 1898, ಸಿಯಾಲ್ಕೋಟ್, ಪಾಕಿಸ್ತಾನ
  • ಮರಣ: 15 ಜನವರಿ 1998 (ವಯಸ್ಸು 99 ವರ್ಷ), ಅಹಮದಾಬಾದ್
  • ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್