Published on: May 6, 2023

ಚುಟುಕು ಸಮಾಚಾರ : 4-5 ಮೇ 2023

ಚುಟುಕು ಸಮಾಚಾರ : 4-5 ಮೇ 2023

  • ನ್ಯೂಕ್ಲಿಯರ್ ಪವರ್ ಪ್ರಾಜೆಕ್ಟ್ಗಳ ಅಭಿವೃದ್ಧಿಗಾಗಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್) ನೊಂದಿಗೆ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ (ಎನ್ಟಿಪಿಸಿ) ಲಿಮಿಟೆಡ್ ಪೂರಕ ಜಂಟಿ ಉದ್ಯಮ ಒಪ್ಪಂದಕ್ಕೆ ಸಹಿ ಹಾಕಿದೆ.  ಆರಂಭದಲ್ಲಿ, ಈ ಜಂಟಿ ಕಂಪನಿಯು ಎರಡು ಪ್ರೆಶರೈಸ್ಡ್ ಹೆವಿ-ವಾಟರ್ ರಿಯಾಕ್ಟರ್ (PHWR) ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತದೆ, ಚುಟ್ಕಾ ಮಧ್ಯಪ್ರದೇಶ ಪರಮಾಣು ವಿದ್ಯುತ್ ಯೋಜನೆ 2×700 MW ಮತ್ತು ಮಹಿ ಬನ್ಸ್ವಾರಾ ರಾಜಸ್ಥಾನ ಪರಮಾಣು ವಿದ್ಯುತ್ ಯೋಜನೆ 4×700 MW, ಇವುಗಳನ್ನು ಫ್ಲೀಟ್ ಮೋಡ್ ಪರಮಾಣು ಯೋಜನೆಗಳ ಭಾಗವಾಗಿ ಗುರುತಿಸಲಾಗಿದೆ.
  • ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಒಂದನ್ನು ನೀಡಿದೆ. ವಿಚ್ಛೇದನ ಪಡೆಯಲು ಇನ್ಮುಂದೆ ಆರು ತಿಂಗಳು ಕಾಯುವ ಬದಲು, ದಂಪತಿಗಳಿಬ್ಬರ ಒಪ್ಪಿಗೆ ಇದ್ದರೆ ತಕ್ಷಣವೇ ವಿಚ್ಛೇದನವನ್ನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪರಸ್ಪರ ಒಪ್ಪಿಗೆ ಇದ್ದರೇ ವಿವಾಹ ವಿಚ್ಛೇದನ ಪಡೆಯಲು ಸಂವಿಧಾನದ ವಿಧಿ 142ರ ಅಡಿಯಲ್ಲಿ ಮುರಿದುಹೋದ ವಿವಾಹಗಳನ್ನು ವಿಸರ್ಜಿಸುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
  • ರಾಷ್ಟ್ರ ನಿರ್ಮಾಣದಲ್ಲಿ ತನ್ನ ಕರ್ಮಯೋಗಿಗಳ ‘ ತ್ಯಾಗ ಮತ್ತು ಕೊಡುಗೆ’ಯನ್ನು ಸ್ಮರಿಸಲು , ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) 64 ನೇ BRO ದಿನಾಚರಣೆಯ ಅಂಗವಾಗಿ “ಏಕತಾ ಏವಂ ಶ್ರದಾಂಜಲಿ ಅಭಿಯಾನ” ಅನ್ನು ಅನ್ನು ಆಯೋಜಿಸಿದೆ.