Published on: April 6, 2023

ಚುಟುಕು ಸಮಾಚಾರ: 5 ಏಪ್ರಿಲ್ 2023

ಚುಟುಕು ಸಮಾಚಾರ: 5 ಏಪ್ರಿಲ್ 2023

  • ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕರ್ನಾಟಕ ಅಂಚೆ ಇಲಾಖೆಯು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) 2023 ಎಂಬ ಹೊಸ ಯೋಜನೆಯನ್ನು ಹೊರತಂದಿದೆ. ಇದರ ಪ್ರಮುಖ ವೈಶಿಷ್ಟ್ಯಗಳೆಂದರೆ ಎರಡು ವರ್ಷಗಳ ಅವಧಿಯಲ್ಲಿ ಶೇಕಡಾ 7.5ರಷ್ಟು ಸ್ಥಿರ ಬಡ್ಡಿ, ಎರಡು ವರ್ಷಗಳ ಅವಧಿಯಲ್ಲಿ ಗರಿಷ್ಠ ಸೀಲಿಂಗ್ ಮಿತಿ 2 ಲಕ್ಷ ರೂಪಾಯಿ ಮತ್ತು ಒಂದು ವರ್ಷದ ನಂತರ ಭಾಗಶಃ ಹಿಂಪಡೆಯುವಿಕೆ ಸಾಧ್ಯವಾಗುತ್ತದೆ. ಇದು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರ್ಥಿಕ ಸೇರ್ಪಡೆಯನ್ನು ತರುವ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿದೆ.
  • ಅಂಕೋಲಾದ ಕರಿ ಇಷಾಡ ಮಾವಿನ ಹಣ್ಣಿಗೆ ಭೌಗೋಳಿಕ ಗುರುತು (ಜಿ.ಐ ಟ್ಯಾಗ್) ದೊರೆತಿದ್ದು ಶಿರಸಿ ಸುಪಾರಿ ಬಳಿಕ ಈ ಗುರುತು ಪಡೆದ ಜಿಲ್ಲೆಯ ಎರಡನೆ ಬೆಳೆಯಾಗಿದೆ. ಅದ್ರಲ್ಲೂ ಅಂಕೋಲಾ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಹಾಲಕ್ಕಿ ಸಮುದಾಯದವರು ಈ ಮಾವನ್ನ ಬೆಳೆಯುತ್ತಾರೆ. ಕರ್ನಾಟಕವು ಅತಿ ಹೆಚ್ಚು ಜಿಐ ಟ್ಯಾಗ್ (ಸುಮಾರು 46 ಉತ್ಪನ್ನಗಳು) ಉತ್ಪನ್ನಗಳನ್ನು ಹೊಂದಿರುವ ರಾಜ್ಯವಾಗಿದೆ.
  • ಉತ್ತಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದಿದೆ. 1 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ 18 ದೊಡ್ಡ ಮತ್ತು ಮಧ್ಯಮ ಗಾತ್ರ ರಾಜ್ಯಗಳ  ವ್ಯಾಪ್ತಿಯಲ್ಲಿ  ಅಗ್ರ ಸ್ಥಾನ ಪಡೆದಿದೆ. ವರದಿ ನೀಡುವವರು :ಟಾಟಾ ಟ್ರಸ್ಟ್ನಿಂದ ಭಾರತೀಯ ನ್ಯಾಯಾಂಗ ವರದಿಯನ್ನು 2019ರಿಂದ ಪ್ರಕಟ ಮಾಡುತ್ತಿದೆ. 1 ಕೋಟಿಗೂ ಕಡಿಮೆ ಜನಸಂಖ್ಯೆ ಇರುವ 7 ಸಣ್ಣ ರಾಜ್ಯಗಳ ಪೈಕಿ ಸಿಕ್ಕಿಂ ಮೊದಲ ಸ್ಥಾನ ಪಡೆದಿದೆ.
  • ವಿಶ್ವದ ಅತೀದೊಡ್ಡ ಸೇನಾ ಮೈತ್ರಿಕೂಟ ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಷನ್) 31ನೇ ಸದಸ್ಯ ರಾಷ್ಟ್ರವಾಗಿ ಫಿನ್ಲೆಂಡ್ ಸೇರ್ಪಡೆಗೊಂಡಿದೆ.