Published on: March 6, 2024
ಚುಟುಕು ಸಮಾಚಾರ : 5 ಮಾರ್ಚ್ 2024
ಚುಟುಕು ಸಮಾಚಾರ : 5 ಮಾರ್ಚ್ 2024
- ಕೀನ್ಯಾದ ನೈರೋಬಿಯಲ್ಲಿ ನಡೆದ ತನ್ನ ಆರನೇ ಅಧಿವೇಶನದಲ್ಲಿ, ವಿಶ್ವಸಂಸ್ಥೆಯ ಪರಿಸರ ಅಸೆಂಬ್ಲಿ (UNEA) ಭಾರತವು ಸಲ್ಲಿಸಿದ ಸುಸ್ಥಿರ ಜೀವನಶೈಲಿಯ ಕುರಿತು ನಿರ್ಣಯವನ್ನು ಅಂಗೀಕರಿಸಿತು. ಈ ನಿರ್ಣಯವನ್ನು ಶ್ರೀಲಂಕಾ ಮತ್ತು ಬೊಲಿವಿಯಾ ಸಹ ಪ್ರಾಯೋಜಿಸಿದೆ.
- ಸಮುದ್ರ ಲಕ್ಷ್ಮಣ ವ್ಯಾಯಾಮವನ್ನು ವಿಶಾಖಪಟ್ಟಣಂ ಕರಾವಳಿಯಲ್ಲಿ ನಡೆಯಿತು. ಇದು ಭಾರತ ಮತ್ತು ಮಲೇಷ್ಯಾ ನೌಕಾಪಡೆಗಳ ನಡುವೆ ನಡೆಸಲಾದ ದ್ವಿಪಕ್ಷೀಯ ಕಡಲ ವ್ಯಾಯಾಮವಾಗಿದೆ. ಭಾಗವಹಿಸುವವರು: ಇಂಡಿಯನ್ ನೇವಲ್ ಶಿಪ್ ಕಿಲ್ತಾನ್ ಮತ್ತು ರಾಯಲ್ ಮಲೇಷಿಯನ್ ಶಿಪ್ KD ಲೆಕಿರ್
- ಭಾರತೀಯ ನೌಕಾಪಡೆಯು ಹೊಸದಾಗಿ ಸೇರ್ಪಡೆಗೊಂಡ MH 60R ಸೀಹಾಕ್ (ಬ್ಲ್ಯಾಕ್ಹಾಕ್ ಹೆಲಿಕಾಪ್ಟರ್ನ ಕಡಲ ರೂಪಾಂತರ) ಬಹು-ಪಾತ್ರ ಹೆಲಿಕಾಪ್ಟರ್ ಅನ್ನು ಮಾರ್ಚ್ 6 ರಂದು ಕೇರಳದ ಕೊಚ್ಚಿಯ INS ಗರುಡಾದಲ್ಲಿ ನಿಯೋಜಿಸಲಿದೆ.
- ಇತ್ತೀಚೆಗೆ, ಕಟಕ್ ರೂಪಾ ತಾರಕಾಸಿ (ಸಿಲ್ವರ್ ಫಿಲಿಗ್ರೀ) ಒಡಿಶಾ, ನರಸಾಪುರ ಕ್ರೋಚೆಟ್ ಲೇಸ್ ಉತ್ಪನ್ನಗಳು ನರಸಾಪುರ (ಆಂಧ್ರಪ್ರದೇಶ), ಬಾಂಗ್ಲಾರ್ ಮಸ್ಲಿನ್(ಪಶ್ಚಿಮ ಬಂಗಾಳ), ರತ್ಲಾಮ್ ರಿಯಾವಾನ್ ಲಹ್ಸುನ್ (ಬೆಳ್ಳುಳ್ಳಿ)(ಮಧ್ಯಪ್ರದೇಶ), ಅಂಬಾಜಿ ವೈಟ್ ಮಾರ್ಬಲ್(ಗುಜರಾತ್), ಮಜುಲಿ ಮಾಸ್ಕ್ (ಅಸ್ಸಾಂ) ಮತ್ತು ಮಜುಲಿ ಹಸ್ತ(ಮನುಸ್ಕ್ರಿಪ್ಟ್) ವರ್ಣಚಿತ್ರ(ಅಸ್ಸಾಂ)ಗಳಿಗೆ ಭೌಗೋಳಿಕ ಸೂಚ್ಯಂಕ(GI)ವನ್ನು ನೀಡಲಾಗಿದೆ.