Published on: October 7, 2023
ಚುಟುಕು ಸಮಾಚಾರ : 6 ಅಕ್ಟೋಬರ್ 2023
ಚುಟುಕು ಸಮಾಚಾರ : 6 ಅಕ್ಟೋಬರ್ 2023
- ಜನರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಗೃಹ ಆರೋಗ್ಯ ಮತ್ತು ಆಶಾಕಿರಣ ಎಂಬ ಎರಡು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಗೃಹ ಆರೋಗ್ಯ’ ಯೋಜನೆಯಡಿ ಎಂಟು ಜಿಲ್ಲೆಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪರೀಕ್ಷೆ ಮಾಡಲಿದ್ದಾರೆ. ಆಶಾಕಿರಣ ಯೋಜನೆಯಡಿ ಎಂಟು ಜಿಲ್ಲೆಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಸದಸ್ಯರ ಕಣ್ಣು ತಪಾಸಣೆ ನಡೆಸಲಿದ್ದಾರೆ. ಈ ಎಲ್ಲ ತಪಾಸಣೆಗಳು ಉಚಿತವಾಗಿರಲಿವೆ
- ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ.ದೇಶದಲ್ಲಿ ಗರಿಷ್ಠ ಅರಿಶಿನ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ಅರಿಶಿನ ಬೆಳೆಗಾರ ರೈತರ ಹಿತ ಕಾಯುವಂಥ ನಿರ್ಧಾರ ಮಾಡಿದ ಕೇಂದ್ರ ಸರ್ಕಾರ, ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದೆ.
- ನಿಜವಾದ ಚರ್ಮ ಮತ್ತು ಸಿಂಥೆಟಿಕ್ ಚರ್ಮವನ್ನೇ ಹೋಲುವ ಹಾಗೂ ಅಂತಹ ಅನುಭವವನ್ನೇ ನೀಡುವ ‘ಸಸ್ಯಮೂಲ ಚರ್ಮ’ವನ್ನು ಸಿಎಸ್ಐಆರ್ ಅಭಿವೃದ್ಧಿಪಡಿಸಿದೆ. ಸಿಎಸ್ಐಆರ್ನ ತಿರುವನಂತಪುರದ ಪ್ರಯೋಗಾಲಯದಲ್ಲಿ ಅಂತಹ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ತಿರುವನಂತಪುರದ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ಡಿಸಿಪ್ಲಿನರಿ ಸೈನ್ಸ್ ಆ್ಯಂಡ್ ಟೆಕ್ನಾಲಜಿ–ಎನ್ಐಐಎಸ್ಟಿ’ ‘ಸಸ್ಯಮೂಲ ಚರ್ಮ’ದ ತಂತ್ರಜ್ಞಾನವನ್ನು ಪುಣೆ ಮೂಲದ ಕಂಪನಿಯೊಂದಕ್ಕೆ ವರ್ಗಾವಣೆ ಮಾಡಿದೆ.
- ಭಾರತೀಯ ವಾಯುಪಡೆಯು 1.15 ಲಕ್ಷ ಕೋಟಿ ವೆಚ್ಚದಲ್ಲಿ 97 ತೇಜಸ್ ಮಾರ್ಕ್–1ಎ ವಿಮಾನಗಳನ್ನು ಖರೀದಿಸಲಿದೆ. 2021ರ ಫೆಬ್ರುವರಿಯಲ್ಲಿ 48,000 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಅಧೀನದ ಹಿಂದೂಸ್ತಾನ್ ಏರೊ ನಾಟಿಕ್ಸ್ ಲಿಮಿಟೆಡ್ನಿಂದ 83 ತೇಜಸ್ ಎಂಕೆ–1ಎ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಒಪ್ಪಂದ ಮಾಡಿಕೊಂಡಿತ್ತು.