Published on: February 6, 2023
ಚುಟುಕು ಸಮಾಚಾರ – 6 ಫೆಬ್ರವರಿ 2023
ಚುಟುಕು ಸಮಾಚಾರ – 6 ಫೆಬ್ರವರಿ 2023
- ಭಾರತದ ರಕ್ಷಣಾ ವಲಯಕ್ಕೆ ಉತ್ತೇಜನ ನೀಡುವ ಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಹೆಲಿಕಾಪ್ಟರ್ ಕಾರ್ಖಾನೆಯನ್ನು ಉದ್ಘಾಟಿಸಲಿದ್ದಾರೆ.
- ಫೆಬ್ರವರಿ 6 ರಿಂದ ಫೆಬ್ರವರಿ 8 ರವರೆಗೆ ಕರ್ನಾಟಕದಲ್ಲಿ, ಪ್ರಧಾನಿ ಮೋದಿ ಜಿ 20 ಕಾರ್ಯಕ್ರಮವಾದ ಇಂಡಿಯಾ ಎನರ್ಜಿ ವೀಕ್ ಅನ್ನು ಉದ್ಘಾಟಿಸಲಿದ್ದಾರೆ. ಘೋಷವಾಕ್ಯ:”ಪ್ರಗತಿ, ಸಹಭಾಗಿತ್ವ ಮತ್ತು ಪರಿವರ್ತನೆ” ಎಂಬುದು ಘೋಷವಾಕ್ಯವಾಗಿದೆ.
- ಕರ್ನಾಟಕ ರಾಜ್ಯದ ದೇವಾಲಯಗಳನ್ನು ಸ್ವಚ್ಛವಾಗಿಡುವ ಸಲುವಾಗಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು “ಸ್ವಚ್ಛ ಮಂದಿರ ಅಭಿಯಾನವನ್ನು ಪ್ರಾರಂಭಿಸಿದೆ.
- ಚಾಮರಾಜನಗರದ ಬುಡಕಟ್ಟು ಕುಟುಂಬಗಳು ಈ ಲಂಟಾನ ಗಿಡಗಳಿಂದ ಪೀಠೋಪಕರಣಗಳು, ಬುಟ್ಟಿಗಳು, ಟೇಬಲ್ಗಳು, ಬುಕ್ಸ್ಟ್ಯಾಂಡ್ಗಳು, ಕೀ ಹೋಲ್ಡರ್ಗಳು ಇತ್ಯಾದಿಗಳನ್ನು ತಯಾರಿಸುತ್ತಿದ್ದು, ಜೀವನೋಪಾಯವನ್ನೇ ಇದೀಗ ಜೀವನಾಧಾರವಾಗಿ ಮಾಡಿಕೊಂಡಿದ್ದಾರೆ. ಲಂಟಾನದ ಮೂಲ ಮೆಕ್ಸಿಕೊ ಆಗಿದೆ.1820ರ ಸುಮಾರಿಗೆ ಕೋಲ್ಕತಾಕ್ಕೆ ಅಲಂಕಾರಿಕ ಹೂವಿನ ಗಿಡದ ರೂಪದಲ್ಲಿ ಕಾಲಿಟ್ಟಿತು. ಗ್ರಾಮೀಣ ಭಾಗದಲ್ಲಿ ಇದನ್ನು ಜಿಡ್ಡಿ ಗಿಡ ಇಲ್ಲವೇ ರೋಜವಾಳ ಎಂದು ಕರೆಯುತ್ತಾರೆ.
- ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದು, ಸೇನಾಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ಆನ್ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ(CEE) ಹಾಜರಾಗಬೇಕು. ಈ ಹಿಂದೆ, ಅಗ್ನಿವೀರ್ಗಳ ನೇಮಕಾತಿ ಪ್ರಕ್ರಿಯೆಯು ವಿಭಿನ್ನ ಆದೇಶವನ್ನು ಅನುಸರಿಸಿದ್ದು, ಅಭ್ಯರ್ಥಿಗಳು ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು, ನಂತರ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು ಹಾಗೂ ಕೊನೆಯ ಹಂತವಾಗಿ ಸಿಇಇಗೆ ಅರ್ಹತೆ ಪಡೆಯಬೇಕಾಗಿತ್ತು.
- ಜಿಮ್ನಾಸ್ಟ್ ದೀಪಾ ಕರ್ಮಕರ್ ಅವರು ನಿಷೇಧಿತ ವಸ್ತುವನ್ನು ಬಳಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ITA) 21 ತಿಂಗಳ ಕಾಲ ನಿಷೇಧ ಹೇರಿದೆ. ಪರೀಕ್ಷಾ ವರದಿಯಲ್ಲಿ ದೀಪಾ ನಿಷೇಧಿತ ವಸ್ತುವಾದ ಹೈಜೆನಮೈನ್ ಸೇವಿಸಿರುವುದು ಪತ್ತೆಯಾಗಿದೆ. ಇದನ್ನು ವಿಶ್ವ ಉದ್ದೀಪನ ಮದ್ದು ತಡೆ ಏಜೆನ್ಸಿಯಿಂದ ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ. ತ್ರಿಪುರಾ ಮೂಲದ ದೀಪಾ ಕರ್ಮಕರ್ ಭಾರತದ ಅಗ್ರ ಜಿಮ್ನಾಸ್ಟ್. 2016ರ ರಿಯೊ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. 2018 ರಲ್ಲಿ, ಅವರು ಟರ್ಕಿಯ ಮರ್ಸಿನ್ನಲ್ಲಿ ನಡೆದ FIG ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್ನ ವಾಲ್ಟ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.