Published on: August 8, 2023
ಚುಟುಕು ಸಮಾಚಾರ : 7 ಆಗಸ್ಟ್ 2023
ಚುಟುಕು ಸಮಾಚಾರ : 7 ಆಗಸ್ಟ್ 2023
- ಕೇಂದ್ರ ಸರ್ಕಾರದ ಇ-ಸಂಜೀವನಿ ಯೋಜನೆ ಅಡಿ ಕರ್ನಾಟಕ ರಾಜ್ಯದಲ್ಲಿ 1.32 ಕೋಟಿ ಜನರಿಗೆ ಟೆಲಿ ಸಮಾಲೋಚನೆ ನೀಡಲಾಗಿದ್ದು, ಈ ಮೂಲಕ ದೇಶದಲ್ಲಿಯೇ ಯೋಜನೆಯ ಅತಿ ಹೆಚ್ಚು ಲಾಭ ಪಡೆದ ನಾಲ್ಕನೇ ರಾಜ್ಯವಾಗಿದೆ.
- ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ವಿಡಿಯೋ ಕಾನ್ಫರೆನ್ಸ್ ಮೂಲಕ 508 ರೈಲು ನಿಲ್ದಾಣಗಳನ್ನು ನವೀಕರಿಸುವ ಯೋಜನೆಯನ್ನು ಪ್ರಧಾನಿ ಮೋದಿ ಪ್ರಾರಂಭಿಸಿದರು. ಕರ್ನಾಟಕದ 13 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ 8 ನಿಲ್ದಾಣಗಳು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ.
- ಪಿಎಂ ಶ್ರೀ ಯೋಜನೆಯಡಿ ಕರ್ನಾಟಕ ರಾಜ್ಯ 129 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಸಲು ಮುಂದಾಗಿದೆ.
- ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ
- 2023 ರ ಥೀಮ್: “ಸುಸ್ಥಿರ ಫ್ಯಾಷನ್ಗಾಗಿ ಕೈಮಗ್ಗ”. ಈ ವಿಷಯವು ಯಂತ್ರ-ನಿರ್ಮಿತ ಬಟ್ಟೆಗಳಿಗೆ ಪರಿಸರ ಸ್ನೇಹಿ ಮತ್ತು ಸಮರ್ಥನೀಯ ಪರ್ಯಾಯವಾಗಿ ಕೈಮಗ್ಗ ನೇಯ್ಗೆಯ ಮಹತ್ವವನ್ನು ಒತ್ತಿಹೇಳುತ್ತದೆ