Published on: May 9, 2023

ಚುಟುಕು ಸಮಾಚಾರ : 8 ಮೇ 2023

ಚುಟುಕು ಸಮಾಚಾರ : 8 ಮೇ 2023

  • ವಿಜಯಪುರ (ದೇವನಹಳ್ಳಿ)ಯಲ್ಲಿ ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ‘ಸಖಿ ಪಿಂಕ್ ಬೂತ್’ (ಗುಲಾಬಿ ಬಣ್ಣದ ಮತಗಟ್ಟೆ) ತೆರೆಯಲು ಭಾರತೀಯ ಚುನಾವಣೆ ಆಯೋಗ ನಿರ್ಧರಿಸಿರುವ ಹಿನ್ನೆಲೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ‘ಪಿಂಕ್ ಬೂತ್’ ತೆರೆಯಲಾಗಿದೆ. ಎಲ್ಲಾ ಮಹಿಳಾ ಮತದಾರರು ಬಂದು ಮತದಾನಮಾಡಲು ಅವಕಾಶಮಾಡಿಕೊಡಲಾಗುತ್ತದೆ. ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. ಈ ಕಾರಣದಿಂದ ಮತದಾನದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಗಳಿವೆ.  ವಿಶೇಷವಾಗಿ ಗಾಲಿಕುರ್ಚಿಯ ಸಹಾಯದಿಂದ ಬರುವ ಮಹಿಳೆಯರು, ದೃಷ್ಟಿದೋಷ ಸೇರಿದಂತೆ ಅಂಗವಿಕಲ ಮಹಿಳೆಯರಿಗೆ ಈ ‘ಪಿಂಕ್  ಬೂತ್‘ಗಳಲ್ಲಿ ವಿಶೇಷ ಅತಿಥ್ಯ ದೊರೆಯಲಿದೆ.
  • ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಅಮೆರಿಕದ ಹವಾಮಾನ ಮುನ್ಸೂಚನೆ ಘಟಕವಾದ ಗ್ಲೋಬಲ್​ ಫೋರ್​ಕಾಸ್ಟ್​ ಸಿಸ್ಟಮ್​ (GFS) ಮತ್ತು ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಗಳ ಯುರೋಪಿಯನ್ ಕೇಂದ್ರ (ECMWF)ದ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ರಚನೆ ಕುರಿತ ವರದಿ ಬೆನ್ನಲ್ಲೇ ಐಎಂಡಿ ಎಚ್ಚರಿಕೆ ನೀಡಿದೆ.
  • ಭಾರತ-ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಮಿಲಿಟರಿ ಸಹಕಾರದಲ್ಲಿ, ಮೊದಲ ಆಸಿಯಾನ್-ಭಾರತ ಕಡಲ ವ್ಯಾಯಾಮವನ್ನು ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಸಲಾಗುವುದು.
  • ಬಾಲ್ಯ ವಿವಾಹ ಪ್ರಮಾಣದಲ್ಲಿ ಭಾರತವು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ 5ನೇ ಸ್ಥಾನದಲ್ಲಿದೆ. ವಿಶ್ವದ 3 ಬಾಲ್ಯ ವಧುಗಳ ಪೈಕಿ ಒಬ್ಬರು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಅರ್ಧಕ್ಕಿಂತ ಹೆಚ್ಚು ಬಾಲ್ಯ ವಿವಾಹಗಳು ಭಾರತದ ಐದು ರಾಜ್ಯಗಳಲ್ಲಿವೆ, ಅವು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ಮತ್ತು ಉಳಿದವು ಇತರ ರಾಜ್ಯಗಳಲ್ಲಿವೆ. ಉತ್ತರ ಪ್ರದೇಶ ಅತಿ ಹೆಚ್ಚು ಬಾಲ್ಯ ವಧುಗಳಿಗೆ ನೆಲೆಯಾಗಿದೆ.
  • ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸುವ ದೃಷ್ಟಿ ಕೋನದಿಂದ ಫ್ರಾನ್ಸ್ ಇಂಡಿಯಾ ಫೌಂಡೇಶನ್ (ಎಫ್‌ಐಎಫ್) ಅನ್ನು ಭಾರತದಲ್ಲಿ ಫ್ರಾನ್ಸ್ ಏಷ್ಯಾ ಫೌಂಡೇಶನ್‌ನ ಭಾಗವಾಗಿ ಪ್ರಾರಂಭಿಸಲಾಗಿದೆ ಸಹಯೋಗ : ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಫ್ರೆಂಚ್ ವಿದೇಶಾಂಗ ಸಚಿವಾಲಯದ ಬೆಂಬಲದೊಂದಿಗೆ ಹೊಸ ಕಾರ್ಯತಂತ್ರದ ಉಪಕ್ರಮವಾಗಿ ಸ್ಥಾಪಿಸಲಾಗಿದೆ.