Published on: January 9, 2023

ಚುಟುಕು ಸಮಾಚಾರ – 9 ಜನವರಿ 2023

ಚುಟುಕು ಸಮಾಚಾರ – 9 ಜನವರಿ 2023

  • ಏಲಕ್ಕಿ ನಗರಿ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾವೇಶ ನಡೆಯಿತು. ಸಕ್ಕರೆ ನಾಡು ಮಂಡ್ಯದಲ್ಲಿ ಮುಂದಿನ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.
  • ʼಚಿಕ್ಕಬಳ್ಳಾಪುರ ಉತ್ಸವʼ: ಕಲೆ, ಕ್ರೀಡೆ, ಆಹಾರ, ಉದ್ಯೋಗಾವಕಾಶ, ಆರೋಗ್ಯ ಮೇಳ ಮೊದಲಾದವುಗಳನ್ನೊಳಗೊಂಡ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಜನವರಿ 8 ರಿಂದ 14 ವರೆಗೆ ಚಿಕ್ಕಬಳ್ಳಾಪುರ ಉತ್ಸವ ನಡೆಯಲಿದೆ. ಜಿಲ್ಲೆಯನ್ನು ಈಗ ಫಲ ಪುಷ್ಪ ಗಿರಿಧಾಮ ನಾಡು ಎಂದು ಕರೆಯಲಾಗಿದೆ. ಈ ಹೆಸರನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತಗೊಳಿಸಲಾಗುವುದು ಎಂದು ತಿಳಿಸಿದರು.
  • 17ನೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳನವು ಮಧ್ಯಪ್ರದೇಶ ಸರಕಾರದ ಸಹಯೋಗದಲ್ಲಿ 2023ರ ಜನವರಿ 8ರಿಂದ 10ರವರೆಗೆ ಇಂದೋರ್ನಲ್ಲಿ ನಡೆಯಲಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಡಯಾಸ್ಪೊರಾ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸಾರುವ ನಿಟ್ಟಿನಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ್ (ಸ್ವಾತಂತ್ರ್ಯದ ಅಮೃತ ಮಹೋತ್ಸವ)- ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಾಗರೋತ್ತರ ಭಾರತೀಯರ ಕೊಡುಗೆ” ಪರಿಕಲ್ಪನೆಯಡಿ ಪ್ರಥಮ ಬಾರಿಗೆ ರೂಪಿಸಲಾದ ಡಿಜಿಟಲ್ ಪಿಬಿಡಿ ಪ್ರದರ್ಶನವನ್ನು ಗೌರವಾನ್ವಿತ ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದಾರೆ.
  • ದೇಶಾದ್ಯಂತ ಎಲ್ಲಾ ವಲಯಗಳಾದ್ಯಂತ ‘ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್'(ಐಎಸ್ಟಿ) ಕಾಲಮಾನವನ್ನು ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಇದಕ್ಕಾಗಿ ಪ್ರತ್ಯೇಕ ನೀತಿಯೊಂದನ್ನು ಹೊರತರಲಿದೆ.ಎನ್ಪಿಎಲ್ ಮತ್ತು ಇಸ್ರೋ ಜತೆಗಿನ ಸಹಯೋಗದ ಒಪ್ಪಂದದ ಮೂಲಕ, ದೇಶಾದ್ಯಂತ ಐದು ಸ್ಥಳಗಳಿಂದ ವಿವಿಧ ಟೆಲಿಕಾಂ ಆಪರೇಟರ್ಗಳು, ಹಣಕಾಸು ಸಂಸ್ಥೆಗಳು, ಡೇಟಾ ಸೆಂಟರ್ಗಳು, ಜನಸಾಮಾನ್ಯ ಜನರು ಇತ್ಯಾದಿಗಳಿಗೆ ನಿಖರವಾದ ‘ಐಎಸ್ಟಿ’ ಕಾಲಮಾನ ಒದಗಿಸಲು ತಂತ್ರಜ್ಞಾನವನ್ನು ರೂಪಿಸಲು ಉದ್ದೇಶಿಸಲಾಗಿದೆ.
  • ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ದೇಶ ಮತ್ತು ವಿಶ್ವದಾದ್ಯಂತ ವಕೀಲ ವೃತ್ತಿಗೆ ಸಲ್ಲಿಸಿದ ಜೀವಮಾನದ ಸೇವೆಯನ್ನು ಗುರುತಿಸಿ ಹಾರ್ವರ್ಡ್ ಲಾ ಸ್ಕೂಲ್ ಸೆಂಟರ್‌ ಅವರನ್ನು “ಜಾಗತಿಕ ನಾಯಕತ್ವ ಪ್ರಶಸ್ತಿ”ಗೆ ಆಯ್ಕೆ ಮಾಡಿದೆ. ಚಂದ್ರಚೂಡ್ ಅವರು ಯುನೈಟೆಡ್ ಸ್ಟೇಟ್ಸ್‌ನ ಹಾರ್ವರ್ಡ್ ಲಾ ಸ್ಕೂಲ್‌ನಿಂದ ಎಲ್ಎಲ್ಎಂ ಪದವಿ ಮತ್ತು ನ್ಯಾಯಾಂಗ ವಿಜ್ಞಾನದಲ್ಲಿ(SJD) ಡಾಕ್ಟರೇಟ್ ಪಡೆದಿದ್ದಾರೆ.
  • ಕೇರಳದ ಕೊಚ್ಚಿಯಲ್ಲಿ ಭಾರತದ ಮೊತ್ತ ಮೊದಲ ವಾಟರ್‌ ಮೆಟ್ರೋ ರೆಡಿಯಾಗಿದೆ. 50 ಆಸನಗಳ ವ್ಯವಸ್ಥೆ ಜೊತೆಗೆ ಬೋಟ್‌ನಲ್ಲಿ 100 ಮಂದಿ ಕುಳಿತು ಪ್ರಯಾಣಿಸುವ ಸಾಮರ್ಥ್ಯ ಈ ಬೋಟ್‌ಗೆ ಇದೆ.
  • ದೇಶದ ಮೊದಲ ಬೋಟ್ : ವಾಟರ್ ಮೆಟ್ರೋಗೆ ಬಳಸುವ ಭಾರತದ ಮೊದಲ ಬೋಟ್ ಇದಾಗಿದೆ. ಕೊಚ್ಚಿಯ ಹಡಗು ನಿರ್ಮಾಣ ಸಂಸ್ಥೆಯಲ್ಲಿ ಭಾರತದ ಮೊದಲ ಅಲ್ಯೂಮಿನಿಯಂ ಬೋಟ್‌ಗಳನ್ನು ನಿರ್ಮಿಸಿದೆ. ಏಯಿಮಲ, ಬೇಕಲ್, ಬೇಪ್ಪೂರ್, ಮಸಿರಿಸ್ ಎಂದು ಬೋಟ್‌ಗಳಿಗೆ ಹೆಸರಿಡಲಾಗಿದೆ. ಈ ಬೋಟ್‌ಗಳನ್ನು ಪ್ರತಿ ಗಂಟೆಗೊಮ್ಮೆ ಚಾರ್ಚ್‌ ಮಾಡಬೇಕು.