Published on: February 10, 2024
ಚುಟುಕು ಸಮಾಚಾರ : 9 ಫೆಬ್ರವರಿ 2024
ಚುಟುಕು ಸಮಾಚಾರ : 9 ಫೆಬ್ರವರಿ 2024
- ಜನೇವರಿಯಲ್ಲಿ ಬಾಗಲಕೋಟ ಜಿಲ್ಲೆಯ ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ 10 ನೇ ಆವೃತ್ತಿಯ ಹಕ್ಕಿ ಉತ್ಸವ ನಡೆಯಿತು. ಕರ್ನಾಟಕ ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಸಹಯಯೋಗದಲ್ಲಿ ನಡೆಯಿತು. ಈ ಉತ್ಸವದ ಮ್ಯಾಸ್ಕಾಟ್: ಗ್ರೇಟರ್ ಫ್ಲೆಮಿಂಗೋ (ರಾಜಹಂಸ)
- ಇತ್ತೀಚೆಗೆ, ಭಾರತದ ಪ್ರಧಾನ ಮಂತ್ರಿ ಮಾ ಕಾಮಾಖ್ಯ ದಿವ್ಯ ಪರಿಯೋಜನಾ (ಮಾ ಕಾಮಾಖ್ಯ ಪ್ರವೇಶ ಕಾರಿಡಾರ್) ಗೆ ಅಡಿಪಾಯ ಹಾಕಿದರು. ಈಶಾನ್ಯ ಪ್ರದೇಶಕ್ಕಾಗಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ (PM-DevINE) ಯೋಜನೆಯಡಿ ಇದನ್ನು ಮಂಜೂರು ಮಾಡಲಾಗಿದೆ. ಈ ಕಾರಿಡಾರ್ ವಾರಣಾಸಿಯ ಕಾಶಿ-ವಿಶ್ವನಾಥ ದೇವಾಲಯದ ಕಾರಿಡಾರ್ನಿಂದ ಸ್ಫೂರ್ತಿ ಪಡೆದಿದೆ.
- ಉತ್ತರಾಖಂಡ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿದೆ. ಈ ಮೂಲಕ ಯುಸಿಸಿ ಜಾರಿಗೆ ತಂದ ದೇಶದ ಮೊದಲ ರಾಜ್ಯವೆನಿಸಿಕೊಂಡಿದೆ. ಅನ್ವಯ: ಇದು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ.
- ಕೇರಳದ ಮೀನುಗಾರಿಕೆ ಮತ್ತು ಸಾಗರ ಅಧ್ಯಯನಗಳ ವಿಶ್ವವಿದ್ಯಾನಿಲಯವು (ಕುಫೋಸ್) ಸುಧಾರಿತ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಹಂತ II ಸಂಶೋಧನಾ ಯೋಜನೆಯಲ್ಲಿ ಭಾಗವಹಿಸಲಿದೆ.
- ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್, ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ ವಿರುದ್ಧದ ವಿಶಾಖಪಟ್ಟಣಂನಲ್ಲಿ ನಡೆದ ಟೆಸ್ಟ್ನಲ್ಲಿ ಅವರ ಬೌಲಿಂಗ್ ಪ್ರದರ್ಶನದ ನಂತರ ಐಸಿಸಿ ಪುರುಷರ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಮೊದಲ ಭಾರತೀಯ ವೇಗದ ಬೌಲರ್ ಎನಿಸಿಕೊಂಡರು. ಬುಮ್ರಾ ಅವರು ಪ್ಯಾಟ್ ಕಮಿನ್ಸ್, ಕಗಿಸೊ ರಬಾಡ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಗಳಿಸಿದರು, ಬಿಶನ್ ಸಿಂಗ್ ಬೇಡಿ, ರವೀಂದ್ರ ಜಡೇಜಾ ಮತ್ತು ಅಶ್ವಿನ್ (ಎಲ್ಲ ಸ್ಪಿನ್ನರ್ಗಳು) ನಂತರ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯರಾದರು.