Published on: September 15, 2023
ಚುಟುಕು ಸಮಾಚಾರ : 9 ಸೆಪ್ಟೆಂಬರ್ 2023
ಚುಟುಕು ಸಮಾಚಾರ : 9 ಸೆಪ್ಟೆಂಬರ್ 2023
- ಉದ್ಯೋಗಾಸಕ್ತ ದಿವ್ಯಾಂಗರಿಗೆ ನೆರವಾಗುವ ಉದ್ದೇಶದಿಂದ ಅಮೆಜಾನ್ ಇಂಡಿಯಾವು ಕರ್ನಾಟಕ ಸರ್ಕಾರ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಹರಿಯಾಣ ರಾಜ್ಯ ಸರ್ಕಾರಗಳೊಡನೆ ಒಪ್ಪಂದಕ್ಕೆ ಸಹಿ ಹಾಕಿದೆ.ಅಮೆಜಾನ್ ಇಂಡಿಯಾದ ಆಪರೇಷನ್ಸ್ ಜಾಲದಾದ್ಯಂತ ಐದು ರಾಜ್ಯಗಳಲ್ಲಿ ಶ್ರವಣ ಸಮಸ್ಯೆಯುಳ್ಳ ಸಾವಿರಾರು ದಿವ್ಯಾಂಗ ಅಭ್ಯರ್ಥಿಗಳಿಗೆ ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಪೂರೈಸಲಿದೆ.
- ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಏರ್ಲಿಫ್ಟ್ ಮಾಡಬಹುದಾದ ಜಗತ್ತಿನ ಮೊದಲ ವಿಪತ್ತು ನಿರ್ವಹಣೆ ಆಸ್ಪತ್ರೆಯನ್ನು ಭಾರತ ಸಿದ್ಧಪಡಿಸಿದೆ. ಭೀಷ್ಮ್ (ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ ಸಹಯೋಗ್ ಹಿತ ಆ್ಯಂಡ್ ಮೈತ್ರಿ) ಯೋಜನೆಯಡಿ “ಆರೋಗ್ಯ ಮೈತ್ರಿ ಕ್ಯೂಬ್’ ಅನ್ನು ಭಾರತ ಸಿದ್ಧಪಡಿಸಿದೆ. ಜಿ20 ಆರೋಗ್ಯ ಸಚಿವರ ಸಮಾವೇಶದ ನೇಪಥ್ಯದಲ್ಲಿ ಗುಜರಾತ್ನ ಗಾಂಧಿನಗರದಲ್ಲಿ ಆಗಸ್ಟ್ನಲ್ಲಿ ನಡೆದ ಮೆಡ್ಟೆಕ್ ಎಕ್ಸ್ಪೋದಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು.
- ನವ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪರಿಸರ ಸಂರಕ್ಷಣೆಯ ಆಶಯದ ‘ಅಂತರರಾಷ್ಟ್ರೀಯ ಜೈವಿಕ ಇಂಧನ ಮೈತ್ರಿಗೆ ನರೇಂದ್ರ ಮೋದಿಯವರು ಚಾಲನೆ ನೀಡಿದರು.ಮೈತ್ರಿ ರಚನೆಯು ಭಾರತ, ಅಮೆರಿಕ ಹಾಗೂ ಬ್ರೆಜಿಲ್ನ ಆಲೋಚನೆಯಾಗಿದ್ದು, ಅಧಿಕ ಪ್ರಮಾಣದ ಜೈ ವಿಕ ಇಂಧನ ಉತ್ಪಾದನೆ ಹಾಗೂ ಬಳಕೆಯಲ್ಲಿ ಈ ಮೂರು ದೇಶಗಳು ಮುಂಚೂಣಿಯಲ್ಲಿವೆ. ಇತರೆ 19 ದೇಶಗಳು ಕೂಡ ಈ ಮೈತ್ರಿ ಬಗ್ಗೆ ಆಸಕ್ತಿ ವಹಿಸಿದ್ದು, ಜಿ20 ವ್ಯಾಪ್ತಿಗೆ ಬರದ ಕೆಲವು ದೇಶಗಳು ಕೂಡ ಬೆಂಬಲ ಸೂಚಿಸಿವೆ. ಚೀನಾ ಹಾಗೂ ತೈಲ ಸಮೃದ್ಧ ರಾಷ್ಟ್ರಗಳಾ ದ ಸೌದಿ ಅರೇಬಿಯಾ ಮತ್ತು ರಷ್ಯಾ ಈ ಮೈತ್ರಿಯಿಂದ ದೂರವುಳಿಯಲು ನಿರ್ಧರಿಸಿವೆ.
- ಡಿಜಿಟಲ್ ಪರಿವರ್ತನೆ, ವ್ಯಾಪಾರ ಮತ್ತು ಆರ್ಥಿಕ ತೊಡಗಿಸಿಕೊಳ್ಳುವಿಕೆಯಂತಹ ಕ್ಷೇತ್ರಗಳಲ್ಲಿ ಭಾರತ-ಆಸಿಯಾನ್(ಆಗ್ನೇ ಯ ಏಷ್ಯಾ ರಾಷ್ಟ್ರ ಗಳ ಸಂಘ) ಸಹಕಾರವನ್ನು ಬಲಪಡಿಸುವ 12 ಅಂಶಗಳ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದರು. ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ನಡೆದ 20ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.