Published on: April 12, 2023

ಚುಟುಕು ಸಮಾಚಾರ:11 ಏಪ್ರಿಲ್ 2023

ಚುಟುಕು ಸಮಾಚಾರ:11 ಏಪ್ರಿಲ್ 2023

  • ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಭಾಷಾ ಸೌಹಾರ್ದ ಸ್ನೇಹ ಸೇತುವೆ ಎಂಬ ವಿಶೇಷ ಯೋಜನೆಯನ್ನು ರೂಪಿಸಿದೆ. ಮ್ಯಾನ್ಮಾರ್, ಶ್ರೀಲಂಕಾ, ಉಜ್ಬೇಕಿಸ್ತಾನ್, ಇಂಡೋನೇಷ್ಯಾ ಅಧಿಕೃತ ಭಾಷೆಗಳಲ್ಲಿ 5 ರಿಂದ 10 ಜನರಿಗೆ ತರಬೇತಿ ನೀಡಲು ಯೋಜಿಸಿದೆ.ಐತಿಹಾಸಿಕ ಸಂಬಂಧಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅದರ ಸಾಂಸ್ಕೃತಿಕ ಹೆಜ್ಜೆಗುರುತನ್ನು ವಿಸ್ತರಿಸುವುದು.
  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹುಲಿ ಯೋಜನೆಯ 50ನೇ ವರ್ಷಾಚರಣೆ ಹಾಗೂ ಪ್ರಥಮ ಸಂರಕ್ಷಣಾ ಸಮ್ಮೇಳನ ನಡೆಯಿತು. ಪ್ರಧಾನಿ ಮೋದಿ 2022ನೇ ಸಾಲಿನ ಹುಲಿ ಗಣತಿಯನ್ನು ಬಿಡುಗಡೆ ಮಾಡಿದರು. ಇದರ ಪ್ರಕಾರ ಭಾರತದಲ್ಲಿ 3,167 ಹುಲಿಗಳಿವೆ
  • ಹುಲಿ ಯೋಜನೆ 50 ವರ್ಷ ಪೂರೈಸಿದಕ್ಕೆ ಸ್ಮರಣಾರ್ಥವಾಗಿ ಪ್ರಧಾನಿ ಮೋದಿ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲಯನ್ಸ್ (ಐಬಿಸಿಎ) ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆ ಮೂಲಕ ಪ್ರಪಂಚದ ಏಳು ಪ್ರಮುಖ ದೊಡ್ಡ ಬೆಕ್ಕುಗಳ ರಕ್ಷಣೆ ಮತ್ತುಸಂರಕ್ಷಣೆಯ ಮೇಲೆ ಸರ್ಕಾರ ಕೇಂದ್ರೀಕರಿಸುತ್ತದೆ. ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಹಾಗೂ ಚಿರತೆಗಳ ರಕ್ಷಣೆಯನ್ನು ಈ ಯೋಜನೆ ಒಳಗೊಂಡಿರುತ್ತದೆ.
  • ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ವಿಶ್ವಪ್ರಸಿದ್ಧ ಬಸೋಹ್ಲಿ ಚಿತ್ರಕಲೆ ಭೌಗೋಳಿಕ ಸೂಚಕ (ಜಿಐ ಟ್ಯಾಗ್) ಅನ್ನು ಪಡೆದುಕೊಂಡಿದೆ. ಜಿಐ ನೋಂದಣಿಯ ಇತಿಹಾಸದಲ್ಲಿ ಜಮ್ಮು ಪ್ರದೇಶವು ಕರಕುಶಲ ವಸ್ತುಗಳಿಗೆ ಜಿಐ ಟ್ಯಾಗ್ ಅನ್ನು ಪಡೆದಿರುವುದು ಇದೇ ಮೊದಲು. ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ (ನಬಾರ್ಡ್) ಜಮ್ಮು ದೀರ್ಘ ಕಾನೂನು ಪ್ರಕ್ರಿಯೆಯ ನಂತರ ಬಸೋಹ್ಲಿ ಪೇಂಟಿಂಗ್‌ಗೆ ಜಿಐ ಟ್ಯಾಗ್ ಅನ್ನು ನೀಡಿತು.