Published on: July 16, 2024

ಚುಟುಕು ಸಮಾಚಾರ:15 ಜುಲೈ 2024

ಚುಟುಕು ಸಮಾಚಾರ:15 ಜುಲೈ 2024

  • ಭಾರತದಾದ್ಯಂತ ಸಾವಿರಾರು ಬಾಲ್ಯವಿವಾಹಗಳು: ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಆಸ್ಸಾಂ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಿನ ಘಟನೆಗಳು ನಡೆದಿವೆ ಎಂದು ಕೇಂದ್ರ ಸರ್ಕಾರ ಇತ್ತೀಚಿಗೆ ಸುಪ್ರೀಂ ಕೋರ್ಟಗೆ ಮಾಹಿತಿ ನೀಡಿದೆ. ಕರ್ನಾಟಕವು ಬಾಲ್ಯ ವಿವಾಹ ಪ್ರಕರಣದಲ್ಲಿ ದೇಶದಲ್ಲಿ ಎರಡನೇ ಸ್ಥಾನ ಹೊಂದಿದೆ. ಕರ್ನಾಟಕದಲ್ಲಿ ಬಳ್ಳಾರಿ ಪ್ರಥಮ ಸ್ಥಾನದಲ್ಲಿದ್ದು, ಬೆಳಗಾವಿ ಎರಡನೇ ಸ್ಥಾನದಲ್ಲಿದೆ.  ಕಳೆದ ಮೂರು ವರ್ಷಗಳಲ್ಲಿ ತಮಿಳುನಾಡಿನಲ್ಲಿ 8,966 ಬಾಲ್ಯ ವಿವಾಹಗಳು ನಡೆದಿದ್ದರೆ, ಕರ್ನಾಟಕದಲ್ಲಿ 8,348, ಪಶ್ಚಿಮ ಬಂಗಾಳದಲ್ಲಿ 8,324, ತೆಲಂಗಾಣದಲ್ಲಿ 4,440, ಆಂಧ್ರಪ್ರದೇಶದಲ್ಲಿ 3,416, ಅಸ್ಸಾಂನಲ್ಲಿ 3,316, ಮಹಾರಾಷ್ಟ್ರದಲ್ಲಿ 2,043, ಗುಜರಾತ್‌ನಲ್ಲಿ 1,206, ಉತ್ತರ ಪ್ರದೇಶದಲ್ಲಿ 1,197 ಮತ್ತು ಹರಿಯಾಣದಲ್ಲಿ 1,104 ಬಾಲ್ಯವಿವಾಹಗಳು ನಡೆದಿವೆ ಎಂದು ರಾಜ್ಯವು ಕಳುಹಿಸಿರುವ ಅಂಕಿಅಂಶಗಳನ್ನು ಸಂಗ್ರಹಿಸಿರುವ ಕೇಂದ್ರದ ವರದಿಯು ಬಹಿರಂಗಪಡಿಸಿದೆ.
  • 2024 ರಲ್ಲಿ ಮಂಡ್ಯದಲ್ಲಿ 87 ನೇ ಸಮ್ಮೇಳನ ನಡೆಯಲಿದೆ. ಇದು ಮಂಡ್ಯದಲ್ಲಿ ಜರಗುತ್ತಿರುವ ಮೂರನೇ ಸಮ್ಮೇಳನವಾಗಿದೆ. 1974ರಲ್ಲಿ (48 ನೇ ಸಮ್ಮೇಳನ) ಜಯದೇವಿತಾಯಿ ಲಿಗಾಡೆ ಅವರ ಅಧ್ಯಕ್ಷತೆಯಲ್ಲಿ ಮೊದಲ ಸಮ್ಮೇಳನವನ್ನು ಆಯೋಜಿಸಲಾಗಿತ್ತು. 1994 (63 ನೇ ಸಮ್ಮೇಳನ)ರಲ್ಲಿ ಸುಬ್ರಹ್ಮಣ್ಯರಾಜೇ ಅರಸ್(ಚದುರಂಗ ಎಂಬ ಕಾವ್ಯನಾಮದಿಂದ ಪರಿಚಿತರಾದವರು) ಅಧ್ಯಕ್ಷತೆಯಲ್ಲಿ ಎರಡನೇ ಬಾರಿಗೆ ಸಮ್ಮೇಳನ ಆಯೋಜಿಸಲಾಗಿತ್ತು. 86 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರೊ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಏಲಕ್ಕಿ ನಗರ ಹಾವೇರಿಯಲ್ಲಿ ಆಯೋಜಿಸಲಾಗಿತ್ತು. ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನವನ್ನು 1915 ರಲ್ಲಿ ಎಚ್.ವಿ ನಂಜುಂಡಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.
  • ಇತ್ತೀಚೆಗೆ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ (DESA) 2024ರ ವಿಶ್ವ ಜನಸಂಖ್ಯೆಯ ನಿರೀಕ್ಷಣಾ ವರದಿಯನ್ನು ಬಿಡುಗಡೆ ಮಾಡಿದೆ. ಮುಂಬರುವ 50-60 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯು ಹೆಚ್ಚಾಗುತ್ತಲೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ, 2024 ರಲ್ಲಿ 8.2 ಶತಕೋಟಿಯಿಂದ 2080 ರ ಮಧ್ಯದಲ್ಲಿ ಸುಮಾರು 10.3 ಶತಕೋಟಿ ತಲುಪುತ್ತದೆ. ಭಾರತ ಕಳೆದ ವರ್ಷ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. 2024 ರಲ್ಲಿ ಭಾರತದ ಜನಸಂಖ್ಯೆಯು 1.45 ಶತಕೋಟಿ ಎಂದು ಅಂದಾಜಿಸಲಾಗಿದೆ ಮತ್ತು ಇದು 2054 ರಲ್ಲಿ 1.69 ಶತಕೋಟಿಗೆ ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ. (2060 ರ ಗರಿಷ್ಠ: 1.7 ಬಿಲಿಯನ್, 2100: 1.5 ಬಿಲಿಯನ್ಗೆ ಇಳಿಕೆ)
  • ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ರಾಷ್ಟ್ರೀಯ ಬ್ಯಾಂಕ್(ನಬಾರ್ಡ್) ಮುಂಬೈನಲ್ಲಿ ‘ಅಗ್ರಿ-ಶ್ಯೂರ್’ ಫಂಡ್, ನವೋದ್ಯಮಗಳು ಮತ್ತು ಗ್ರಾಮೀಣ ಉದ್ಯಮಗಳಿಗೆ ಕೃಷಿ ನಿಧಿಯನ್ನು ಘೋಷಿಸಲು ಪೂರ್ವಭಾವಿ ಪಾಲುದಾರರ ಸಭೆಯನ್ನು ನಡೆಸಿತು. ನಬಾರ್ಡ್ನ ಅಂಗಸಂಸ್ಥೆಯಾದ NABVENTURES ನಿಂದ ₹750 ಕೋಟಿಗಳ ಆರಂಭಿಕ ಹೂಡಿಕೆ ಹಣವನ್ನು, ನಬಾರ್ಡ್ ಮತ್ತು ಕೃಷಿ ಸಚಿವಾಲಯದಿಂದ ತಲಾ 250 ಕೋಟಿಗಳು ಮತ್ತು ಇತರ ಸಂಸ್ಥೆಗಳಿಂದ 250 ಕೋಟಿಗಳು ನಿಧಿಯನ್ನು ಘೋಷಿಸಲಾಗಿದೆ. ಕೃಷಿಯಲ್ಲಿ ನವೀನ, ತಂತ್ರಜ್ಞಾನ-ಚಾಲಿತ ಉಪಕ್ರಮಗಳನ್ನು ಉತ್ತೇಜಿಸುವುದು, ಕೃಷಿ ಉತ್ಪನ್ನ ಮೌಲ್ಯ ಸರಪಳಿಯನ್ನು ಹೆಚ್ಚಿಸುವುದು, ಹೊಸ ಗ್ರಾಮೀಣ ಪರಿಸರ ವ್ಯವಸ್ಥೆಯ ಸಂಪರ್ಕಗಳು ಮತ್ತು ಮೂಲಸೌಕರ್ಯಗಳನ್ನು ಸೃಷ್ಟಿಸುವುದು, ಉದ್ಯೋಗವನ್ನು ಸೃಷ್ಟಿಸುವುದು ಮತ್ತು ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್ಪಿಒ) ಬೆಂಬಲಿಸುವುದು ಅಗ್ರಿ-ಶ್ಯೂರ್ನ ಕೇಂದ್ರೀಕೃತ ಕ್ಷೇತ್ರಗಳು.
  • ಗುಜರಾತ್ನ ಸಬರಕಾಂತ ಜಿಲ್ಲೆಯಲ್ಲಿ ಶಂಕಿತ ಚಂಡೀಪುರ ವೈರಸ್ ಸೋಂಕಿಗೆ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಸೋಂಕು ಉಲ್ಬಣವಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಸೋಂಕಿನ ತಡೆಗೆ ಸೋಂಕಿತ ಪ್ರದೇಶದಲ್ಲಿ ಮರಳುನೊಣ(sandfly)ಗಳನ್ನು ತಡೆಗಟ್ಟಲು ಮುಂದಾಗಿದ್ದಾರೆ. ಚಂಡಿಪುರ ವೆಸಿಕ್ಯುಲೋವೈರಸ್ (CHPV) ಮಾನವರಲ್ಲಿ ಎನ್ಸೆಫಾಲಿಟಿಕ್(ಮಿದುಳಿಗೆ ಸಂಬಂಧಿಸಿದ) ಕಾಯಿಲೆಗೆ ಸಂಬಂಧಿಸಿದ ರಾಬ್ಡೋವಿರಿಡೆ ಕುಟುಂಬಕ್ಕೆ ಸೇರಿದೆ. ವೈರಸ್ ಸೊಳ್ಳೆಗಳು, ಉಣ್ಣಿ ಮತ್ತು ಮರಳುನೊಣಗಳಂತಹ ವಾಹಕಗಳ ಮೂಲಕ ಹರಡುತ್ತದೆ. ಇದನ್ನು ಮೊದಲು 1965 ರಲ್ಲಿ ಭಾರತದ ಮಹಾರಾಷ್ಟ್ರ ರಾಜ್ಯದ ಚಂಡಿಪುರ ಗ್ರಾಮದಲ್ಲಿ ಕಂಡುಬಂದಿದ್ದರಿಂದ ಈ ಹೆಸರಿನಿಂದ ಕರೆಯಲಾಗುತ್ತದೆ.
  • ವರ್ಲ್ಡ್ ಚಾಂಪಿಯನ್ಷಿಪ್ ಆಫ್ ಲೆಜೆಂಡ್ಸ್ 2024′ ಟಿ20 ಕ್ರಿಕೆಟ್ ಟೂರ್ನಿ: ಇಂಗ್ಲೆಂಡ್ ನಲ್ಲಿರುವ ಬರ್ಮಿಂಗ್ಹ್ಯಾಮ್ ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಫೈನಲ್ನಲ್ಲಿ ಭಾರತವು ಪಾಕಿಸ್ಥಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ವಿವಿಧ ದೇಶಗಳ ನಿವೃತ್ತ ಆಟಗಾರರ ತಂಡಗಳು ಪಾಲ್ಗೊಂಡ ಟಿ20 ಟೂರ್ನಿಯ ಚೊಚ್ಚಲ ಆವೃತ್ತಿ (ವರ್ಲ್ಡ್ ಚಾಂಪಿಯನ್ಷಿಪ್ ಆಫ್ ಲೆಜೆಂಡ್ಸ್ 2024) ಇದಾಗಿದೆ. ಈ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾದ ‘ಚಾಂಪಿಯನ್ಸ್’ ತಂಡಗಳು ಭಾಗವಹಿಸಿದ್ದವು. ಭಾರತ ತಂಡದ ಆಟಗಾರರು: ಯುವರಾಜ್ ಸಿಂಗ್ (ನಾಯಕ), ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಸುರೇಶ್ ರೈನಾ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಪವನ್ ನೇಗಿ, ವಿನಯ್ ಕುಮಾರ್, ಹರ್ಭಜನ್ ಸಿಂಗ್, ರಾಹುಲ್ ಶುಕ್ಲಾ, ಅನುರೀತ್ ಸಿಂಗ್ ಪಾಕಿಸ್ತಾನ:ಯೂನಿಸ್ ಖಾನ್ (ನಾಯಕ)
  • ಯುರೋ ಕಪ್ 2024: ಜರ್ಮನಿಯ ಬರ್ಲಿನ್‌ನಲ್ಲಿರುವ ಒಲಂಪಿಯಾಸ್ಟೇಡಿಯನ್‌ನಲ್ಲಿ ನಡೆದ ಯುರೋ ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಪೇನ್, ಇಂಗ್ಲೆಂಡ್ ಅನ್ನು 2-1 ಗೋಲುಗಳಿಂದ ಸೋಲಿಸಿತು. UEFA ಯುರೋಪಿಯನ್ ಫುಟ್‌ಬಾಲ್ ಚಾಂಪಿಯನ್‌ಶಿಪ್, ಅನ್ನು ಯುರೋಪಿಯನ್ ಚಾಂಪಿಯನ್‌ಶಿಪ್ ಮತ್ತು ಯೂರೋ ಕಪ್ ಎಂದು ಕರೆಯಲಾಗುತ್ತದೆ. ಯುರೋಪಿಯನ್ ಫುಟ್‌ಬಾಲ್ ಅಸೋಸಿಯೇಷನ್‌ಗಳ ಒಕ್ಕೂಟದಿಂದ (UEFA) ಆಯೋಜಿಸಲಾದ ಫುಟ್‌ಬಾಲ್ ಪಂದ್ಯಾವಳಿಯಾಗಿದೆ. ಸ್ಥಾಪನೆ: 1966. ಅತಿ ಹೆಚ್ಚು ಯುರೋ ಕಪ್ ಗೆದ್ದ ದೇಶ ಸ್ಪೇನ್ (ನಾಲ್ಕು ಸಲ)ಆಗಿದೆ.
  • ಕೋಪಾ ಅಮೇರಿಕಾ ಕಪ್ 2024: ಪ್ರಸ್ತುತ ಚಾಂಪಿಯನ್: ಅರ್ಜೆಂಟೀನಾ (16ನೇ ಪ್ರಶಸ್ತಿ)

ರನ್ನರ ಅಪ್: ಕೊಲಂಬಿಯಾ

ಅತ್ಯಂತ ಯಶಸ್ವಿ ತಂಡ: ಅರ್ಜೆಂಟೀನಾ (16 ಪ್ರಶಸ್ತಿಗಳು)

CONMEBOL ಕೋಪಾ ಅಮೇರಿಕಾ (1975 ರವರೆಗೆ ದಕ್ಷಿಣ ಅಮೆರಿಕಾದ ಫುಟ್‌ಬಾಲ್ ಚಾಂಪಿಯನ್‌ಶಿಪ್  ಎಂದು ಕರೆಯಲಾಗುತ್ತದೆ), ಇದನ್ನು ಸಾಮಾನ್ಯವಾಗಿ ಕೋಪಾ ಅಮೇರಿಕಾ ಎಂದು ಕರೆಯಲಾಗುತ್ತದೆ, ಇದು ದಕ್ಷಿಣ ಅಮೆರಿಕಾದ ರಾಷ್ಟ್ರೀಯ ತಂಡಗಳ ನಡುವೆ ಸ್ಪರ್ಧಿಸುವ ಅಗ್ರ ಪುರುಷರ ಫುಟ್‌ಬಾಲ್ ಪಂದ್ಯಾವಳಿಯಾಗಿದೆ. ಸ್ಥಾಪನೆ: 1916