Published on: April 7, 2023

ಚುಟುಕು ಸಮಾಚಾರ:7 ಏಪ್ರಿಲ್ 2023

ಚುಟುಕು ಸಮಾಚಾರ:7 ಏಪ್ರಿಲ್ 2023

  • 15ನೇ ಶತಮಾನದಲ್ಲಿ ವಿಜಯಪುರದ ಆದಿಲ್ ಶಾಹಿಗಳ ದಾಳಿಯಿಂದ ವಿಜಯನಗರ ಪತನದ ನಂತರ ಬ್ರಿಟಿಷ್ ಆಗಮನದ ವರೆಗೂ ಅಸ್ತಿತ್ವದಲ್ಲಿ ಆನೆಗೊಂದಿ ಸಂಸ್ಥಾನದ ಕುರಿತು ಮಾಹಿತಿಯುಳ್ಳ ಶಿಲಾಶಾಸನಯೊಂದು ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮದಲ್ಲಿ ಪತ್ತೆಯಾಗಿದೆ.
  • ವಿಶ್ವಸಂಸ್ಥೆಯ ಅಂಕಿಅಂಶ ಆಯೋಗ ಹಾಗೂ ಇತರ 2 ಸಂಸ್ಥೆಗಳಿಗೆ ಭಾರತ ಆಯ್ಕೆಯಾಗಿದೆ. ಅಂಕಿಅಂಶ, ವೈವಿಧ್ಯತೆ ಹಾಗೂ ಜನಸಂಖ್ಯಾ ಕ್ಷೇತ್ರದಲ್ಲಿನ ಭಾರತದ ಪರಿಣತಿಯು ವಿಶ್ವಸಂಸ್ಥೆಯ ಸಂಖ್ಯಾ ಆಯೋಗದ ಸ್ಥಾನ ಗಳಿಸಲು ನೆರವಾಗಿದೆ.ಇದೀಗ ವಿಶ್ವಸಂಸ್ಥೆಯ ಸಂಖ್ಯಾ ಆಯೋಗದ ಮುಂದಿನ 4 ವರ್ಷಗಳ ಅವಧಿಗೆ ಭಾರತ ಆಯ್ಕೆಯಾಗಿದ್ದು, 2024ರ ಜನವರಿ 1 ರಿಂದ ಅಧಿಕಾರಾವಧಿ ಪ್ರಾರಂಭವಾಗಲಿದೆ
  • ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀ ಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಪಂಜಾಬ್ನ ಪಟಿಯಾಲಾ, ಅಮೃತಸರ, ಲುಧಿಯಾನಾ ಮತ್ತು ಫಗ್ವಾರಾಗಳಲ್ಲಿ ‘ಸಿಎಂ ದಿ ಯೋಗಶಾಲಾ’ ಯೋಜನೆಗೆ ಚಾಲನೆ ನೀಡಿದ್ದಾರೆ. ‘ಸಿಎಂ ದಿ ಯೋಗಶಾಲಾ’ ಯೋಜನೆಯಡಿ ಜನರಿಗೆ ಯೋಗ ಕಲಿಸಲು ಗುರು ರವಿದಾಸ್ ವಿಶ್ವವಿದ್ಯಾಲಯದಲ್ಲಿ 60 ಜನರಿಗೆ ತರಬೇತಿ ನೀಡಲಾಗಿದೆ. ಇದೇವೇಳೆ, ‘ಸಿಎಂ ದಿ ಯೋಗಶಾಲಾ’ ವೆಬ್ಸೈಟ್ ಸಹ ಆರಂಭಿಸಲಾಗಿದೆ.
  • ಭಾರತದ ಹೆಬ್ಬಾಗಿಲು ಎಂಬ ಖ್ಯಾತಿ ಪಡೆದಿರುವ ವಾಣಿಜ್ಯ ನಗರಿ ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಮೇಲ್ಮೈಯಲ್ಲಿ ಕೆಲವು ಬಿರುಕುಗಳು ಕಂಡುಬಂದಿವೆ. ಆದರೆ ಒಟ್ಟಾರೆ ಕಟ್ಟಡ ಉತ್ತಮ ಸ್ಥಿತಿಯಲ್ಲಿರುವುದು ಕಂಡುಬಂದಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಯಿತು. ಮುಂಬೈನ “ಗೇಟ್‌ವೇ ಆಫ್ ಇಂಡಿಯಾ, ಕೇಂದ್ರೀಯ-ರಕ್ಷಿತ ಸ್ಮಾರಕವಲ್ಲ. ಇದು ಮಹಾರಾಷ್ಟ್ರ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯ ರಕ್ಷಣೆಯಲ್ಲಿದೆ.
  • ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ದಿನವನ್ನೇ ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. 1950 ರಿಂದ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 07 ರಂದು ಆಚರಣೆ ಮಾಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು 75ನೇ ವಾರ್ಷಿಕೋತ್ಸವದ ಅಂಗವಾಗಿ ಈ ಬಾರಿ ವಿಶ್ವ ಆರೋಗ್ಯ ದಿನವನ್ನು’ಎಲ್ಲರಿಗೂ ಆರೋಗ್ಯ’ ಎಂಬ ವಿಷಯದ ಮೇಲೆ ಆಚರಣೆ ಮಾಡಲು ನಿರ್ಧರಿಸಿದೆ.