Published on: November 25, 2022

ಚುನಾವಣಾ ಬಾಂಡ್ ಯೋಜನೆ

ಚುನಾವಣಾ ಬಾಂಡ್ ಯೋಜನೆ

ಸುದ್ದಿಯಲ್ಲಿ ಏಕಿದೆ?

ಹಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವತ್ರಿಕ ಚುನಾವಣೆಯ ವರ್ಷವಾಗಿದ್ದು ಈ ನಡುವೆಯೇ ಸರ್ಕಾರ ಅಧಿಸೂಚನೆಯ ಮೂಲಕ ಚುನಾವಣಾ ಬಾಂಡ್ ಗಳ ಮಾರಾಟವನ್ನು 15 ದಿನಗಳ ಕಾಲ ವಿಸ್ತರಿಸಿದೆ. 

ಚುನಾವಣಾ ಬಾಂಡ್‌

  • ಯೋಜನೆಯ ನಿಬಂಧನೆಗಳ ಪ್ರಕಾರ, ಚುನಾವಣಾ ಬಾಂಡ್ ಗಳನ್ನು ಭಾರತದ ಪೌರತ್ವ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಖರೀದಿಸಬಹುದಾಗಿದೆ.
  • ಎಲೆಕ್ಟೋರಲ್ ಬಾಂಡ್ ಅಥವಾ ಚುನಾವಣಾ ಬಾಂಡ್‌ಗಳು ಪ್ರಾಮಿಸರಿ ನೋಟ್‌ನಂತಿದ್ದು ಇದನ್ನು ಯಾವುದೇ ಭಾರತೀಯ ಪ್ರಜೆ ಅಥವಾ ಕಂಪನಿಯು ಖರೀದಿಸಬಹುದು. ಈ ಬಾಂಡ್‌ಗಳನ್ನು ನಾಗರಿಕರು ಅಥವಾ ಕಾರ್ಪೊರೇಟ್‌ಗಳು ತಮ್ಮ ಆಯ್ಕೆಯ ಯಾವುದೇ ರಾಜಕೀಯ ಪಕ್ಷಕ್ಕೆ ದಾನ ಮಾಡಬಹುದು.
  • ಮಾರಾಟ ಮಾಡಲು ಅಧಿಕಾರ ಹೊಂದಿರುವ ಏಕೈಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆಗಿದೆ.
  • ದೇಣಿಗೆ ನೀಡುವವರು ತಮ್ಮ ಆಯ್ಕೆಯ ಪಕ್ಷದ ಪರ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ನಂತರ ದಾನ ಮಾಡಬಹುದು. ಬಳಿಕ ಆ ರಾಜಕೀಯ ಪಕ್ಷವು ತನ್ನ ಪರಿಶೀಲಿಸಿದ ಖಾತೆಯ ಮೂಲಕ 15 ದಿನಗಳಲ್ಲಿ ಹಣವನ್ನು ಪಡೆಯಬಹುದು.
  • ಒಬ್ಬ ವ್ಯಕ್ತಿ ಅಥವಾ ಕಂಪನಿಯು ಖರೀದಿಸಬಹುದಾದ ಬಾಂಡ್‌ಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.
  • ಒಂದು ವೇಳೆ, ಆ ರಾಜಕೀಯ ಪಕ್ಷವು 15 ದಿನಗಳಲ್ಲಿ ಹಣ ಪಡೆದುಕೊಳ್ಳಲಿದ್ದರೆ, ಆ ಸಂಗ್ರಹಿಸದ ಬಾಂಡ್‌ಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಎಸ್‌ಬಿಐ ಜಮಾ ಮಾಡುತ್ತದೆ.

ಚುನಾವಣಾ ಬಾಂಡ್‌ಗಳ ಪರಿಚಯ

  • ಚುನಾವಣಾ ಬಾಂಡ್‌ಗಳನ್ನು 2017ರ ಹಣಕಾಸು ಮಸೂದೆಯಲ್ಲಿ ಮೊದಲಿಗೆ ಪರಿಚಯಿಸಲಾಯಿತು. 2018ರ ಜನವರಿ 29ರಂದು ರಂದು, ನರೇಂದ್ರ ಮೋದಿ ನೇತೃತ್ವದ NDA ಸರ್ಕಾರವು ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದಿತು.