Published on: December 16, 2021
ಚುನಾವಣಾ ಸುಧಾರಣೆ ತರುವ ವಿಧೇಯಕ ಮಂಡನೆ
ಚುನಾವಣಾ ಸುಧಾರಣೆ ತರುವ ವಿಧೇಯಕ ಮಂಡನೆ
ಸುದ್ಧಿಯಲ್ಲಿ ಏಕಿದೆ ? ಚುನಾವಣೆ ಆಯೋಗದ ಶಿಫಾರಸಿನಂತೆ ಚುನಾವಣಾ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರಕಾರ, 4 ಪ್ರಮುಖ ಸುಧಾರಣೆ ತರುವ ವಿಧೇಯಕ ಮಂಡನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.
ಯಾವುದು ಆ ನಾಲ್ಕು ಪ್ರಮುಖ ಸುಧಾರಣೆ?
- ಚುನಾವಣೆ ಪ್ರಕ್ರಿಯೆ ಸಮರ್ಪಕ ಅನುಷ್ಠಾನ, ಮತದಾನ ಹೆಚ್ಚಿಸಲು ಕ್ರಮ, ಚುನಾವಣೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವುದು ಹಾಗೂ ನಕಲಿ ಮತದಾನ ತಡೆಯುವ ದಿಸೆಯಲ್ಲಿ ಕೇಂದ್ರ ಸರಕಾರ ವಿಧೇಯಕ ಮಂಡಿಸಲಿದೆ.
- ಆಧಾರ್ ಸಂಖ್ಯೆ -ಪ್ಯಾನ್ ಸಂಖ್ಯೆ ಜೋಡಿಸಿದಂತೆ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದು ಹೊಸ ಸುಧಾರಣೆಯಾಗಿದೆ. ಇದರಿಂದ ನಕಲಿ ಮತದಾನ ಹಾಗೂ ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದುವುದು ತಪ್ಪುತ್ತದೆ.
- ಇದುವರೆಗೆ ಪ್ರತಿ ವರ್ಷದ ಜನವರಿ 1ಕ್ಕೂ ಮೊದಲು 18 ವರ್ಷ ತುಂಬಿದವರು ವರ್ಷದಲ್ಲಿ ಒಮ್ಮೆ ಮಾತ್ರ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಿತ್ತು. ಆದರೆ, ಇನ್ನು ಮುಂದೆ ನಾಲ್ಕು ಬಾರಿ ನೋಂದಣಿಗೆ ಅವಕಾಶ ನೀಡಲಾಗಿದೆ. ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಎಂಬ ನಾಲ್ಕು ಕಟ್ಆಫ್ ದಿನಾಂಕ ನೀಡಿದೆ.
- ಹಾಗೆಯೇ, ಚುನಾವಣೆ ನಡೆಸಲು ಶಾಲೆ ಸೇರಿ ಹಲವು ಪ್ರಮುಖ ಸಂಸ್ಥೆಗಳಿಂದ ಕಟ್ಟಡ ನೀಡಲು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಚುನಾವಣೆ ಆಯೋಗಕ್ಕೆ ಚುನಾವಣೆ ನಡೆಸಲು ಯಾವುದೇ ಕಟ್ಟಡ ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ.
- ಸೇವಾ ಅಧಿಕಾರಿಗಳಲ್ಲಿ ಲಿಂಗ ಸಮಾನತೆ ತರಲು ಕಾನೂನು ರೂಪಿಸಲು ಸಹ ಕೇಂದ್ರ ಸರಕಾರ ತೀರ್ಮಾನಿಸಿದೆ. ಇದುವರೆಗೆ ಸರಕಾರಿ ಉದ್ಯೋಗದಲ್ಲಿರುವ ಪುರುಷ ಉದ್ಯೋಗಿಯ ಪತ್ನಿಗೆ ಮಾತ್ರ ಅಂಚೆ ಮೂಲಕ ಮತದಾನ ಮಾಡಲು ಅನುಮತಿ ಇತ್ತು. ಆದರೆ, ಇನ್ನು ಮುಂದೆ ಮಹಿಳಾ ನೌಕರರ ಪತಿಯರೂ ಕೂಡ ಅಂಚೆ ಮತದಾನ ಮಾಡಬಹುದಾಗಿದೆ.