Published on: November 18, 2021

ಜಗತ್ತಿನ ಅತಿ ಶ್ರೀಮಂತ ದೇಶ

ಜಗತ್ತಿನ ಅತಿ ಶ್ರೀಮಂತ ದೇಶ

ಸುದ್ಧಿಯಲ್ಲಿ ಏಕಿದೆ ? ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಅಧಿಕವಾಗಿದೆ. ಈ ಹಾದಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ಚೀನಾ ಮೊದಲ ಸ್ಥಾನಕ್ಕೇರಿದೆ.

  • ಮೆಕ್‌ಕಿನ್ಸೆ ಆಂಡ್ ಕೋ ಬಿಡುಗಡೆ ಮಾಡಿರುವ ಹೊಸ ವರದಿಯು ಹತ್ತು ದೇಶಗಳ ರಾಷ್ಟ್ರೀಯ ಲೆಕ್ಕ ಪತ್ರದ ವಿವರಗಳನ್ನು ಅಧ್ಯಯನ ಮಾಡಿದ್ದು, ಈ ದೇಶಗಳು ಜಗತ್ತಿನ ಒಟ್ಟು ಆದಾಯದ ಶೇ 60ರಷ್ಟು ಪಾಲನ್ನು ಹೊಂದಿವೆ ಎಂದು ತಿಳಿಸಿದೆ.

ವರದಿಯಲ್ಲಿ ಏನಿದೆ ?

  • ಜಗತ್ತಿನ ಒಟ್ಟಾರೆ ನಿವ್ವಳ ಸಂಪತ್ತು 2000ನೇ ಇಸವಿಯಲ್ಲಿ 156 ಟ್ರಿಲಿಯನ್ ಡಾಲರ್ ಇತ್ತು. 2020ಕ್ಕೆ ಅದು 514 ಟ್ರಿಲಿಯನ್ ಡಾಲರ್‌ಗೆ ತಲುಪಿದೆ
  • ಈ ಹೆಚ್ಚಳದಲ್ಲಿ ಸರಿಸುಮಾರು ಮೂರನೇ ಒಂದು ಭಾಗವನ್ನು ಚೀನಾ ಒಳಗೊಂಡಿದೆ. ವಿಶ್ವ ವ್ಯಾಪಾರ ಸಂಘಟನೆಯೊಳಗೆ ಸೇರ್ಪಡೆಯಾಗುವ ಒಂದು ವರ್ಷದ ಮುನ್ನ, 2000ದಲ್ಲಿ 7 ಟ್ರಿಲಿಯನ್ ಡಾಲರ್ ಇದ್ದ ಚೀನಾ ಸಂಪತ್ತು, 2020ರಲ್ಲಿ 120 ಟ್ರಿಲಿಯನ್ ಡಾಲರ್‌ಗೆ ರಾಕೆಟ್‌ನಂತೆ ಏರಿಕೆಯಾಗಿದೆ.
  • ಆಸ್ತಿ ದರಗಳಲ್ಲಿ ಹೆಚ್ಚು ಏರಿಕೆ ಕಂಡಿರುವ ಅಮೆರಿಕದಲ್ಲಿ, ನಿವ್ವಳ ಸಂಪತ್ತು ಈ ಅವಧಿಯಲ್ಲಿ ಎರಡು ಪಟ್ಟಿಗೂ ಅಧಿಕವಾಗಿದ್ದು, 90 ಟ್ರಿಲಿಯನ್ ಡಾಲರ್ ಆಗಿದೆ. ಜಗತ್ತಿನ ಅತಿ ದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾದಲ್ಲಿ ಶೇ 10ರಷ್ಟು ಶ್ರೀಮಂತ ವ್ಯಕ್ತಿಗಳು ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ. ಅವರ ಷೇರುಗಳು ಏರಿಕೆಯಾಗುತ್ತಲೇ ಇದೆ ಎಂದು ವರದಿ ತಿಳಿಸಿದೆ.
  • ಮೆಕ್‌ಕಿನ್ಸೆ ಲೆಕ್ಕಾಚಾರದ ಪ್ರಕಾರ, ಶೇ 68ರಷ್ಟು ಜಾಗತಿಕ ನಿವ್ವಳ ಸಂಪತ್ತು ರಿಯಲ್ ಎಸ್ಟೇಟ್‌ನಲ್ಲಿದೆ. ಇನ್ನುಳಿದ ಸಂಪತ್ತು ಮೂಲ ಸೌಕರ್ಯ, ಯಂತ್ರ ಮತ್ತು ಸಾಧನಗಳಂತಹ ವಲಯಗಳಲ್ಲಿದೆ. ಇನ್ನು ಅಲ್ಪ ಪ್ರಮಾಣದಲ್ಲಿ ಬೌದ್ಧಿಕ ಆಸ್ತಿ ಮತ್ತು ಪೇಟೆಂಟ್‌ಗಳಂತಹ ಅಮೂರ್ತ ಕ್ಷೇತ್ರಗಳಲ್ಲಿ ಈ ಸಂಪತ್ತು ಇದೆ.
  • ಜಾಗತಿಕ ಸಂಪತ್ತಿನ ಲೆಕ್ಕಾಚಾರದಲ್ಲಿ ಹಣಕಾಸು ಆಸ್ತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಏಕೆಂದರೆ ಅವು ಭಾದ್ಯತೆಗಳಿಗೆ ಒಳಪಟ್ಟಿರುತ್ತವೆ. ಕಾರ್ಪೊರೇಟ್ ಬಾಂಡ್ ವ್ಯಕ್ತಿಗತ ಹೂಡಿಕೆದಾರನ ನಿಯಂತ್ರಣದಲ್ಲಿ ಇರುತ್ತದೆ. ಈ ಕಾರಣಕ್ಕಾಗಿ ಅವುಗಳನ್ನು ಲೆಕ್ಕ ಮಾಡಿಲ್ಲ.

ಅಡ್ಡ ಪರಿಣಾಮಗಳು

  • ಕಳೆದ ಎರಡು ದಶಕಗಳಲ್ಲಿ ನಿವ್ವಳ ಸಂಪತ್ತಿನ ತೀವ್ರ ಏರಿಕೆಯು ಒಟ್ಟು ಜಾಗತಿಕ ಆಂತರಿಕ ಉತ್ಪನ್ನದಲ್ಲಿನ ಕಡಿತದ ಏರಿಕೆಗೆ ಕಾರಣವಾಗಿದೆ. ಮತ್ತು ಆಸ್ತಿ ದರಗಳಲ್ಲಿನ ಹೆಚ್ಚಳವು ಬಡ್ಡಿ ದರ ಕುಸಿತಕ್ಕೆ ಕಾರಣವಾಗುತ್ತಿದೆ
  • ಆಸ್ತಿ ದರಗಳು ಅವುಗಳ ದೀರ್ಘಾವಧಿ ಸರಾಸರಿ ಆದಾಯದ ಸರಿಸುಮಾರಿ ಶೇ 50ರಷ್ಟು ಹೆಚ್ಚಿದೆ. ಈ ಏರಿಕೆಯು ಸಂಪತ್ತಿನ ಹೆಚ್ಚಳದ ಸುಸ್ಥಿರತೆಯ ಕುರಿತಾಗಿ ಪ್ರಶ್ನೆಗಳನ್ನು ಹುಟ್ಟಿಸಿದೆ.
  • ರಿಯಲ್ ಎಸ್ಟೇಟ್ ಮೌಲ್ಯದ ಹೆಚ್ಚಳದಿಂದ ಅನೇಕ ಜನರು ಮನೆಗಳನ್ನು ಖರೀದಿಸಲು ಸಾಧ್ಯವಾಗದಂತೆ ಮಾಡಿದೆ. ಜತೆಗೆ ಹಣಕಾಸು ಬಿಕ್ಕಟ್ಟುಗಳ ಅಪಾಯವನ್ನು ಹೆಚ್ಚಿಸಿದೆ. 2008ರಲ್ಲಿ ಅಮೆರಿಕವು ನಿವಾಸಗಳ ಬಿಕ್ಕಟ್ಟು ಎದುರಾಗಿತ್ತು. ಚೀನಾದಲ್ಲಿಯೂ ಅಂತಹ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.
  • ಜಾಗತಿಕ ಸಂಪತ್ತಿನ ಪಟ್ಟಿಯಲ್ಲಿ ಚೀನಾ ಮತ್ತು ಅಮೆರಿಕ ಬಳಿಕ ಕ್ರಮವಾಗಿ ಜರ್ಮನಿ, ಫ್ರಾನ್ಸ್, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜಪಾನ್, ಮೆಕ್ಸಿಕೋ ಮತ್ತು ಸ್ವೀಡನ್ ದೇಶಗಳು ಇವೆ.