Published on: November 16, 2022

ಜನಜಾತಿಯ ಗೌರವ್ ದಿವಸ್

ಜನಜಾತಿಯ ಗೌರವ್ ದಿವಸ್

ಸುದ್ದಿಯಲ್ಲಿ ಏಕಿದೆ?

ಭಾರತ ಸರ್ಕಾರವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ಪ್ರತಿ ವರ್ಷ ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲಾಗುವುದು ಎಂದು ಘೋಷಿಸಿದೆ.

ಮುಖ್ಯಾಂಶಗಳು

  • ಭವ್ಯ ಭಾರತಕ್ಕಾಗಿ ಬುಡಕಟ್ಟು ಸಬಲೀಕರಣ ತುಂಬಾ ಮುಖ್ಯವಾದದ್ದು, ಏಕೆಂದರೆ ಜನಜಾತಿಯ ಗೌರವ್ ದಿವಸ್ ಭಾರತದ ಭವ್ಯವಾದ ಬುಡಕಟ್ಟು ಪರಂಪರೆ, ಸಂಸ್ಕೃತಿ ಮತ್ತು ಸಾಧನೆಗಳನ್ನು ಸಂಕೇತಿಸುತ್ತದೆ.
  • ಇದು ಆತ್ಮನಿರ್ಭರ್ ಭಾರತ್‌ನ ಸ್ಪೂರ್ತಿಯಿಂದ ಉತ್ತೇಜಿಸಲ್ಪಟ್ಟಿದೆ‌ ಅಲ್ಲದೇ ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನವನ್ನು‌ ಇದು ಬಲಪಡಿಸುತ್ತದೆ.
  • ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಭಾರತದ ಬುಡಕಟ್ಟು ಪರಂಪರೆಯ ಸಂಪ್ರದಾಯಗಳು ಮತ್ತು ಅದರ ವೀರರ ಕಥೆಗಳಿಗೆ ಹೆಚ್ಚು ಮಹತ್ವದ ಮತ್ತು ಭವ್ಯವಾದ ಗುರುತನ್ನು ಒದಗಿಸುವುದಾಗಿ ದೇಶವು ನಿರ್ಧರಿಸಿದೆ.
  • ಮ್ಯೂಸಿಯಂಗಳ ಸ್ಥಾಪನೆ : ಬುಡಕಟ್ಟು ಸಮುದಾಯದ ಸ್ವತಂತ್ರ ಹೋರಾಟಗಾರರ ಬಲಿದಾನ ಸ್ಮರಣೆಗೆ ಮೀಸಲಾದ ಮ್ಯೂಸಿಯಂ ಅನ್ನು ದೇಶದಾದ್ಯಂತ ನಿರ್ಮಿಸಲಾಗುತ್ತಿದೆ.

ಕಾರಣ :

  • ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸಮುದಾಯದ ಸಾಧನೆಗೆ ಭಗವಾನ್ ಬಿರ್ಸಾ ಮುಂಡಾ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು

ಉದ್ದೇಶ

  • ಈ ಆಚರಣೆಗಳು ಭಗವಾನ್ ಬಿರ್ಸಾ ಮುಂಡಾ ಅವರಂತಹ ಕೆಚ್ಚೆದೆಯ ಬುಡಕಟ್ಟು ನಾಯಕರ ಸ್ವಾತಂತ್ರ್ಯ ಹೋರಾಟವನ್ನು ಎತ್ತಿ ತೋರಿಸುತ್ತವೆ. ಈ ಆಚರಣೆಗಳು ದೇಶಕ್ಕಾಗಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಗುರುತಿಸಿ, ಅವರ ಪರಂಪರೆಯನ್ನು ಮುಂದುವರಿಸಿ, ಬುಡಕಟ್ಟು ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದು.

ಬಿರ್ಸಾ ಮುಂಡಾ

  • ಜನನ : ನವೆಂಬರ್ 15, 1875.
  • ಸ್ಥಳ: ರಾಂಚಿಯ ಬಳಿಯ ಉಳಿಹಾಟು
  • ಮುಂಡಾ ಬುಡಕಟ್ಟು ಸಮುದಾಯಕ್ಕೆ ಸೇರಿದವರು.
  • ಮುಂಡಾ ಬುಡಕಟ್ಟು ಸಮುದಾಯದವರು ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವ ಛೋಟಾನಾಗ್‌ಪುರ ಪ್ರಸ್ಥಭೂಮಿಯಲ್ಲಿ ಕಾಣಸಿಗುತ್ತಾರೆ.
  • ಬಿರ್ಸಾ ಮುಂಡಾ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕ. ದೇಶದ ಪ್ರಮುಖ ಬುಡಕಟ್ಟು ನಾಯಕ. ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಶೋಷಕ ವ್ಯವಸ್ಥೆಯ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಬುಡಕಟ್ಟು ನಾಯಕ.
  • 1893 – 94ರಲ್ಲಿ ಬ್ರಿಟಿಷ್ ಸರ್ಕಾರ ಎಲ್ಲಾ ಕಾಡುಗಳನ್ನೂ ಮತ್ತು ಅವುಗಳಲ್ಲಿದ್ದ ಹಳ್ಳಿಗಳನ್ನೂ ರಕ್ಷಿತ ಅರಣ್ಯ ಪ್ರದೇಶಗಳೆಂದು ಘೋಷಿಸಿತು. ಆ ಮೂಲಕ ಆದಿವಾಸಿಗಳ ಎಲ್ಲಾ ಹಕ್ಕುಗಳನ್ನೂ ಕಿತ್ತುಕೊಂಡಿತು. ಬ್ರಿಟಿಷರ ಈ ನೀತಿಯ ವಿರುದ್ದ ಬಿರ್ಸಾ ಸ್ವಾತಂತ್ರ ಸಂಗ್ರಾಮವಾಗಿ ರೂಪಿಸುವಲ್ಲಿ ಯಶಸ್ವಿಯಾದ. ಬ್ರಿಟಿಷರಿಂದ, ಭೂಮಾಲೀಕರಿಂದ ಮತ್ತು ವ್ಯಾಪಾರಸ್ಥರಿಂದ ಬಿಡುಗಡೆಯ ಹೋರಾಟಕ್ಕೆ ತನ್ನ ಜನರನ್ನು ಸಜ್ಜುಗೊಳಿಸಿದ.
  • 1894ರ ಅಕ್ಟೋಬರ್ 1 ರಂದು ಚೋಟಾ ನಾಗ್ಪುರ್ ಎಂಬಲ್ಲಿಗೆ ಬ್ರಹತ್ ಮೆರವಣಿಗೆಗೆ ಕರೆ ನೀಡಿದ. “ಉಳುವವನೇ ಭೂಮಿಯ ಒಡೆಯನಾಗಬೇಕು”, ‘ಮಹಾರಾಣಿಯ ಆಡಳಿತವನ್ನು ಅಂತ್ಯಗಾಣಿಸಬೇಕು’ ಎಂಬ ಎರಡು ಉದ್ದೇಶಗಳು ಈ ಮೆರವಣಿಗೆಯ ಪ್ರಮುಖ ಅಂಶಗಳಾಗಿದ್ದವು. ಬಿರ್ಸಾನ ಕರೆಗೆ ಆದಿವಾಸಿಗಳು ಸ್ಪಂದಿಸಿ ಮೆರವಣಿಗೆ ಯಶಸ್ವಿಯಾಯಿತು.