Published on: November 4, 2022
ಜಲಸಂಪನ್ಮೂಲ ಅಭಿವೃದ್ಧಿಗೆ ಡೆನ್ಮಾರ್ಕ್ ಜತೆ ಒಪ್ಪಂದ
ಜಲಸಂಪನ್ಮೂಲ ಅಭಿವೃದ್ಧಿಗೆ ಡೆನ್ಮಾರ್ಕ್ ಜತೆ ಒಪ್ಪಂದ
ಸುದ್ದಿಯಲ್ಲಿ ಏಕಿದೆ?
ಜಲಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಡೆನ್ಮಾರ್ಕ್ ಜತೆಗಿನ ಒಡಂಬಡಿಕೆಗೆ (ಎಂಒಯು) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮುಖ್ಯಾಂಶಗಳು
- ಒಡಂಬಡಿಕೆಯಲ್ಲಿ ಏನೇನಿದೆ? ಸುಲಭ ಮಾಹಿತಿ ಲಭ್ಯತೆ, ಸಮಗ್ರ ಮತ್ತು ಸ್ಮಾರ್ಟ್ ಜಲಸಂಪನ್ಮೂಲ ಅಭಿವೃದ್ಧಿ ಹಾಗೂ ನಿರ್ವಹಣೆ, ಜಲಚರ ಮ್ಯಾಪಿಂಗ್, ಅಂತರ್ಜಲ ಮಾದರಿ, ಮೇಲ್ವಿಚಾರಣೆ ಮತ್ತು ಮರುಪೂರಣ, ಮನೆಗಳ ಮಟ್ಟದಲ್ಲಿ ಪರಿಣಾಮಕಾರಿ ಮತ್ತು ಸುಸ್ಥಿರ ನೀರು ಸರಬರಾಜು ದಕ್ಷತೆ, ಆದಾಯೇತರ ನೀರು ಮತ್ತು ಶಕ್ತಿಯ ಬಳಕೆ ಕಡಿಮೆ ಮಾಡುವುದು, ಹವಾಮಾನ ಬದಲಾವಣೆ ತಗ್ಗಿಸುವಿಕೆ, ನದಿ ಕೇಂದ್ರಿತ ನಗರ ಯೋಜನೆ, ದ್ರವ ತ್ಯಾಜ್ಯ ತಗ್ಗಿಸುವ ಕ್ರಮಗಳು ಒಡಂಬಡಿಕೆಯು ಒಳಗೊಂಡಿದೆ.
- ಸ್ಮಾರ್ಟ್ ಜಲ ಸಂಪನ್ಮೂಲಗಳ ನಿರ್ವಹಣೆಗೆ ಶ್ರೇಷ್ಠತಾ ಕೇಂದ್ರ ಮತ್ತು ವಾರಾಣಸಿಯಲ್ಲಿ ಶುದ್ಧ ನದಿ ನೀರಿನ ಸ್ಮಾರ್ಟ್ ಲ್ಯಾಬ್ ಈ ಒಡಂಬಡಿಕೆಯಲ್ಲಿದೆ.
ಉದ್ದೇಶ
- ಸಮಗ್ರ ಮತ್ತು ಸುಸ್ಥಿರ ವಿಧಾನದ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಸುರಕ್ಷಿತ ನೀರಿನ ಬೇಡಿಕೆಗಳ ಪೂರೈಕೆ ಖಾತ್ರಿಪಡಿಸುವುದು.