Published on: January 8, 2022

ಜಲ ಸಂರಕ್ಷಣೆ

ಜಲ ಸಂರಕ್ಷಣೆ

ಸುದ್ಧಿಯಲ್ಲಿ ಏಕಿದೆ ? ಕೇಂದ್ರ ಜಲ ಶಕ್ತಿ ಸಚಿವಾಲಯವು 2020ನೇ ಸಾಲಿನ ರಾಷ್ಟ್ರೀಯ ಜಲ ಪ್ರಶಸ್ತಿ ಘೋಷಿಸಿದ್ದು, ಜಲ ಸಂರಕ್ಷಣೆಗಾಗಿ ಉತ್ತರ ಪ್ರದೇಶವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.

ಮುಖ್ಯಾಂಶಗಳು

  • ರಾಜಸ್ಥಾನ ಹಾಗೂ ತಮಿಳುನಾಡು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
  • ಜಲ ಸಂರಕ್ಷಣೆಗಾಗಿ ಹೆಚ್ಚಿನ ಶ್ರಮ ವಹಿಸಿದ ಜಿಲ್ಲೆಗಳಲ್ಲಿ ದಕ್ಷಿಣ ವಲಯದಲ್ಲಿ ಕೇರಳದ ತಿರುವನಂತಪುರಂ ಪ್ರಥಮ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶದ ಕಡಪ ಎರಡನೇ ಸ್ಥಾನ ಪಡೆದಿದೆ. ಹಾಗೆಯೇ, ಉತ್ತರ ವಲಯದಲ್ಲಿ ಉತ್ತರ ಪ್ರದೇಶದ ಮುಜಫ್ಫರ್‌ನಗರ, ಪಂಜಾಬ್‌ನ ಶಹೀದ್‌ ಭಗತ್‌ ಸಿಂಗ್‌ ನಗರ, ಪೂರ್ವದಲ್ಲಿ ಬಿಹಾರದ ಪೂರ್ವ ಚಂಪಾರಣ್‌, ಜಾರ್ಖಂಡ್‌ನ ಗೊಡ್ಡ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ.
  • ಪಶ್ಚಿಮ ವಲಯದಲ್ಲಿ ಮಧ್ಯಪ್ರದೇಶದ ಇಂದೋರ್‌ ಮೊದಲ ಸ್ಥಾನ ಪಡೆದರೆ, ಗುಜರಾತ್‌ನ ವಡೋದರ ಹಾಗೂ ರಾಜಸ್ಥಾನದ ಬನ್ಸ್‌ವಾರ ಜಿಲ್ಲೆಗಳು ಜಂಟಿಯಾಗಿ ದ್ವೀತಿಯ ಸ್ಥಾನ ಗಳಿಸಿವೆ. ಈಶಾನ್ಯ ವಲಯದಲ್ಲಿ ಅಸ್ಸಾಂನ ಗೋಪಾಲ್‌ಪರ ಮತ್ತು ಅರುಣಾಚಲ ಪ್ರದೇಶದ ಸಿಯಾಂಗ್‌ ಮೊದಲ ಹಾಗೂ ಎರಡನೇ ಅಗ್ರ ಜಿಲ್ಲೆಯಾಗಿ ಹೊರ ಹೊಮ್ಮಿವೆ

ಜಲ ಸಂರಕ್ಷಣೆ ಅಗತ್ಯತೆ

  • ‘ದೇಶಾದ್ಯಂತ ಕೃಷಿ, ನೀರಾವರಿ, ಕೈಗಾರಿಕೆ, ಕುಡಿಯುವ ನೀರು ಸೇರಿದಂತೆ ಹಲವು ಕ್ಷೇತ್ರಗಳಿಗೆ ವಾರ್ಷಿಕ 1,000 ಶತಕೋಟಿ ಕ್ಯುಬಿಕ್‌ ಮೀಟರ್‌ ನೀರಿನ ಅವಶ್ಯಕತೆ ಇದೆ. ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿರುವ ಕಾರಣ ಬೇಡಿಕೆಗಿಂತ ಲಭ್ಯತೆ ಕಡಿಮೆ ಇದೆ. ಅದರಲ್ಲೂ, 2050ರ ವೇಳೆಗೆ ಬೇಡಿಕೆ ಪ್ರಮಾಣ 1,400-1,500 ಶತಕೋಟಿ ಕ್ಯುಬಿಕ್‌ ಮೀಟರ್‌ಗೆ ತಲುಪುವ ಸಾಧ್ಯತೆ ಇದೆ. ಹಾಗಾಗಿ, ಜಲ ಸಂರಕ್ಷಣೆಗೆ ಎಲ್ಲರೂ ಒಗ್ಗೂಡಿ, ಸಕಾರಾತ್ಮಕ ಮನೋಭಾವದಿಂದ ಕಾಯರ್ನಿವಹಿಸಬೇಕಿದೆ

ರಾಷ್ಟ್ರೀಯ ಜಲ ಪ್ರಶಸ್ತಿ

  • ದೇಶಾದ್ಯಂತ ‘ಜಲ ಸಮೃದ್ಧ ಭಾರತ’ವನ್ನು ನೋಡಲು ರಾಜ್ಯಗಳು, ಜಿಲ್ಲೆಗಳು, ವ್ಯಕ್ತಿಗಳು, ಸಂಸ್ಥೆಗಳು ಮುಂತಾದವುಗಳು ಮಾಡಿದ ಅನುಕರಣೀಯ ಕೆಲಸ ಮತ್ತು ಪ್ರಯತ್ನಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ
  • ಮೇಲ್ಮೈ ನೀರು ಮತ್ತು ಅಂತರ್ಜಲ ಜಲಚಕ್ರದ ಅವಿಭಾಜ್ಯ ಅಂಗವಾಗಿದೆ ಎಂಬ ಅಂಶವನ್ನು ಪರಿಗಣಿಸಿ, ಜಲಸಂಪನ್ಮೂಲ ನಿರ್ವಹಣೆಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಮಧ್ಯಸ್ಥಗಾರರನ್ನು ಉತ್ತೇಜಿಸುವ ಉದ್ದೇಶಗಳೊಂದಿಗೆ ಏಕೀಕೃತ ರಾಷ್ಟ್ರೀಯ ಜಲ ಪ್ರಶಸ್ತಿಯನ್ನು ನೀಡುತ್ತಿದೆ
  • ಮೊದಲ ರಾಷ್ಟ್ರೀಯ ಜಲ ಪ್ರಶಸ್ತಿಯನ್ನು ಜಲ ಶಕ್ತಿ ಸಚಿವಾಲಯವು 2018 ರಲ್ಲಿ ಪ್ರಾರಂಭಿಸಿತು. ಜಲಸಂಪನ್ಮೂಲ ನಿರ್ವಹಣೆ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ, ಜಲಶಕ್ತಿ ಸಚಿವಾಲಯವು 11 ವಿವಿಧ ವಿಭಾಗಗಳಲ್ಲಿ ರಾಜ್ಯಗಳು, ಸಂಸ್ಥೆಗಳು, ವ್ಯಕ್ತಿಗಳು ಇತ್ಯಾದಿಗಳಿಗೆ 57 ಪ್ರಶಸ್ತಿಗಳನ್ನು ನೀಡುತ್ತಿದೆ.