Published on: December 20, 2022

ಜಾಗತಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಲೇಖನ:

ಜಾಗತಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಲೇಖನ:

ಸುದ್ದಿಯಲ್ಲಿ ಏಕಿದೆ? ಈ ವರ್ಷ ಜಾಗತಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಲೇಖನಗಳು ಪ್ರಕಟಗೊಂಡ ಅಥ್ಲೀಟ್‌ಗಳ ಪಟ್ಟಿಯಲ್ಲಿ ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ಈ ಪಟ್ಟಿಯಲ್ಲಿ ಕಳೆದ ಹಲವು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಜಮೈಕದ ಸ್ಪ್ರಿಂಟರ್‌ ಉಸೇನ್‌ ಬೋಲ್ಟ್‌ ಅವರನ್ನು ಹಿಂದಿಕ್ಕಿದ್ದಾರೆ.
  • 2017 ರಲ್ಲಿ ನಿವೃತ್ತಿಯಾಗಿದ್ದರೂ ಬೋಲ್ಟ್‌ ಹಲವು ವರ್ಷಗಳಿಂದ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು.
  • ಜಮೈಕದ ಓಟಗಾರ್ತಿಯರಾದ ಎಲೈನ್ ಥಾಂಪ್ಸನ್ ಹೆರಾ (751 ಲೇಖನ), ಶೆಲ್ಲಿ ಆ್ಯನ್‌ ಫ್ರೇಸರ್‌ ಪ್ರೈಸ್‌ (698) ಮತ್ತು ಶೆರಿಕಾ ಜಾಕ್ಸನ್‌ (679) ಅವರು ಚೋಪ್ರಾ ಬಳಿಕದ ಸ್ಥಾನಗಳಲ್ಲಿದ್ದಾರೆ.
  • ಪಟ್ಟಿ ಬಿಡುಗಡೆ ಮಾಡುವವವರು :ಜಾಗತಿಕ ಮಾಧ್ಯಮಗಳಲ್ಲಿ ಯಾವ ಟ್ರ್ಯಾಕ್‌ ಮತ್ತು ಫೀಲ್ಡ್‌ ಅಥ್ಲೀಟ್‌ ಬಗ್ಗೆ ಅತಿಹೆಚ್ಚು ಲೇಖನಗಳು ಪ್ರಕಟವಾಗಿವೆ ಎಂಬುದನ್ನು ಆಧರಿಸಿ ವಿಶ್ವ ಅಥ್ಲೆಟಿಕ್‌ ಫೆಡರೇಷನ್‌ ಪ್ರತಿವರ್ಷವೂ ಪಟ್ಟಿ ಬಿಡುಗಡೆ ಮಾಡುತ್ತದೆ.