Published on: November 25, 2022
ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿ
ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿ
ಸುದ್ದಿಯಲ್ಲಿ ಏಕಿದೆ?
ತಮಿಳುನಾಡು ಸರ್ಕಾರ ಐತಿಹಾಸಿಕ ಮಧುರೈ ಜಿಲ್ಲೆಯ 2 ಗ್ರಾಮಗಳನ್ನು ಅರಿಟ್ಟಪಟ್ಟಿ ಮತ್ತು ಮೀನಾಕ್ಷಿಪುರಂ ಗ್ರಾಮಗಳನ್ನು ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿಗೆ ಅಧಿಕೃತವಾಗಿ ಸೇರಿಸಿ ಘೋಷಣೆ ಮಾಡಿದೆ.
ಮುಖ್ಯಾಂಶಗಳು
- ಆ ಮೂಲಕ ರಾಜ್ಯದ ಇತಿಹಾದಲ್ಲಿಯೇ ಮೊದಲ ಬಾರಿಗೆ 2 ಇಡೀ ಗ್ರಾಮಗಳನ್ನೇ ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿಗೆ ಸೇರಿಸಿರುವುದು ಇದೇ ಮೊದಲು.
ಉದ್ದೇಶ
- ಈ ಸಂರಕ್ಷಣಾ ಕ್ರಮದ ಮೂಲಕ ಸ್ಥಳೀಯ ಸಮುದಾಯಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು. ಇದು ಸಮಾಜದ ಎಲ್ಲಾ ವರ್ಗಗಳಲ್ಲಿ ಸಂರಕ್ಷಣಾ ನೀತಿಗಳನ್ನು ಹುಟ್ಟುಹಾಕುವ ಮತ್ತು ಪೋಷಿಸುವ ಗುರಿಯನ್ನು ಹೊಂದಿದೆ. ಇದು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಶೋಷಣೆಯನ್ನು ಕೊನೆಗೊಳಿಸುತ್ತದೆ ಮತ್ತು ಪರಿಸರ ಅವನತಿಯನ್ನು ತಪ್ಪಿಸುತ್ತದೆ.
ಕಾರಣ:
- ಈ 2 ಗ್ರಾಮಗಳಲ್ಲಿ ಸುಮಾರು 2,000 ವರ್ಷಗಳಷ್ಟು ಹಿಂದಿನ ಹಲವಾರು ಅಳಿವಿನಂಚಿನಲ್ಲಿರುವ ಸ್ಥಳೀಯ ಜಾತಿಯ ತಳಿಗಳಿದ್ದು, ಐತಿಹಾಸಿಕ ರಚನೆಗಳನ್ನು ಹೊಂದಿವೆ. ಈ ಜೀವವೈವಿಧ್ಯವನ್ನು ಬಲಪಡಿಸಲು ಮತ್ತು ಅದರ ಸಂರಕ್ಷಿಸಲು ಸರ್ಕಾರವು ಈ ಅಧಿಸೂಚನೆಯನ್ನು ಹೊರಡಿಸಿದೆ.
ಏನು ಈ ಹಳ್ಳಿಗಳ ವಿಶೇಷ?
ಭೌಗೋಳಿಕವಾಗಿ
- ಮಧುರೈ ತಾಲೂಕಿನ ಮೀನಾಕ್ಷಿಪುರಂ ಮತ್ತು ಮೇಲೂರು ತಾಲೂಕಿನ ಅರಿಟ್ಟಪಟ್ಟಿಯಲ್ಲಿ ಒಟ್ಟು 193.2 ಹೆಕ್ಟೇರ್‌ಗಳನ್ನು ಜೀವವೈವಿಧ್ಯ ಪರಂಪರೆಯ ತಾಣಗಳೆಂದು ಗುರುತಿಸಲಾಗಿದೆ.
- ಈ ಎರಡೂ ಸ್ಥಳಗಳು ರಾಜ್ಯದಲ್ಲಿಯೇ ವಿಶೇಷವಾಗಿದ್ದು, ಈ ಪ್ರದೇಶದ ಕೆಲವು ಗುಡ್ಡಗಳು ಶ್ರೀಮಂತ ಜೈವಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ.
- ಮೂರು ರಾಪ್ಟರ್ ಪ್ರಭೇದಗಳು (ಗಿಡುಗಗಳು), ಲಗ್ಗರ್ ಫಾಲ್ಕನ್ಗಳು (ರಣ ಹದ್ದುಗಳು)ಮತ್ತು ಇತರ ವನ್ಯಜೀವಿಗಳು ಸೇರಿದಂತೆ ಸುಮಾರು 250 ಪಕ್ಷಿ ಪ್ರಭೇದಗಳಿವೆ.
- ಅಳಿವಿನಂಚಿನಲ್ಲಿರುವ ತೆಳ್ಳಗಿನ ಲೋರಿಸ್ (ಕಾಡುಪಾಪ ಜಾತಿಗೆ ಸೇರಿದ ಪ್ರಾಣಿ) ಸೇರಿದಂತೆ ಹಲವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಇಲ್ಲಿ ಆವಾಸ ಪಡೆದಿವೆ.
- ಈ ಪ್ರದೇಶವು ಜಲಾನಯನ ಪ್ರದೇಶವಾಗಿ ಏಳು ಬಂಜರು ಗ್ರಾನೈಟ್ ಗುಡ್ಡಗಳ ಸರಣಿಯನ್ನು ಒಳಗೊಂಡಿದೆ ಮತ್ತು 72 ಸರೋವರಗಳು, 200 ನೈಸರ್ಗಿಕ ಸ್ಪ್ರಿಂಗ್ ಪೂಲ್‌ಗಳು (ಕೊಳಗಳು) ಮತ್ತು ಮೂರು ಚೆಕ್ ಅಣೆಕಟ್ಟುಗಳನ್ನು ಬೆಂಬಲಿಸುತ್ತದೆ.
ಐತಿಹಾಸಿಕವಾಗಿ
- ಈ ಪ್ರದೇಶದಲ್ಲಿ ಕಂಡುಬರುವ ಮೆಗಾಲಿಥಿಕ್ ರಚನೆಗಳು ತಮಿಳು ಬ್ರಾಹ್ಮಿ ಶಾಸನಗಳು, ಜೈನ ಕಲಾಕೃತಿಗಳು ಮತ್ತು 2,200 ವರ್ಷಗಳಷ್ಟು ಹಳೆಯದಾದ ಕಲ್ಲಿನ ದೇವಾಲಯಗಳನ್ನು ಹೊಂದಿವೆ.