Published on: February 13, 2023

ಜೋಳದ ಕೊರತೆ: 2 ಹೊಸ ತಳಿಗಳ ಸಂಶೋಧನೆ

ಜೋಳದ ಕೊರತೆ: 2 ಹೊಸ ತಳಿಗಳ ಸಂಶೋಧನೆ


ಸುದ್ದಿಯಲ್ಲಿ ಏಕಿದೆ? ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾದ ಜೋಳದ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (RARS) ಹೆಚ್ಚು ಇಳುವರಿ ನೀಡುವ ಎರಡು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. 


ಮುಖ್ಯಾಂಶಗಳು

  • ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಮತ್ತು ಸಾಮಾನ್ಯಕ್ಕಿಂತ ಕನಿಷ್ಠ ಶೇ 25 ರಷ್ಟು ಹೆಚ್ಚು ಧಾನ್ಯವನ್ನು ಇವು ನೀಡಬಹುದು.
  • ತಳಿಗಳು: BGV-44 ಮತ್ತು CSV-29 ಎಂದು ಇವುಗಳನ್ನು ಹೆಸರಿಸಲಾಗಿದ್ದು, ಈ ಎರಡು ತಳಿಗಳು ಜೋಳದ ಉತ್ಪಾದನೆಗೆ ಉತ್ತೇಜನ ನೀಡುತ್ತವೆ.

ಈ ತಳಿಗಳ ವಿಶೇಷತೆಗಳು

  • BGV-44 ರ ಬಗ್ಗೆ, ಹೆಚ್ಚು ತೇವಾಂಶವನ್ನು ಹೊಂದಿರುವ ಕಪ್ಪು ಹತ್ತಿ ಮಣ್ಣಿಗೆ ಇದು ಸೂಕ್ತವಾಗಿರುತ್ತದೆ. CSV-29 ವಿಧದ ಗುಣಮಟ್ಟವೂ ಇದೇ ಆಗಿದೆ.
  • ಹಿಂದಿನ M-35-1 ಗಿಂತ ಈ ಪ್ರಭೇದಗಳು ಉತ್ತಮವಾಗಿವೆ.
  • ಹೊಸ ತಳಿಯು 8-10 ಕ್ವಿಂಟಾಲ್ ಧಾನ್ಯಗಳು ಮತ್ತು 22-25 ಕ್ವಿಂಟಾಲ್ ಮೇವು ನೀಡಬಹುದು.
  • ಮೇವು ಹೆಚ್ಚು ತೇವಾಂಶವನ್ನು ಹೊಂದಿರುವ ಕಾರಣ, ಇದು ಜಾನುವಾರುಗಳಿಗೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ.
  • ಹೆಚ್ಚಿನ ಇಳುವರಿ ನೀಡುವುದರ ಜೊತೆಗೆ, ತಳಿಗಳು ಕೀಟ-ನಿರೋಧಕವೂ ಆಗಿವೆ’.
  • ಸದ್ಯ, ಹಿಟ್ಟಿನಹಳ್ಳಿ ಗ್ರಾಮದ ಬಳಿ ಇರುವ ಕೇಂದ್ರದಲ್ಲಿ ತಳಿಗಳು ಲಭ್ಯವಿದೆ.