Published on: January 14, 2023

ಜೋಶಿಮಠ ಮತ್ತು ಇಸ್ರೊ

ಜೋಶಿಮಠ ಮತ್ತು ಇಸ್ರೊ


ಸುದ್ದಿಯಲ್ಲಿ ಏಕಿದೆ? ಉತ್ತರಾಖಂಡದ ಭೂಕುಸಿತ ವಲಯವಾಗಿ ಪರಿಗಣಿಸಿರುವ ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ವೇಗವಾಗಿ ಕುಸಿದಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆ ಮಾಡಿರುವ ಕಾರ್ಟೊಸ್ಯಾಟ್ -2 ಎಸ್ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ.


ಮುಖ್ಯಾಂಶಗಳು

  • ಜೋಶಿಮಠದಲ್ಲಿ ಜನವರಿ 2ರಂದು ಸಂಭವಿಸಿದ ಭೂಕುಸಿತದಿಂದ ಪಟ್ಟಣದ ಜನವಸತಿ ಪ್ರದೇಶದ ಕುಸಿಯುವಿಕೆ ವೇಗ ತೀವ್ರಗೊಮಂಡಿದೆ.
  • ಹಿಮಾಲಯ ಪರ್ವತಶ್ರೇ ಣಿಯ ಈ ಪಟ್ಟಣದಲ್ಲಿ 2022 ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಕುಸಿತ ನಿಧಾನದಲ್ಲಿತ್ತು.
  • ಈ ಅವಧಿಯಲ್ಲಿ 8.9 ಸೆಂ.ಮೀಯಷ್ಟು ಕುಸಿದಿರುವುದು ಇಸ್ರೊದ ರಾಷ್ಟ್ರೀ ಯ ದೂರಸಂವೇದಿ ಕೇಂದ್ರದ (ಎನ್ಆರ್ಎಸ್ಸಿ) ಪ್ರಾಥಮಿಕ ಅಧ್ಯಯನದಲ್ಲಿ ಕಂಡುಬಂದಿತ್ತು.
  • ಆದರೆ, 2022ರ ಡಿಸೆಂಬರ್ 27ರಿಂದ 2023ರ ಜ.8ರ ನಡುವೆ ಭೂ ಕುಸಿತದ ವೇಗ ತೀವ್ರಗೊಂಡಿದೆ. ಕೇವಲ 12 ದಿನಗಳಲ್ಲಿ ವ್ಯಾಪಕ ಪ್ರಮಾಣದ ಕುಸಿತವಾಗಿದೆ. ‘ಈ ಪ್ರದೇಶವು ಕೆಲವೇ ದಿನಗಳಲ್ಲಿ 5 ಸೆಂ.ಮೀ. ಕುಸಿದಿದೆ. ಇದರ ವ್ಯಾಪ್ತಿ ವಾಸಸ್ಥಳ ಹೆಚ್ಚು ಆವರಿಸಿದೆ. ಆದರೆ, ಇದು ಪಟ್ಟಣದ ಕೇಂದ್ರ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಭೂಕುಸಿತದ ಮುಕುಟ ಭಾಗ 2,180 ಮೀಟರ್ ಎತ್ತರದಲ್ಲಿ ಜೋಶಿಮಠ-ಔಲಿ ರಸ್ತೆ ಬಳಿಯ ವಸತಿ ಸ್ಥಳದಲ್ಲಿ ಗುರುತಿಸಲಾಗಿದೆ’ ಎಂದು ಎನ್ಆರ್ಎಸ್ಸಿ ವರದಿ ಹೇಳಿದೆ.
  • ಇಸ್ರೊ ಬಿಡುಗಡೆ ಮಾಡಿರುವ ಈ ಚಿತ್ರಗಳಲ್ಲಿ ಜೋಶಿಮಠ ಪಟ್ಟಣದ ಕೇಂದ್ರ ಭಾಗ ವ್ಯಾಪಿಸಿರುವ ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಗ ದೇವಸ್ಥಾನ ಭೂಕುಸಿತದ ವಲಯದಲ್ಲಿ ಕಾಣಿಸಿವೆ.

ಕಾರ್ಟೊಸ್ಯಾಟ್-2

  • ಸೂರ್ಯ-ಸಿಂಕ್ರೊನಸ್ ಕಕ್ಷೆಯಲ್ಲಿರುವ ಭೂಮಿಯ ವೀಕ್ಷಣಾ ಉಪಗ್ರಹವಾಗಿದೆ ಮತ್ತು ಕಾರ್ಟೊಸ್ಯಾಟ್ ಸರಣಿಯ ಉಪಗ್ರಹಗಳಲ್ಲಿ ಎರಡನೆಯದು.ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿಸಿ, ಉಡಾವಣೆ ಮಾಡಿದೆ ಮತ್ತು ನಿರ್ವಹಿಸುತ್ತಿದೆ.
  • ಉಡಾವಣಾ ದಿನಾಂಕ: 10 ಜನವರಿ 2007
  • ಕಕ್ಷೆಯ ಎತ್ತರ: 630 ಕಿ.ಮೀ
  • ಉಡಾವಣಾ ಸ್ಥಳ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
  • ತಯಾರಕ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ