Published on: July 5, 2024
ಝೀಕಾ ವೈರಸ್
ಝೀಕಾ ವೈರಸ್
ಸುದ್ದಿಯಲ್ಲಿ ಏಕಿದೆ? ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಝೀಕಾ ವೈರಸ್ನ ಕೆಲವು ಪ್ರಕರಣಗಳು ಪತ್ತೆಯಾದ ಕಾರಣ ಕೇಂದ್ರ ಆರೋಗ್ಯ ಸಚಿವಾಲಯವು ದೇಶದಾದ್ಯಂತ ಎಲ್ಲ ರಾಜ್ಯಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ.
ಮುಖ್ಯಾಂಶಗಳು
- ಪುಣೆ, ಕೊಲ್ಹಾಪುರ ಮತ್ತು ಸಂಗಮ್ನರ ನಲ್ಲಿ ತಲಾ ಒಬ್ಬರಲ್ಲಿ ಈ ವೈರಸ್ ಕಂಡುಬಂದಿದೆ
- ಗರ್ಭಿಣಿಯರ ಮೇಲೆ ಹೆಚ್ಚಿನ ನಿಗಾ, ಈ ಸೋಂಕು ದೃಢಪಟ್ಟ ತಾಯಂದಿರ ಭ್ರೂಣದ ಬೆಳವಣಿಗೆ ಬಗ್ಗೆ ಮೇಲ್ವಿಚಾರಣೆ, ಈಡಿಸ್ ಸೊಳ್ಳೆಗಳ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಅಲ್ಲದೆ ಇದರ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ಸೂಚಿಸಿದೆ
- ಝೀಕಾ ವೈರಸ್ ಪ್ರಕರಣಗಳು ಪತ್ತೆಯಾದ ಕೂಡಲೇ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (ಐಡಿಎಸ್ಪಿ) ಮತ್ತು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕೇಂದ್ರಕ್ಕೆ (ಎನ್ವಿಬಿಡಿಸಿಪಿ) ತಕ್ಷಣವೇ ವರದಿ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ.
ಝಿಕಾ ವೈರಸ್
- ಈಡಿಸ್ ಸೊಳ್ಳೆಯಿಂದ ಡೆಂಗಿ, ಚಿಕೂನ್ ಗುನ್ಯ ಹಾಗೂ ಝೀಕಾ (ಮಿದುಳು ಬೆಳವಣಿಗೆಗೆ ಸಮಸ್ಯೆ) ಸೋಕುಗಳು ಹರಡುತ್ತವೆ.
- ಝೀಕಾ ವೈರಸ್, ಸೊಳ್ಳೆಯಿಂದ ಹರಡುವ ಫ್ಲೇವಿವೈರಸ್, ಇದು ಪ್ರಾಥಮಿಕವಾಗಿ ಈಡಿಸ್ ಸೊಳ್ಳೆಗಳಿಂದ, ವಿಶೇಷವಾಗಿ ಈಡಿಸ್ ಈಜಿಪ್ಟಿಯಿಂದ ಹರಡುತ್ತದೆ.
- ಅಲ್ಲದೆ, ಇದು ಗರ್ಭಾವಸ್ಥೆಯಲ್ಲಿ ತಾಯಿಯಿಂದ ಭ್ರೂಣಕ್ಕೆ, ಲೈಂಗಿಕ ಸಂಪರ್ಕ, ರಕ್ತ ಮತ್ತು ರಕ್ತದ ಉತ್ಪನ್ನಗಳ ವರ್ಗಾವಣೆಯ ಮೂಲಕವೂ ಹರಡಬಹುದು.
- ಇದು ಮಾರಣಾಂತಿಕವಲ್ಲದಿದ್ದರೂ, ಗರ್ಭಿಣಿಯರಿಗೆ ಜನಿಸುವ ಶಿಶುಗಳಲ್ಲಿ ‘ಮೈಕ್ರೊಸೆಫಾಲಿ’ (ತಲೆಯು ನಿರೀಕ್ಷೆಗಿಂತ ಚಿಕ್ಕದಾಗಿರುವ ಸ್ಥಿತಿ) ಬಂದೆರಗಬಹುದು.
- ಈ ವೈರಸ್ ಆರ್ ಏನ್ ಎ ಜೀನೋಮ್ ಅನ್ನು ಹೊಂದಿದೆ, ಹೀಗಾಗಿ ರೂಪಾಂತರ ಹೊಂದಲು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
- ಝಿಕಾ ವೈರಸ್ ಆಫ್ರಿಕನ್ ಮತ್ತು ಏಷ್ಯನ್ ಎಂಬ ಎರಡು ವಂಶಾವಳಿಗಳನ್ನು ಹೊಂದಿದೆ ಎಂದು ಜೀನೋಮಿಕ್ ಅಧ್ಯಯನಗಳು ಸೂಚಿಸಿವೆ.
- ರೋಗಲಕ್ಷಣಗಳು: ಜ್ವರ, ಕೀಲು ನೋವು, ಸ್ನಾಯು ನೋವು ಮತ್ತು ತಲೆನೋವು 2 ರಿಂದ 7 ದಿನಗಳವರೆಗೆ ಇರುತ್ತದೆ.
ಹಿನ್ನೆಲೆ: ಸೋಂಕಿತ ಮಂಗಗಳಿಂದ ಉಗಾಂಡಾದ ಝಿಕಾ ಅರಣ್ಯದಲ್ಲಿ 1947 ರಲ್ಲಿ ಕಂಡುಹಿಡಿಯಲಾಯಿತು, ಮೊದಲ ಮಾನವ ಪ್ರಕರಣ 1952 ರಲ್ಲಿ ಉಗಾಂಡಾ ಮತ್ತು ತಾಂಜಾನಿಯಾದಲ್ಲಿ ದಾಖಲಾಗಿವೆ.