Published on: November 26, 2021

ಟಿಹೆಚ್ಇ ಜಾಗತಿಕ ಉಪಯೋಗಾರ್ಹತೆ ಶ್ರೇಣಿ

ಟಿಹೆಚ್ಇ ಜಾಗತಿಕ ಉಪಯೋಗಾರ್ಹತೆ ಶ್ರೇಣಿ

ಸುದ್ಧಿಯಲ್ಲಿ ಏಕಿದೆ ?  ಮಾನವಸಂಪನ್ಮೂಲ ಸಲಹಾ ಸಂಸ್ಥೆ (ಹೆಚ್ ಆರ್ ಕನ್ಸಲ್ಟೆನ್ಸಿ) ಎಮರ್ಜಿಂಗ್ ನಡೆಸಿರುವ ಹಾಗೂ ಟೈಮ್ಸ್ ಉನ್ನತ ಶಿಕ್ಷಣ (ಟಿಹೆಚ್ಇ) ಪ್ರಕಟಿಸಿರುವ ಜಾಗತಿಕ ಉದ್ಯೋಗಾರ್ಹತೆ ಶ್ರೇಣಿ ಹಾಗೂ ಸಮೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಪ್ರವೇಶ ಪಡೆದಿದೆ.

ಮುಖ್ಯಾಂಶಗಳು

  • ದೆಹಲಿ ಐಐಟಿ ನಂತರದ ಸ್ಥಾನದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ ಸಿ) ಇದ್ದು ಜಾಗತಿಕ ಮಟ್ಟದಲ್ಲಿ 61 ನೇ ಸ್ಥಾನ ಗಳಿಸಿದೆ.
  • ನೇಮಕಾತಿ ಮಾಡುವವರ ಪ್ರಕಾರ ಸಮೀಕ್ಷೆಯಲ್ಲಿ ವಿಶ್ವದ ಟಾಪ್ 250 ವಿವಿಗಳನ್ನು ಪಟ್ಟಿ ಮಾಡಲಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯ 249 ನೇ ಸ್ಥಾನದಲ್ಲಿದೆ. ಭಾರತೀಯ ಸಂಸ್ಥೆಗಳ ಪೈಕಿ ದೆಹಲಿ-ಐಐಟಿ 27 ನೇ ಸ್ಥಾನದಲ್ಲಿದ್ದು, ಕಳೆದ ವರ್ಷ ಜಾಗತಿಕ ಮಟ್ಟದ ಶ್ರೇಣಿಯಲ್ಲಿ ಗುರುತಿಸಿಕೊಂಡಿದ್ದ ಭಾರತದ ಇನ್ನೂ 6 ವಿವಿಗಳು ಸರಾಸರಿ 20 ಸ್ಥಾನಗಳು ಮೇಲೇರಿವುದು ಗಮನಾರ್ಹ ಅಂಶವಾಗಿದೆ.
  • ಚೀನಾ, ಮೇನ್ ಲ್ಯಾಂಡ್, ಫ್ರಾನ್ಸ್, ಸ್ಪೇನ್ ಮಾದರಿಯಲ್ಲಿ ಭಾರತವೂ ಸಹ ಉದ್ಯೋಗಾರ್ಹತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶವೆಂದು ಪರಿಗಣಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.