Published on: January 13, 2023

ಟೆಥಾನ್ ಕುಗ್ರಾಮ

ಟೆಥಾನ್ ಕುಗ್ರಾಮ


ಸುದ್ದಿಯಲ್ಲಿ ಏಕಿದೆ? ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಮೊದಲ ಬಾರಿಗೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ದೂರದ ಮತ್ತು ಗುಡ್ಡಗಾಡು ಟೆಥಾನ್ ಹಳ್ಳಿಯ ಗ್ರಾಮಕ್ಕೆ ವಿದ್ಯುತ್ ತಲುಪಿದೆ


ಮುಖ್ಯಾಂಶಗಳು

  • ಪ್ರಧಾನಮಂತ್ರಿ ಅಭಿವೃದ್ಧಿ ಕಾರ್ಯಕ್ರಮ ‘ಹರ್ ಘರ್ ಬಿಜ್ಲಿ ಯೋಜನೆ’ ಅಡಿಯಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
  • ಈ ಕಾರ್ಯಕ್ರಮವನ್ನು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು.
  • ಇಡೀ ಗ್ರಾಮಕ್ಕೆ ವಿದ್ಯುದ್ದೀಕರಣಕ್ಕಾಗಿ 63 ಕೆವಿ ಟ್ರಾನ್ಸ್‌ಫಾರ್ಮರ್, 38 ಎಚ್‌ಟಿ ಪೋಲ್‌ಗಳು ಮತ್ತು 57 ಎಲ್‌ಟಿ ಪೋಲ್‌ಗಳನ್ನು ಟೆಥಾನ್ ಗ್ರಾಮದಲ್ಲಿ ಅಳವಡಿಸಲಾಗಿದೆ.
  • ಟೆಥಾನ್ ಗುಡ್ಡಗಾಡು ಗ್ರಾಮವಾಗಿರುವುದರಿಂದ ವಿದ್ಯುದ್ದೀಕರಣ ಮಾಡುವುದು ತುಂಬಾ ಕಠಿಣದ ಕೆಲಸವಾಗಿತ್ತು.

‘ಹರ್ ಘರ್ ಬಿಜ್ಲಿ ಯೋಜನೆ

  • ಜಾರಿ ಮಾಡಿದವರು: ಕೇಂದ್ರ ಸರ್ಕಾರ
  • ಈ ಯೋಜನೆಯ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವ ಲಕ್ಷಾಂತರ ಜನರ ಮನೆಗಳಿಗೆ ಕಡಿಮೆ ಬೆಲೆಯಲ್ಲಿ ಅಥವಾ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತಿದೆ.
  • ಈ ಯೋಜನೆಯನ್ನು ಜನರಿಗೆ ಸುಲಭವಾಗಿಸಲು, ‘ಇ-ಸಂಯೋಜನ್ ಮೊಬೈಲ್ ಅಪ್ಲಿಕೇಶನ್’ ಅನ್ನು ಸಹ ಆರಂಭಿಸಲಾಗಿದೆ.
  • ಈ ಯೋಜನೆಯ ಮೂಲಕ ರೈತರಿಗೆ ವಿದ್ಯುತ್ ಅಗತ್ಯವಿರುವಲ್ಲಿ ವಿದ್ಯುತ್ ಒದಗಿಸಲಾಗುತ್ತದೆ ಮತ್ತು ಅವರ ಕೊಳವೆಬಾವಿ ಸಂಬಂಧಿತ ಸಮಸ್ಯೆಗಳನ್ನು ಕೂಡ ಪರಿಹರಿಸಲಾಗುತ್ತದೆ. ಇದರಿಂದ ಕೃಷಿ ಉತ್ಪಾದನೆ ಕೂಡ ಹೆಚ್ಚುತ್ತದೆ. ಅವರ ಆರ್ಥಿಕ ಸ್ಥಿತಿಯನ್ನು ಸಹ ಬಲಪಡಿಸಬಹುದು.

ಉದ್ದೇಶ

  • ದೇಶದಲ್ಲಿ ವಾಸಿಸುವ ಜನರಿಗೆ ಸುಲಭವಾಗಿ ವಿದ್ಯುತ್ ಸಂಪರ್ಕವನ್ನು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅರ್ಹತೆ

  • ವ್ಯಕ್ತಿಯು ದೇಶದ ಖಾಯಂ ನಿವಾಸಿಯಾಗಿರಬೇಕು.
  • ವ್ಯಕ್ತಿಯು ಎಪಿಎಲ್, ಬಿಪಿಎಲ್ ಕುಟುಂಬ ಅಥವಾ ರೈತನಾಗಿರಬೇಕು.
  • ಉಚಿತ ವಿದ್ಯುತ್‌ ಪಡೆಯಬೇಕೆಂದರೆ, ಮನೆಯಲ್ಲಿರುವ ಯಾವುದೇ ವ್ಯಕ್ತಿ ಸರ್ಕಾರಿ ಕೆಲಸದಲ್ಲಿ ಇರಬಾರದು
  • ಬಡತನ ರೇಖೆಗಿಂತ ಕೆಳಗಿರುವ ಜನರು ಯೋಜನೆಗೆ ಅರ್ಹರು.
  • ಆದಾಯ ತೆರಿಗೆ ಪಾವತಿಸುವ ಜನರು ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ.