Published on: January 3, 2022

ಟೆಲಿ-ಲಾ ಸೇವೆ

ಟೆಲಿ-ಲಾ ಸೇವೆ

ಸುದ್ಧಿಯಲ್ಲಿ ಏಕಿದೆ ?   ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಟೆಲಿ ಲಾ ಸೇವೆಯಿಂದ ಗ್ರಾಮೀಣ ಪ್ರದೇಶದ ಜನರು, ನಿರ್ಗತಿಕರು ಅತ್ಯಂತ ಅಗ್ಗದಲ್ಲಿ ಕಾನೂನು ಸಲಹೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

  • ಭಾರತ ಸರ್ಕಾರದ ಕಾನೂನು ಸಚಿವಾಲಯ ವತಿಯಿಂದ ಟೆಲಿ – ಲಾ ಮುಖಾಂತರ ಗ್ರಾಮೀಣ ಪ್ರದೇಶದ ಜನರು, ನಿರ್ಗತಿಕರು. ಮಹಿಳೆಯರು. ವಿಕಲಾಂಗರು ಕಾರಾಗೃಹ ವಾಸಿಗಳು ಸೇರಿದಂತೆ ವಿವಿಧ ವರ್ಗದ ಜನರಿಗೆ ಕಾನೂನು ಸಲಹೆ ಕಲ್ಪಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
  • ದೇಶದಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳ ಮುಖಾಂತರ ದೂರದ ಪ್ರದೇಶಗಳಲ್ಲಿರುವ ಗ್ರಾಮೀಣ ಪ್ರದೇಶದ ಜನರು ತಮ್ಮ ಮೊಬೈಲ್ ನ ಕಾನೂನು ಸಲಹೆ ಆಪ್ ಮೂಲಕ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವರು ಸಾಮಾನ್ಯ ಸೇವಾ ಕೇಂದ್ರಗಳ ಮುಖ್ಯಸ್ಥರು ಕಾನೂನು ಸಲಹೆಗಳನ್ನು ಪಡೆಯಲು ಸಹಕಾರಿಯಾಗಲಿದೆ
  • ಮೈಸೂರಿನಲ್ಲಿ ಭಾರತ ಸರ್ಕಾರದ ಕಾನೂನು ಸಚಿವಾಲಯದ ವತಿಯಿಂದ ಟೆಲಿ ಲಾ ಹಾಗೂ ಲಾ ಅಪ್ ಗೆ ಚಾಲನೆ ನೀಡಲಾಗಿದೆ.

ಏನಿದು ಟೆಲಿ ಲಾ ಯೋಜನೆ ?

  • ‘ಕೇಂದ್ರ ಕಾನೂನು ಸಚಿವಾಲಯ ದೀನ ದಲಿತರು ಹಾಗೂ ಬಡವರಿಗಾಗಿ ತಂದಿರುವ ಟೆಲಿ ಲಾ ಯೋಜನೆಯು ತಾವಿರುವ ಜಾಗದಲ್ಲೇ ವಕೀಲರನ್ನು ಸಂಪರ್ಕಿಸಿ ಉಚಿತವಾಗಿ ಕಾನೂನು ಸಲಹೆಗಳನ್ನು ಪಡೆಯಬಹುದು ಇದರಿಂದ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಅವಶ್ಯಕತೆಯಿಲ್ಲ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ತಮಗೆ ಅವಶ್ಯವಿರುವ ವಕೀಲರ ಮೂಲಕ ಕಾನೂನುಗಳನ್ನು ತಿಳಿದುಕೊಳ್ಳಬಹುದು ಹಾಗೂ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು

ಯಾರೆಲ್ಲ ಈ ಸೌಲಭ್ಯ ಪಡೆದುಕೊಳ್ಳಬಹುದು ?

  • ಟೆಲಿ ಲಾ ಸೇವೆಯು ಎಲ್ಲರೂ ಪಡೆದುಕೊಳ್ಳಬಹುದು .ಹದಿನೆಂಟು ವರ್ಷ ಮೇಲ್ಪಟ್ಟ ಯುವತಿಯರು, ಮಹಿಳೆಯರು ಹಾಗೂ ದೌರ್ಜನ್ಯಕ್ಕೊಳಗಾದವರು ವಿಪತ್ತುಗಳಲ್ಲಿ ನೋವಿಗೊಳಗಾದವರಿಗೆ ಉಚಿತವಾಗಿ ಸೇವೆ ಪಡೆಯಬಹುದು ಇತರರಿಗೆ ಮೂವತ್ತು ರೂ ಗಳಲ್ಲಿ ಕಾನೂನು ಸೇವೆಗಳನ್ನು ಪಡೆಯಬಹುದು

ಯೋಜನೆಯ ಉದ್ದೇಶ

  • ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ದೃಷ್ಟಿಯಿಂದ ಕಾನೂನು ಸಚಿವಾಲಯ ಟೆಲಿ ಲಾ ಅನುಷ್ಠಾನಗೊಳ್ಳುತ್ತಿದೆ